You are here
Home > ವಿಶೇಷ > ಅಯ್ಯೋ ದೇವರೇ ನೀನೇ ಇದ್ರೆ ಇಂಥ ಶಾಪ ಯಾರಿಗೂ ಕೊಡಬೇಡ!

ಅಯ್ಯೋ ದೇವರೇ ನೀನೇ ಇದ್ರೆ ಇಂಥ ಶಾಪ ಯಾರಿಗೂ ಕೊಡಬೇಡ!

ಉಪಸಂಪಾದಕ
ಮಾಲೂರು ಜಿ.ಶಶಿಕುಮಾರ್ ಶೆಟ್ಟಿ

ಸಾವು ಯಾವಾಗ ಬರುತ್ತೆ, ಯಾವ ರೀತಿಯಾದ್ರೂ ಬರಬಹುದು. ಆದ್ರೆ ಸಾವಿಗೂ ಒಂದು ಅರ್ಥವಿರಬೇಕು ಅಲ್ವಾ. ಏನೇ ಹೇಳಿ ದೇವ್ರು ಹಣೆ ಮೇಲೆ ನಿನ್ ಜೀವನ ಇಷ್ಟೇ ಅಷ್ಟೇ ಅಂತ ಒಂದು ಸಲ ಬರೆದ್ರೆ ಸಾಕು ಅವ್ನು ಕಥೆ ಮುಗಿತು.

ಹೌದು ದೋಣಿಯಲ್ಲಿ ಸಂಚರಿಸುತ್ತಿದ್ದ ಸುಮಾರು 22 ಜನರು ಮೃತಪಟ್ಟಿದ್ದಾರೆ. ಅಯ್ಯೋ ಪಾಪ ಅವ್ರೆಲ್ಲಾ ಅದು ಏನೇನು ಕನಸುಗಳ್ನ ಕಟ್ಟಿಕೊಂಡು ಆ ದೋಣಿಯಲ್ಲಿ ಸಾಗ್ತಾ ಇದ್ರೋ ಗೊತ್ತಿಲ್ಲ ಆದ್ರೆ ಉತ್ತರ ಪ್ರದೇಶದ ಯಮುನಾ ನದಿಯಲ್ಲಿ ದೋಣಿ ಮುಳುಗಿ 22 ಜನರು ಸಾವನ್ನಪ್ಪಿದ್ದಾರೆ.

ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ದೋಣಿ ಯಮುನಾ ನದಿಯಲ್ಲಿ ಮುಳುಗಿದೆ ಅಂತ ಪೊಲೀಸರು ತಿಳಿಸಿದ್ದಾರೆ. ದೋಣಿ ಬಾಘಾಪತ್ನಿಂದ ಹರಯಾಣಕ್ಕೆ ತೆರಳುತ್ತಿದ್ದರು. ದೋಣಿಯಲ್ಲಿ 60 ಜನ ಪ್ರಯಾಣಿಕರು ಇದ್ದರು ಎನ್ನಲಾಗ್ತಿದೆ.

ಅಯ್ಯೋ ದೇವರೇ ನೀನೇ ಇದ್ದರೇ ಇಂಥ ಶಾಪ ಯಾರಿಗೂ ಕೊಡಬೇಡ ದಯವಿಟ್ಟು, ಕೋಟಿ ಕನಸುಗಳನ್ನು ಇಟ್ಕೊಂಡು ದೋಣಿ ಯಲ್ಲಿ ಸಾಗಿ ಮನೆಗೆ ಹೋಗಿ ತಮ್ಮ ಮಕ್ಕಳ ಜತೆ, ಹೆಂಡತಿ ಜತೆ, ಅಪ್ಪ ಅಮ್ಮ ಜತೆ, ಗೆಳೆಯರ ಜತೆ ಇರಬಹುದು ಅಂತ ಅಂದುಕೊಂಡ್ರೋರ್ನ ಸೀದಾ ನಿನ್ನ ಬಳಿ ಕರೆಸಿಕೊಂಡಿದ್ದೀಯಾ..

ಇನ್ನೂ ಇಲ್ಲಿಯವರೆಗೂ 22 ಮೃತ ದೇಹಗಳನ್ನು ಹೊರ ತೆಗೆಯಲಾಗಿದೆ. ನಾಪತ್ತೆಯಾಗಿರುವ 8 ಜನರಿಗಾಗಿ ಶೋಧಕಾರ್ಯ ನಡೆಸಲಾಗುತ್ತಿದೆ ಅಂತ ಪೊಲಿಸರು ತಿಳಿಸಿದ್ದಾರೆ.

ಅಂದಹಾಗೇ ದೋಣಿ ಮುಳುಗಿದ ಕೂಡಲೇ 30 ಜನ ಪ್ರಯಾಣಿಕರು ಈಜಿ ದಡ ಸೇರಿದ್ದಾರೆ. ಸಾವಿನ ಸಂಖ್ಯೆ ಇನ್ನು ಹೆಚ್ಚಾಗುವ ಸಾಧ್ಯತೆಗಳಿವೆ ಅಂತ ಪೊಲೀಸರು ತಿಳಿಸಿದ್ದಾರೆ.

ಆದ್ರೆ ಏನೇ ಹೇಳಿ ಸಾವಿಗೆ ಒಂದು ಅರ್ಥಪೂರ್ಣವಾದ ಒಂದು ಕಾರಣ ವಿರಬೆಕು, ಅದ್ನ ಬಿಟ್ಟು ತಮ್ಮ ಪಾಡಿಗೆ ತಾವು ಸಂಚಾರ ಮಾಡುತ್ತಿರುವಾಗ ಜವರಾಯ ಬಂದು ಕರೆದುಕೊಂಡು ಹೋಗಿಬಿಟ್ರೆ ಹೆಂಗೆ ಸ್ವಾಮಿ. ಅದ್ರಲ್ಲಿ ಇನ್ನೂ ಬದುಕಿ ಬಾಳಬೇಕಾಗಿದ್ದವ್ರು ಇದ್ರು ಎನ್ನಲಾಗಿದೆ.

Leave a Reply