You are here
Home > ರಾಜಕೀಯ > ಉಮಾಶ್ರೀ ವಿರುದ್ಧ ಗೆಲ್ತಾರಾ ಬಿಎಸ್‍ವೈ! ಅಗ್ನಿ ಪರೀಕ್ಷೆ!

ಉಮಾಶ್ರೀ ವಿರುದ್ಧ ಗೆಲ್ತಾರಾ ಬಿಎಸ್‍ವೈ! ಅಗ್ನಿ ಪರೀಕ್ಷೆ!

ಉಪಸಂಪಾದಕ
ಮಾಲೂರು ಜಿ.ಶಶಿಕುಮಾರ್ ಶೆಟ್ಟಿ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನವ್ರು ಕೇಂದ್ರ ಬಿಜೆಪಿ ವರಿಷ್ಠರಿಗೆ ಮಣಿದು ಮನಸ್ಸು ಇಲ್ಲವೆಂದ್ರೂ ಉತ್ತರ ಕರ್ನಾಟಕದಿಂದ ಸ್ಪರ್ಧಿಸಲು ಸಮ್ಮತಿಸಿದ್ದಾರೆ. ಹೌದು ಬಾಗಲಕೋಟೆ ಜಿಲ್ಲೆ ತೇರದಾಳ ವಿಧಾನಸಭಾ ಕ್ಷೇತ್ರದಿಂದ ಸ್ಫರ್ಧಿಸುವುದು ಬಹುತೇಕ ಖಚಿತವಾಗಿದೆ.

ಅಂದಹಾಗೇ ಕಾಂಗ್ರೆಸ್‍ನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಉಮಾಶ್ರೀ ರವ್ರು ಸಹ ಇದೇ ಕ್ಷೇತ್ರದಿಂದ ಅಖಾಡಕ್ಕಿಳಿಯಲಿದ್ದಾರೆ. ಹೀಗಾಗಿ 2018ರ ವಿಧಾನಸಭೆ ಚುನಾವಣೆಯಲ್ಲಿ ತೇರದಾಳ ವಿಧಾನಸಭಾ ಕ್ಷೇತ್ರ ರಾಷ್ಟ್ರದ ಗಮನ ಸೆಳೆಯಲಿದೆ.

ಕೇಂದ್ರ ಸಚಿವ ಹಾಗೂ ಕರ್ನಾಟಕ ಬಿಜೆಪಿ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವೇಡ್ಕರ್ ನಿವಾಸದಲ್ಲಿ ನಿನ್ನೆ ನಡೆದ ಸಭೆಯಲ್ಲಿ ಉತ್ತರ ಕರ್ನಾಟಕದಿಂದಲೇ ಯಡಿಯೂರಪ್ಪ ಸ್ಪರ್ಧಿಸಬೇಕೆಂದು ಸೂಚನೆ ನೀಡಿದ್ದಾರೆ.

ಅಂದಹಾಗೇ ಈ ಭಾಗದಿಂದ ಸ್ಪರ್ಧಿಸಿದ್ರೆ ಲಿಂಗಾಯಿತರ ಪ್ರಾಬಲ್ಯವಿರುವ ಬಾಗಲಕೋಟೆ, ವಿಜಾಪುರ, ಬೆಳಗಾವಿ, ಹಾವೇರಿ, ಗದಗ ಶೆರಿದಂತೆ ಇನ್ನಿತರ ಜಿಲ್ಲೆಗಳಲ್ಲಿ ಪಕ್ಷಕ್ಕೆ ಅನುಕೂಲವಗುತ್ತೆ ಎಂ ಸಲಹೆಯನ್ನಾ ವರಿಷ್ಠರು ನೀಡಿದ್ದಾರೆ.

ಆದ್ರೆ ಯಡಿಯೂರಪ್ಪಗೆ ರಾಜಕೀಯವಾಗಿ ಎಲ್ಲವನ್ನೂ ನೀಡಿದ ಶಿವಮೊಗ್ಗ ಜಿಲ್ಲೆ, ಶಿಕಾರಿಪುರ ಕ್ಷೇತ್ರವನ್ನು ಬಿಟ್ಟು ಬೇರೊಂದು ಕ್ಷೇತ್ರಕ್ಕೆ ವಲಸೆ ಹೋಗಲು ಮನಸ್ಸು ಒಪ್ಪುತ್ತಿಲ್ಲ ಎಂಬ ವಾದವನ್ನು ಬಿಎಸ್‍ವೈ ವರಿಷ್ಠರ ಮುಂದಿಟ್ಟರು.

ಇದನ್ನು ಒಪ್ಪದ ಕೇಂದ್ರ ನಾಯಕರು ನೀವು ಶಿವಮೊಗ್ಗ ಜಿಲ್ಲೆಯ ಯಾವುದೇ ಕ್ಷೇತ್ರದಿಂದ ನಿಂತರೂ ಗೆಲುವಿನ ಬಗ್ಗೆ ನಮಗೆ ಸಂದೇಹವಿಲ್ಲ. ಆದ್ರೆ ಪ್ರತ್ಯೇಕ ಲಿಂಗಾಯಿತ ಧರ್ಮ ವಿವಾದದಿಂದ ಪಕ್ಷ ಅತಿಯಾಗಿ ನಂಬಿಕೊಂಡಿರುವ ಪ್ರಬಲ ಸಮುದಾಯದ ಮತಗಳನ್ನು ಸೆಳೆಯಲು ಸಾಧ್ಯವಾಗುವುದಿಲ್ಲ ಅಂತ ಆತಂಕ ವ್ಯಕ್ತಪಡಿಸಿದ್ದಾರೆ.

ಇನ್ನು ಈ ಕ್ಷೇತ್ರದಿಂದ 2008ರಲ್ಲಿ ಗೆದ್ದಿದ್ದ ಮಾಜಿ ಶಾಸಕ ಸಿದ್ದು ಸವದಿಗೆ ವಿಧಾನ ಪರಿಷತ್‍ಗೆ ಆಯ್ಕೆ ಮಾಡುವ ಭರವಸೆ ನೀಡಲಾಗಿದೆ. ಬಿಎಸ್‍ವೈ ನಿಂತೆ ತಾವು ಕ್ಷೇತ್ರ ತ್ಯಾಗ ಮಾಡಲು ಸಿದ್ದರೆಂದು ಸವದಿ ಹೇಳಿದ್ದಾರೆ.

Leave a Reply