You are here
Home > ಅಂಕಣ > ಎಲ್ಲಾ ಓಕೆ ಆದ್ರೆ ಇಷ್ಟು ನ್ಯೂಸ್ ಚಾನಲ್ಸ್ ಯಾಕೆ?!ಇರೋವ್ ಎಷ್ಟು? ಬರ್ತಾ ಇರೋವ್ ಎಷ್ಟು?

ಎಲ್ಲಾ ಓಕೆ ಆದ್ರೆ ಇಷ್ಟು ನ್ಯೂಸ್ ಚಾನಲ್ಸ್ ಯಾಕೆ?!ಇರೋವ್ ಎಷ್ಟು? ಬರ್ತಾ ಇರೋವ್ ಎಷ್ಟು?

ಉಪಸಂಪಾದಕ
ಮಾಲೂರು ಜಿ.ಶಶಿಕುಮಾರ್ ಶೆಟ್ಟಿ

ಒಂದು ಕಾಲ ಇತ್ತು ಆಗ ಚಂದನದಲ್ಲಿ ದಿನಕ್ಕೆ ಅರ್ಧ ಗಂಟೆ ಎಂಬಂತೆ ನ್ಯೂಸ್ ಬರ್ತಾ ಇತ್ತು. ಜನ ಆ ಸಮಯಕ್ಕಾಗಿ ಇರೋ ಬರೋ ಕೆಲಸಗಳು ಮುಗಿಸಿ ಕರೆಕ್ಟ್ ಆಗಿ ಆ ಟೈಂ ಗೆ ಹಾಜರಾಗ್ತಾ ಇದ್ರು. ಅಂದ್ರೆ ನ್ಯೂಸ್ ಕೂಡ ಅಷ್ಟೇ ಚೆನ್ನಾಗಿ ಕೊಡ್ತಾ ಇದ್ರು.

ನಂತರ ದಿನಗಳಲ್ಲಿ ಉದಯ ಟಿವಿಯಲ್ಲಿ ದಿನಕ್ಕೆ ನಾಲ್ಕು ಬಾರೀ ಏನೋ ನ್ಯೂಸ್ ಬರ್ತಾ ಇತ್ತು. ಜನ ಅದಕ್ಕೂ ವೈಟ್ ಮಾಡ್ತಾ ಇದ್ರು. ಬಟ್ ನ್ಯೂಸ್ ಕೂಡ ಅಷ್ಟೇ ಅಚ್ಚುಕಟ್ಟಾಗಿ ಮೂಡಿಬರ್ತಾ ಇತ್ತು ಬಿಡಿ.

ಜನಗಳಿಗೆ ಒಂದು ಕುತೂಹಲ ಇರ್ತಾಯಿತ್ತು, ಇಂದು ಏನಾಗಿದೆ ರಾಜ್ಯದಲ್ಲಿ, ದೇಶದಲ್ಲಿ, ಪ್ರಪಂಚದಲ್ಲಿ ಅಂತ. ಅದಕ್ಕಾಗಿ ನ್ಯೂಸ್‍ಕ್ಕಾಗಿ ಕಾಯ್ತಾ ಇದ್ರು. ಕೆಲವ್ರು ಅಂತೂ ಆ ಅರ್ಧಗಂಟೆ ನ್ಯೂಸ್ ನೋಡಿಯೇ ಊಟ ಮಾಡ್ತಾ ಇದ್ರು, ಇನ್ನೂ ಕೆಲವ್ರು ಮಲಗ್ತಾ ಇದ್ರು.

ಅಂದ್ರೆ ಕೊಡ್ತಾ ಇದ್ದ ಅರ್ಧಗಂಟೆ ಸುದ್ದಿಯಲ್ಲಿ ಸತ್ಯಾಂಶ ಇರುತ್ತೆ ಅಂತ ಜನ ನಂಬ್ತಾ ಇದ್ರು. ರಾಜ್ಯದ ಸರ್ಕಾರದಲ್ಲಿ ಏನೇನು ಆಗಿದೆಯೋ ಎಲ್ಲೋ ಹಳ್ಳಿಯಲ್ಲಿ ಕೋತಿರೋನಿಗೆ ಹೇಗೆ ಗೊತ್ತಾಗುತ್ತೆ ಅಲ್ವಾ. ಅದ್ಕೆ ಜನ ಆ ನ್ಯೂಸ್‍ನ ನಂಬ್ತಾ ಇದ್ರು. ಯಾಕೆಂದ್ರೆ ನಂಬ್ಲೇಬೇಕು ವಿಧಿಯೇ ಇರಲಿಲ್ಲ.

ಆದ್ರೆ 21ನೇ ಶತಮಾನಕ್ಕೆ ಬರೋಣ ಯಪ್ಪಾ.. ಏನ್ ಗುರೂ ಯಾವ್ ನ್ಯೂಸ್ ಚಾನಲ್ಸ್ ನೋಡೋದ್, ಯಾವುದು ಬಿಡೋದ್ ಅಂತ ತಲೆ ಕೆಟ್ಟೋಗಿದೆ. ಜನಗಳಿಗೆ. ಯಾಕೆಂದ್ರೆ ಅಷ್ಟೊಂದು ನ್ಯೂಸ್ ಚಾನಲ್ಸ್ ಗಳಿವೆ.

ಮೊದಲಿಗೆ ಟಿವಿ9 ಅಂತ ಒಂದು 24/7 ಸುದ್ದಿ ವಾಹಿನಿ ಬಂತು. ಜನಗಳಿಗೆ ಒಂದು ತರ ಆಶ್ಚರ್ಯ ಕೂಡ ಆಗಿದ್ದುಂಟು. ಏ ಏನಿದು ದಿನವಿಡೀ ನ್ಯೂಸ್ ಬರುತ್ತೆ ಅಲ್ವಾ ಅಂತ. ಟಿವಿ9 ಕೂಡ ಉತ್ತಮ ಸಮಾಜಕ್ಕಾಗಿ ಅಂತ ಉತ್ತಮವಾಗಿಯೇ ಸುದ್ದಿ ಪ್ರಸಾರ ಮಾಡ್ತಾ ಇತ್ತು ಅಂತ ಜನ ನಂಬಿದ್ದರು.

ಅದಾದ ಮೇಲೆ ಇವತ್ತು ಎಷ್ಟು ನ್ಯೂಸ್ ಚಾನಲ್ಸ್ ಗಳು ಸ್ವಾಮಿ ಇರೋದ್.. ಹಾಗೇ ನೋಡಿದ್ರೆ ಟಿವಿ9, ಪಬ್ಲಿಕ್ ಟಿವಿ, ಸುವರ್ಣನ್ಯೂಸ್, ಸುದ್ದಿ ಟಿವಿ, ಪ್ರಜಾ ಟಿವಿ, ರಾಜ್ ನ್ಯೂಸ್, ಕಸ್ತೂರಿ ನ್ಯೂಸ್, ದಿಗ್ವಿಜಯ ನ್ಯೂಸ್, ಸಮಯ ನ್ಯೂಸ್, ಜನಶ್ರೀ, ಬಿಟಿವಿ, ಈಟಿವಿ, ಇವುಗಳ ಜತೆಗೆ ಉದಯನ್ಯೂಸ್ ಇತ್ತು ಬಟ್ ಯಾಕೋ ಅದ್ರ ಟೈಂ ಸರಿಯಿಲ್ಲ ಮುಚ್ಚುತ್ತಾರಂತೆ ಓಕೆ. ಇವುಗಳ ಜತೆಗೆ ಈಗ ಮತ್ತೆ ಆರಂಭವಾಗ್ತಾ ಇರೋ ಚಾನಲ್ಸ್ ಟಿವಿ5, ಫೋಕಸ್ ಟಿವಿ, ಒನ್ ಕನ್ನಡ, ನ್ಯೂಸ್1 , ಪವರ್ ಕನ್ನಡ, ಸ್ವರಾಜ್ ನ್ಯೂಸ್,  ಇದ್ರ ಜತೆಗೆ ಇತ್ತೀಚೆಗೆ ಫೇಸ್ ಬುಕ್ ನಲ್ಲಿ ಹವಾ ಕ್ರಿಯೇಟ್ ಮಾಡಿರುವ ಯೂತ್ ಸ್ಟಾರ್ಸ್ ಅನ್ನೋ ವೆಬ್ ಚಾನಲ್ ಇನ್ನೇನ್ ಅತೀಶೀಘ್ರದಲ್ಲೇ ಚಾನಲ್ ಆಗ್ತಾ ಇದೆ. ಇನ್ನೂ ಉತ್ತಮ ಸಮಾಜಕ್ಕಾಗಿ ಅಂತ ಪರಿಚಯ ಮಾಡಿ ಟಿವಿ9 ವಾಹಿನಿಯನ್ನಾ ಶಿಖರಕ್ಕೇರಿಸಿದ ರವಿಕುಮಾರ್ ಹಾಗೂ ಮಾರುತಿ ಈಗ ಟಿವಿ9 ತೊರೆದು ಅವ್ರೇ ಇನ್ನೊಂದು ಚಾನಲ್ ಓಪನ್ ಮಾಡ್ತಾರಂತೆ ಅಂತ ಹೊರಗಡೆ ಟಾಕ್ ಇದೆ.

ಖುಷಿಯ ಸಂಗತಿಯೇ ಸರಿ ಯಾಕೆಂದ್ರೆ ಇದ್ದಿದ್ದು ಒಂದು ಚಾನಲ್, ಅದ್ರಲ್ಲೂ ಅರ್ಧಗಂಟೆ ನ್ಯೂಸ್ ಬರ್ತಾ ಇತ್ತು, ಇದರಿಂದ ಜನಗಳಿಗೆ ಸಂಪೂರ್ಣವಾಗಿ ಸುದ್ದಿಯನ್ನಾ ತಲುಪಿಸುವುದಕ್ಕೆ ಸಾಧ್ಯವಾಗ್ತಾ ಇರಲಿಲ್ಲ. ಆದ್ರೆ ಇಂದು ಸಾಕಷ್ಟು ನ್ಯೂಸ್ ಚಾನಲ್ಸ್ ಗಳಿವೆ ಎಲ್ಲಾ ಸುದ್ದಿಗಳು ಜನಗಳಿಗೆ ಮುಟ್ಟಿಸುತ್ತಿವೆ ಎಂಬ ನಂಬಿಕೆ ಇರಬಹುದು.

ಎಲ್ಲಾ ಓಕೆ ಇಷ್ಟು ಚಾನಲ್ಸ್ ಯಾಕೆ ಅಂತ ಜನ ಕೇಳ್ತಾ ಇದ್ದಾರೆ. ಜನಗಳಿಗೆ ತಲೆಕೆಟ್ಟು ಕೆರವಾಗಿಬಿಟ್ಟಿದೆ ಅಂತೆ. ಯಪ್ಪಾ ಯಾವ್ ಚನಲ್ ಗುರೂ ನೋಡೋದ್ ಅಂತ ತಲೆ ಕೆಡಿಸಿಕೊಂಡಿದ್ದಾರೆ.

ಯಾಕೆಂದ್ರೆ ಒಂದೇ ಪ್ರಕರಣದ ಬಗ್ಗೆ ಒಂದು ಚಾನಲ್ ಒಂಥರ ಸುದ್ದಿ ನೀಡ್ತಾ ಇದ್ರೆ, ಇನ್ನೊಂದು ಚಾನಲ್ ಇನ್ನೊಂದು ತರ ಸುದ್ದಿ ಕೊಡ್ತಾ ಇರುತ್ತೆ, ಇನ್ನೂ ಮತ್ತೊಂದು ಚಾನಲ್ ಚೇಂಜ್ ಮಾಡಿದ್ರೆ ಅದ್ರಲ್ಲಿ ಇನ್ನೂ ಡಿಫರೆಂಟ್ ಆಗಿ ನ್ಯೂಸ್ ಬರ್ತಾ ಇರುತ್ತೆ ಅಂತೆ. ನಾವು ಹೇಳ್ತಾ ಇಲ್ಲ. ಜನ ಹೇಳ್ತಾ ಇರೋದ್ನ ನಾವು ಹೇಳೋಕೆ ಪ್ರಯತ್ನ ಮಾಡ್ತಾ ಇದ್ದಿರಿ ಅಷ್ಟೆ.

ಇಷ್ಟಕ್ಕೂ ಜನ ಯಾಕೆ ನ್ಯೂಸ್ ನೋಡ್ತಾರೆ ಹೇಳಿ, ಅಟ್ಲೀಸ್ಟ್ ಒಂದು ಜ್ಞಾನಗೋಸ್ಕರ ಚಾನಲ್ಸ್ ನೋಡ್ತಾರೆ. ಇನ್ನೂ ಕೆಲವ್ರು ಸರಿಯಾದ ಮಾಹಿತಿ ಪಡೆದು ಮುಂದಿನ ದಿನಗಳಲ್ಲಿ ಜನನಾಯಕರನ್ನ ಯಾರನ್ನ ಆಯ್ಕೆ ಮಾಡೋಣ ಅಂತ, ಇನ್ನೂ ಕೆಲವರಿಗೆ ನಂಬಿಕೆ ಇರುತ್ತೆ, ಆದ್ರೆ ನ್ಯೂಸ್ ಚಾನಲ್ಸ್ ಗಳು ಇಂದು ಏನು ಮಾಡ್ತಾ ಇವೆ. ಅವುಗಳ ನಡೆಯನ್ನಾ ನೋಡಿದ್ರೆ ಭಯ ಆಗ್ತಾ ಇದೆ ಅಂತ ಜನ ತಮ್ಮ ಅಳಲನ್ನು ತೋಡಿಕೊಳ್ತಾ ಇದ್ದಾರೆ.

ಇನ್ನೂ ಕೆಲವ್ರು ಅಂತೂ ನೇರವಾಗಿಯೇ ಆರೋಪ ಮಾಡ್ತಾ ಇದ್ದಾರೆ, ಇದು ಈ ಪಕ್ಷದ್ದೂ, ಅದು ಆ ಪಕ್ಷದ್ದು ಅಂತ, ಅಂದ್ರೆ ಯೋಚ್ನೆ ಮಾಡಬೇಕಾಗಿರೋದ್ ಏನ್ ಗೊತ್ತಾ ಜನಗಳ ಮನಸ್ಸಿನಲ್ಲಿ ನ್ಯೂಸ್ ಚಾನಲ್ಸ್‍ಗಳ ಮೇಲೆ ನಂಬಿಕೆ ಕಳೆದುಕೊಳ್ತಾ ಇವೆ.

ಏ ಚೇಂಜ್ ಮಾಡಿ ಸ್ವಾಮಿ ಈ ಚಾನಲ್ ಈ ರಾಜಕಾರಣಿದೇ, ಅದಕ್ಕೆ ಯಾವಾಗ್ಲೂ ಅವ್ನ ಬಗ್ಗೆಯೇ ನ್ಯೂಸ್ ನೀಡ್ತಾ ಇರ್ತಾರೆ ಅಂತ ಜನಗಳಿಗೆ ಬೇಸತ್ತು ಸಂಪೂರ್ಣವಾಗಿ ನ್ಯೂಸ್ ಚಾನಲ್ಸ್‍ಗಳ ಮೇಲೆ ಹಿಡಿತ, ನಂಬಿಕೆ, ಎರಡನ್ನೂ ದೂರಮಾಡಿಕೊಳ್ತಾ ಇದ್ದಾರೆ.

ಇಷ್ಟಕ್ಕೂ ಈ ಮ್ಯಾಟ್ರೂ ಬಗ್ಗೆ ನಾವ್ ಹೇಳೋಕೆ ಹೊರಟಿಲ್ಲ, ಏನೋ ಜನ ಹೇಳ್ತಾ ಇದ್ದಾರೆ ಇನ್ನಮುಂದೆ ಆದ್ರೂ ಅವ್ರ ನಂಬಿಕೆಗೆ ಹುಸಿ ಮಾಡಬೇಡಿ ಅಂತ ಅಷ್ಟೆ. ಯಾಕೆ ಆ ಕಾಳಜಿ ಅಂದ್ರೆ ನಾವು ಕೂಡ ಮೀಡಿಯಾದವ್ರೇ ಅಲ್ವಾ.

ಅಂದಹಾಗೇ ನಾವ್ ಏನೋ ಹೇಳೋಕೆ ಹೋಗಿ ಏನೋ ಹೇಳ್ತಾ ಇದ್ದಿವಿ, ಆದ್ರೂ ಮೇಲಿನ ಮಾತುಗಳು ಸತ್ಯ ಕೂಡ ಹೌದು.. ನಿಜವಾಗಿಯೂ ನಾವ್ ಹೇಳೋಕೆ ಹೊರಟಿರುವ ಮ್ಯಾಟ್ರೂ ಅದಲ್ಲ. ಇನ್ನೇನು ಅಂತೀರಾ..

ಹೌದು.. ಈಗಾಗ್ಲೇ 12 ಅಥವ 13 ನ್ಯೂಸ್ ಚಾನಲ್ಸ್ ಗಳಿವೆ ಅಲ್ವಾ ಅದ್ರಲ್ಲಿ ಯಾವುದಪ್ಪಾ ನೋಡೋದ್ ಅಂತ ಜನ ತಲೆ ಕೆಡಿಸಿಕೊಂಡು ಕೂತಿದ್ರೆ, ಇದ್ರ ಜತೆಗೆ ಇನ್ನೂ ಐದಾರು ನ್ಯೂಸ್ ಚಾನಲ್ಸ್ ಗಳು ಬಂದ್ರೆ ಹೆಂಗೆ ಅಂತ.

ಸಾಂಧರ್ಭಿಕ ಚಿತ್ರ..

ಏನೇ ಹೇಳಿ ಮನೆಯಲ್ಲಿ ಕೂತು ರಿಮೋಟ್ ಚೇಂಜ್ ಮಾಡ್ತಾ ಇದ್ರೆ ಎಲ್ಲಾ ನ್ಯೂಸ್ ಚಾನಲ್ಸ್ ಗಳೇ ಕಾಣಿಸೋದ್ ಪಕ್ಕಾ ಬಿಡಿ. ಅಯ್ಯಯ್ಯಪ್ಪ ಒಂದು ಕಾಲದಲ್ಲಿ ಯಾವ್ದೋ ಅರ್ಧ ಗಂಟೆ ನ್ಯೂಸ್ ನೋಡ್ತಾ ಇದ್ದ ಜನಗಳಿಗೆ ಇಂದು ಫುಲ್ ಬೋಜನ ಸಿಕ್ಕಾಂತಾಗಿದೆ.

ಫುಲ್ ಬೋಜನ ಸಿಕ್ಕಂತ್ತಾಗಿದೆಯೋ ಅಥವ ಫುಲ್ ಬೋರ್ ಆಗಿದೆಯೋ ಗೊತ್ತಿಲ್ಲಾ, ಬಟ್ ನ್ಯೂಸ್ ಚಾನಲ್ಸ್ ಗಳ ಹವಾ ಶುರುವಾಗ್ತಾ ಇವೆ. ಅದನ್ನ ನೀವುಗಳು ಅಂದ್ರೆ ಜನ ಯಾವ್ ರೀತಿ ಸ್ವೀಕಾರ ಮಾಡ್ತಿರೋ ನಿಮ್ ಇಷ್ಟ ಗುರುಗಳೇ.. ನ್ಯೂಸ್ ಚಾನಲ್ಸ್‍ಗೆ ಜೈ.. ನ್ಯೂಸ್ ಚಾನಲ್ಸ್‍ಗಳಿಗೆ ಜೈ….

ಆದ್ರೆ ಕೊನೆದಾಗಿ ಒಂದು ಮಾತು ಹೇಳುವುದಾದ್ರೆ ನಮ್ಮ ಮೇಲೆ ಅಂದ್ರೆ ನ್ಯೂಸ್ ಚಾನಲ್ಸ್ ಗಳ ಮೇಲೆ ಅಲ್ಪಮಟ್ಟಿಗೆ ನಂಬಿಕೆ ಹೋಗಿಬಿಟ್ಟಿದೆ. ಇನ್ನಾದ್ರೂ ಸತ್ಯಾಂಶವಾದ ಸುದ್ದಿಯನ್ನಾ ಜನಗಳಿಗೆ ಮುಟ್ಟಿಸೋಣ. ಅಂದ್ರೆ ಸುಳ್ಳು ಹೇಳ್ತಾ ಇದ್ದೀವಿ ಅಂತಲ್ಲ, ಅವ್ರ ಮನಸ್ಸಲ್ಲಿ ಅಡಗಿರೋ ನೆಗಟಿವಿಟಿ ನಾ ದೂರ ಮಾಡೋಣ ಅಂತ ಆಸೆ ಅಷ್ಟೆ.

Leave a Reply