You are here
Home > ವಿಶೇಷ > ಕರೀಂಲಾಲ್ ತೆಲಗಿ ಶವದ ಮುಂದೆ ಕುಟುಂಬಸ್ಥರು ಗಲಾಟೆ!

ಕರೀಂಲಾಲ್ ತೆಲಗಿ ಶವದ ಮುಂದೆ ಕುಟುಂಬಸ್ಥರು ಗಲಾಟೆ!

ಉಪಸಂಪಾದಕ
ಮಾಲೂರು ಜಿ.ಶಶಿಕುಮಾರ್ ಶೆಟ್ಟಿ

ಬಹು ಅಂಗಾಂಗ ವೈಫಲ್ಯದಿಂದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವನ್ನಪಿದ್ದ ನಕಲಿ ಛಾಪಾ ಕಾಗದ ಹಗರಣದ ಆರೋಪಿ ಕರೀಂಲಾಲ್ ತೆಲಗಿ ಮೃತದೇಹದ ಮುಂದೆ ಕುಟುಂಬಸ್ಥರು ಜಗಳ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.

ಇಂದು ಬೆಳಿಗ್ಗೆ ಖಾನಾಪುರಕ್ಕೆ ತೆಲಗಿ ಮೃತದೇಹ ಆಗಮಿಸಿದ್ದು ನೋಡಲು ಬಂದ ತೆಲಗಿ ಸಹೋದರ ಅಜೀಂ ತೆಲಗಿ ಹಾಗೂ ಮಗಳು ಸನಾ ನಡುವೆ ತೀವ್ರ ವಾಗ್ವಾದ ನಡೆದಿದೆ ಅಂತ ತಿಳಿದುಬಂದಿದೆ.

ನಮ್ಮ ತಂದೆ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸಂದರ್ಭದಲ್ಲಿ ಯಾರೂ ನಮ್ಮನ್ನು ನೋಡಲು ಬಂದಿರಲಿಲ್ಲ. ಈಗ ನಿಮ್ಮ ಅವಶ್ಯಕತೆ ಇಲ್ಲ ಅಂತ ಹೇಳಿದ್ದಾರೆ. ಸನಾ ಅವ್ರ ಮಾತುಗಳಿಂದ ಬೇಸತ್ತ ಅಜಿಂ ತೆಲಗಿ ಮನೆಯಿಂದ ಹೊರ ನಡೆದಿದ್ದಾರೆ ಅಂತ ತಿಳಿದು ಬಂದಿದೆ. ಮೃತರ ಅಂತಿಮ ಇಚ್ಛೆಯಂತೆ ಖಾನಾಪುರ ಪಟ್ಟಣದಲ್ಲಿ ಅಂತ್ಯಕ್ರಿಯೆ ನಡೆಸಲು ಉದ್ದೇಶಿಸಲಾಗಿದೆ.

Leave a Reply