You are here
Home > ಎಲೆಕ್ಷನ್ ಟೈಮ್ > ಕಾರಜೋಳ ಅವ್ರಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟ್..

ಕಾರಜೋಳ ಅವ್ರಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟ್..

ಉಪಸಂಪಾದಕ
ಮಾಲೂರು ಜಿ.ಶಶಿಕುಮಾರ್ ಶೆಟ್ಟಿ

ರಾಹುಲ್ ಗಾಂಧಿ ದಲಿತ ಹೆಣ್ಣು ಮಗಳನ್ನು ಮದೆವೆಯಾಗಲು ಸಿದ್ದರಿದ್ದಾರಾ? ರಾಹುಲ್‍ಗೆ ದಲಿತ ಹೆಣ್ಣುಮಗಳನ್ನು ಕೊಡಲು ಸಿದ್ದರಿದ್ದೇವೆ ಅಂತ ಬಿಜೆಪಿ ಹಿರಿಯ ನಾಯಕ ಗೋವಿಂದ ಕಾರಜೋಳ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ನೆಹರು ಕುಟುಂಬದಲ್ಲಿ ಆಗಿರುವಷ್ಟು ಅಂತರ್ಜಾತಿ ವಿವಾಹಗಳು ಬೇರಾವುದೇ ಕುಟುಂಬದಲ್ಲಿ ಆಗಿಲ್ಲ. ಇಂದಿರಾಗಾಂಧಿ, ರಾಜೀವ್ ಗಾಂಧಿ ಅವ್ರು ಅನ್ಯ ಧಮೀಯರನ್ನು ಮದುವೆಯಾಗಿದ್ದಾರೆ. ಬಿಜೆಪಿ ನಾಯಕರಿಗೆ ಈ ಬಗ್ಗೆ ಪ್ರಶ್ನಿಸಲು ಯಾವುದೇ ರೀತಿಯ ನೈತಿಕತೆಯಿಲ್ಲ. ಬಿಜೆಪಿಗರಿಂದ ಪಾಠ ಕಲಿಯುವ ಅಗತ್ಯವಿಲ್ಲ. ಎಂದು ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ.

ಇನ್ನು ಇದೇ ಸಂಧರ್ಭದಲ್ಲಿ ಸಚಿವ ಡಿಕೆಶಿ ಆಪ್ತ ವಿಜಯ್ ಮುಳಗುಂದ ನಿವಾಸದ ಮೇಲೆ ಐಟಿ ದಾಳಿ ನಡೆದಿರುವುದನ್ನು ಸಿಎಂ ಖಂಡಿಸಿದ್ದಾರೆ. ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸಿಕೊಂಡು ಐಟಿ ದಾಳಿ ನಡೆಸುತ್ತಿರುವುದು ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂದ್ರು.

ಇನ್ನು ವಿಧಾನಸಭಾ ಚುನಾವಣೆಗೂ ಮುನ್ನಾ ಕಾಂಗ್ರೆಸ್ ಕಾರ್ಯಕರ್ತರ ಆತ್ಮಸ್ಥೇರ್ಯ ಕುಗ್ಗಿಸಲು ಈ ರೀತಿ ಐಟಿ ದಾಳಿ ನಡೆಸಲಾಗುತ್ತಿದೆ ಅಂತ ಸಿಎಂ ಆರೋಪಿಸಿದ್ದಾರೆ.

Leave a Reply