You are here
Home > ರಾಜಕೀಯ > ಕುಮಾರಸ್ವಾಮಿ ನಿರ್ಧಾರಕ್ಕೆ ನಾನು ಬದ್ಧ; ಅನಿತಾ ಕುಮಾರಸ್ವಾಮಿ

ಕುಮಾರಸ್ವಾಮಿ ನಿರ್ಧಾರಕ್ಕೆ ನಾನು ಬದ್ಧ; ಅನಿತಾ ಕುಮಾರಸ್ವಾಮಿ

ಉಪಸಂಪಾದಕ
ಮಾಲೂರು ಜಿ.ಶಶಿಕುಮಾರ್ ಶೆಟ್ಟಿ

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ವಿಚಾರ, ಪಕ್ಷದ ರಾಷ್ಟ್ರೀಯ ಮತ್ತು ರಾಜ್ಯಾಧ್ಯಕ್ಷರ ನಿರ್ಧಾರಕ್ಕೆ ನಾನು ಬದ್ದ ಅಂತ ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಹೇಳಿದ್ರು.

ಹಾಸನಾಂಬೆ ದರ್ಶನ ಪಡೆದ ಬಳಿಕ ಮಾತನಾಡಿದ ಅನಿತಾ ಕುಮಾರ್ಸವಾಮಿ, ಮುಂದಿನ ದಿನಗಳಲ್ಲಿ ಎಲ್ಲಾ ಕುತೂಹಲಕ್ಕೆ ತೆರೆ ಬೀಳಲಿದೆ. ಕಾದು ನೋಡಿ, ಪತಿ ಕುಮಾರ್ಸವಾಮಿ ಅವ್ರು ಅನಾರೋಗ್ಯದಿಂದ ಇರುವ ಕಾರಣ ಕೆಲವು ದಿನ ಮಗ ನಿಖಿಲ್ ಪಕ್ಷದ ಪ್ರಚಾರ ಮಾಡಲಿದ್ದಾರೆ ಎಂದರು.

ಇನ್ನೂ ನಾಡು ದೇಶದ ಜನರಿಗೆ ಒಳ್ಳೆಯದಾಗಲಿ ಅಂತ ಹಾಸನಾಂಬೆ ಗೆ ಪ್ರಾರ್ಥನೆ ಸಲ್ಲಿಸಿದ್ದಾಗಿ ಅನಿತಾ ಕುಮಾರಸ್ವಾಮಿ ತಿಳಿಸಿದ್ರು.

Leave a Reply