You are here
Home > ರಾಜಕೀಯ > ಗಣಪತಿ ಆತ್ಮಹತ್ಯೆ ಕೇಸ್;ಜಾರ್ಜ್ ರಾಜೀನಾಮೆ ನೀಡಬೇಕು;ಶೆಟ್ಟರ್

ಗಣಪತಿ ಆತ್ಮಹತ್ಯೆ ಕೇಸ್;ಜಾರ್ಜ್ ರಾಜೀನಾಮೆ ನೀಡಬೇಕು;ಶೆಟ್ಟರ್

ಉಪಸಂಪಾದಕ
ಮಾಲೂರು ಜಿ.ಶಶಿಕುಮಾರ್ ಶೆಟ್ಟಿ

ಡಿವೈಎಸ್‍ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಿಬಿಐ ಎಫ್‍ಐಆರ್ ದಾಖಲಿಸಿರುವ ಹಿನ್ನೆಲೆಯಲ್ಲಿ ಸಚಿವ ಕೆ.ಜೆ.ಜಾರ್ಜ್ ತಕ್ಷಣವೇ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಆಗ್ರಹಿಸಿದ್ದಾರೆ.

ಗಣಪತಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಸ್ಥಳೀಯ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ನನ್ನ ಸಾವಿಗೆ ಅಂದು ಗೃಹ ಸಚಿವರಾಗಿದ್ದ ಕೆ.ಜೆ.ಜಾರ್ಜ್, ಗುಪ್ತಚರ ವಿಭಾಗದ ಡಿಜಿಪಿ ಎ.ಎನ್. ಪ್ರಸಾದ್ ಲೋಕಾಯುಕ್ತ ವಿಭಾಗದ ಎಡಿಜಿಪಿ ಪ್ರಣವ್ ಮೊಹಂತಿಯೇ ನೇರ ಕಾರಣ ಅಂತ ಆರೋಪಿಸಿದ್ದರು.

ಇದೀಗ ಸಿಬಿಐ ಇದೇ ಪ್ರಕರಣದಲ್ಲಿ ಎಫ್‍ಐಆರ್ ದಾಖಲಿಸಿರುವ ಹಿನ್ನೆಲೆಯಲ್ಲಿ ಜಾರ್ಜ್ ಸಚಿವ ಸ್ಥಾನದಲ್ಲಿ ಮುಂದಿವರಿಯಬಾರದು ಅಂತ ಅವ್ರು ಹೇಳಿದ್ದಾರೆ.

ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಯಬೇಕಾದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವ್ರು ಕೂಡಲೇ ಜಾರ್ಜ್ ಅವ್ರನ್ನು ಸಂಪುಟದಿಂದ ಕೈ ಬಿಡಬೇಕೆಂದು ಆಗ್ರಹಿಸಿದ ಶೆಟ್ಟರ್, ಒಂದು ವೇಳೆ ಜಾರ್ಜ್ ರಾಜೀನಾಮೆ ನೀಡದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದೆಂದು ಎಚ್ಚರಿಸಿದ್ದಾರೆ.

Leave a Reply