You are here
Home > ಅಂಕಣ > ಗಲ್ಲು ಶಿಕ್ಷೆ ರದ್ದು: ದಂಡುಪಾಳ್ಯ ಹಂತಕರು ಕೊಂಚ ಬಚಾವ್

ಗಲ್ಲು ಶಿಕ್ಷೆ ರದ್ದು: ದಂಡುಪಾಳ್ಯ ಹಂತಕರು ಕೊಂಚ ಬಚಾವ್

Acquistare Pillole Di Caverta ಉಪಸಂಪಾದಕ
ಮಾಲೂರು ಜಿ.ಶಶಿಕುಮಾರ್ ಶೆಟ್ಟಿ

ದಂಡುಪಾಳ್ಯ ಅಂದ ಕೂಡಲೇ ಭಯವಾಗುತ್ತೆ ಆ ಮಟ್ಟಿಗೆ ಹೆಸ್ರು ಆಗಿತ್ತು. ಇನ್ನು ಒಂಟಿ ಮಹಿಳೆಯರನ್ನ ಟಾರ್ಗೆಟ್ ಮಾಡಿ ಕೊಲೆ ಮಾಡಿ ಇಡೀ ಮನೆಯನ್ನ ದೋಚುತ್ತಿದ್ದ ದಂಡುಪಾಳ್ಯ ಹಂತಕರಿಗೆ ಕೊಂಚ ರಿಲೀಫ್ ಸಿಕ್ಕಿದೆ.

1999 ರಲ್ಲಿ ಬೆಂಗಳೂರಿನ ಸುಧಾಮಣಿ ಕೊಲೆ ಪ್ರಕರಣಕ್ಕೆ ಅಧೀನ ನ್ಯಾಯಾಲಯ ಈ ಹಿಂದೆಯೇ ಆರೋಪಿಗಳಿಗೆ ಗಲ್ಲು ಶಿಕ್ಷೆ ಪ್ರಕಟಿಸಿತ್ತು. ಈ ಆದೇಶವನ್ನ ಪ್ರಶ್ನಿಸಿ, ಹೈ ಕೋರ್ಟ್ ಮೊರೆ ಹೋಗಿದ್ದ, ದಂಡುಪಾಳ್ಯ ಹಂತಕರ ಮನವಿಯನ್ನು ಹೈಕೋರ್ಟ್ ಪರಿಗಣಿಸಿದೆ.

ನ್ಯಾಯಮೂರ್ತಿ ರವಿ ಮಳಿಕಠ್ ಹಾಗೂ ಮೈಕಲ್ ಡಿ ಕುನ್ಹಾ ನ್ಯಾಯಾದೀಶರಿದ್ದ ವಿಭಾಗೀಯ ಪೀಠ, ಆರೋಪಿಗಳಿಗೆ ಗಲ್ಲು ಶಿಕ್ಷೆ ರದ್ದುಗೊಳಿಸಿದೆ. ಬದಲಾಗಿ, ಆರೋಪಿಗಳಾದ ನಲ್ಲ ತಿಮ್ಮ, ಲಕ್ಷ್ಮಿ, ಮುನಿಕೃಷ್ಣ, ವೆಂಕಟೇಶ್‍ಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ಪ್ರಕಟಿಸಿದೆ. ಈ ಮೂಲಕ ಗಲ್ಲು ಶಿಕ್ಷೆಯಿಂದ ಪಾರಾದ ಆರೋಪಿಗಳು ಜೀವಾವಧಿ ಶಿಕ್ಷೆಗೆ ತೃಪ್ತಿ ಪಟ್ಟಿದ್ದಾರೆ.

ನ್ಯಾಯಾಲಯ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದ್ದರೂ, ಇನ್ನೂ ಮೂರು ಕೊಲೆ ಪ್ರಕರಣಗಳ ಸಂಬಂಧ, ಹೈಕೋರ್ಟ್ ತೀರ್ಪು ಹೊರಬೀಳಬೇಕಿದೆ.

Leave a Reply