You are here
Home > ಅಂಕಣ > ಗೌರಿ ಲಂಕೇಶ್ ಹತ್ಯೆ ಪ್ರಕರಣ: ತನಿಖೆ ಚುರುಕು

ಗೌರಿ ಲಂಕೇಶ್ ಹತ್ಯೆ ಪ್ರಕರಣ: ತನಿಖೆ ಚುರುಕು

ಉಪಸಂಪಾದಕ
ಮಾಲೂರು ಜಿ.ಶಶಿಕುಮಾರ್ ಶೆಟ್ಟಿ

ಹಿರಿಯ ಪತ್ರಕರ್ತೆ ಹಾಗೂ ವಿಚಾರವಾದಿ ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದಿದ್ದಾರೆ.

ಗೌರಿ ಲಂಕೇಶ್ ನಿವಾಸ ಸೆರಿದಂತೆ ಘಟನೆ ನಡೆದ ರಾಜರಾಜೇಶ್ವರಿ ನಗರದ ಸುತ್ತಮುತ್ತಲ ಪ್ರದೇಶಗಳಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದಿದ್ದಾರೆ. ಅಂತೆಯೇ ಘಟನೆ ನಡೆದ ಸಂಧರ್ಭದಲ್ಲಿ ಸ್ಥಳದಲ್ಲಿ ಇದ್ದರು ಎನ್ನಲಾಗುತ್ತಿರುವ ಸುಮಾರು 10 ಮಂದಿ ಪ್ರತ್ಯಕ್ಷದರ್ಶಿಗಳನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಇದೇ ವೇಳೆ ಗೌರಿ ಲಂಕೇಶ್ ಅವ್ರ ನಿವಾಸದ ಬಳಿ ಇರುವ ಮೊಬೈಲ್ ಟವರ್‍ಗಳ ದತ್ತಾಂಶಗಳ ಸಂಗ್ರಹಕ್ಕೂ ಪೊಲೀಸರು ಮುಂದಾಗಿದ್ದು, ಗೌರಿ ಲಂಕೇಶ್ ಹತ್ಯೆಯಾಗುವ ಮುನ್ನ ಹಾಗೂ ಹತ್ಯೆಯಾದ ಬಳಿಕ ದುಷ್ಕರ್ಮಿಗಳು ಮಾಡಿರಬಹುದಾದ ಕರೆಗಳ ದತ್ತಾಂಶಗಳನ್ನು ಪೊಲೀಸರು ಕಲೆಹಾಕುತ್ತಿದ್ದಾರೆ. ಪ್ರಮುಖವಾಗಿ ಗೌರಿ ಲಂಕೇಶ್ ಅವರ ನಿವಾಸ ಇರುವ ರಾಜರಾಜೇಶ್ವರಿ ನಗರದ ಐಡಿಯಲ್ ಹೋಮ್ಸ್ ಪ್ರದೇಶದ ಸುತ್ತಮುತ್ತಲ ಟವರ್‍ಗಳ ದತ್ತಾಂಶವನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.

ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಿದ ದುಷ್ಕರ್ಮಿಗಳ ಪತ್ತೆಗಾಗಿ ಮೂರು ತಂಡಗಳನ್ನು ರಚಿಸಲಾಗಿದ್ದು, ಈಗಾಗಲೇ ಈ ಮೂರು ತಂಡ ಪ್ರಕರಣದ ಕೂಲಂಕುಷ ತನಿಖೆ ನಡೆಸುತ್ತಿದೆ ಎಂದು ತಿಳಿದುಬಂದಿದೆ. ಈ ಮೂರು ತಂಡಗಳು ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಮೊಬೈಲ್ ಟವರ್ ದತ್ತಾಂಶಗಳನ್ನು ಕಲೆ ಹಾಕುತ್ತಿದ್ದಾರೆ.

ಬೆಂಗಳೂರಿನ ಗಾಂಧಿನಗರದಲ್ಲಿರುವ ಗೌರಿ ಲಂಕೇಶ್ ಅವರ ಸ್ನೇಹಿತೆಯ ಮನೆಯಿಂದ ಹಿಡಿದು ರಾಜರಾಜೇಶ್ವರಿ ನಗರದ ವರೆಗಿನ ಮೊಬೈಲ್ ಟವರ್ ದತ್ತಾಂಶಗಳನ್ನು ಕಲೆಹಾಕಿದ್ದಾರೆ ಎಂದು ತಿಳಿದುಬಂದಿದೆ.

ಈ ಪೈಕಿ ಪೊಲೀಸರು 1 ಸಾವಿರಕ್ಕೂ ಅಧಿಕ ದೂರವಾಣಿ ಕರೆಗಳ ದತ್ತಾಂಶಗಳನ್ನು ಪೊಲೀಸರು ಕಲೆಹಾಕಿದ್ದು, ಈ ಪೈಕಿ ಹಲವು ಕರೆಗಳು ಶಂಕಾಸ್ಪದ ಕರೆಗಳು ಎಂದು ಪೊಲೀಸರು ಗುರುತಿಸಿದ್ದಾರೆ ಎನ್ನಲಾಗಿದೆ.

ಇನ್ನು ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಟ್ವಿಟರ್‍ನಲ್ಲಿ ಪ್ರತಿಕ್ರಯಿಸಿದ್ದಾರೆ. ಹತ್ಯೆ ಮೂಲಕ ಸತ್ಯವನ್ನು ಮೌನವಾಗಿಸಲು ಸಾದ್ಯವಿಲ್ಲ. ಗೌರಿ ಲಂಕೇಶ್ ನಮ್ಮ ಮನದಲ್ಲಿದ್ದು, ದೇವರು ಅವರ ಕುಟುಂಬಸ್ಥರಿಗೆ ಗೌರಿ ಲಂಕೇಶ್ ಅವರ ಸಾವಿನ ನೋವನ್ನು ತಡೆದುಕೊಳ್ಳುವ ಶಕ್ತಿ ನೀಡಲಿ. ತಪ್ಪಿತಸ್ಥಿರಿಗೆ ಖಂಡಿತಾ ಶಿಕ್ಷೆಯಾಗಬೇಕು ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಅಂದಹಾಗೇ ಇನ್ನು ಹತ್ಯೆಯನ್ನು ತೀವ್ರವಾಗಿ ಖಂಡಿಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲೇ ಬೇಕು ಹಾಗೂ ಈ ಪ್ರಕರಣವನ್ನಾ ಸಿಬಿಐ ತನಿಖೆಗೆ ಆಗ್ರಹಿಸಿ ರಾಜ್ಯಾದ್ಯಾದಂತ ಪ್ರತಿಭಟನೆಗಳು ನಡೆಯುತ್ತಿದೆ. ಅದೇ ಸಂದರ್ಭದಲ್ಲಿ ಭಾವಪೂರ್ಣ ಶ್ರದ್ದಾಂಜಲಿ ಸಹ ಮಾಡಲಾಗ್ತಿದೆ.

Leave a Reply