You are here
Home > ಅಂಕಣ > ಜಯಲಲಿತಾ ಅವರ ಸಾವಿಗೆ ಶಶಿಕಲಾ ನೇರ ಕಾರಣ! ದೈಹಿಕ ಹಲ್ಲೆ ನಡೆದದ್ದು ನಿಜನಾ?

ಜಯಲಲಿತಾ ಅವರ ಸಾವಿಗೆ ಶಶಿಕಲಾ ನೇರ ಕಾರಣ! ದೈಹಿಕ ಹಲ್ಲೆ ನಡೆದದ್ದು ನಿಜನಾ?

ಸಂಪಾದಕಿ
ಪಲ್ಲವಿ ಗೌಡ

 

ಜಯಲಲಿತಾ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದವರು ಅವರು ನಿಧನರಾಗಿ ಕೆಲವೇ ತಿಂಗಳು ಕಳೆದಿವೆ. ತಮಿಳುನಾಡಿನ ಜನ ಅವರನ್ನ ಅಮ್ಮ ಅಂತಲೇ ಕರೆಯುತ್ತಿದ್ದವರು ಯಾಕೆಂದ್ರೆ ಜನರ ಸೇವೆ ಜನಾರ್ಧನ ಸೇವೆ ಎಂದು ನಂಬಿದ್ದ ಜಯಲಲಿತಾ ಅವ್ರಿಗೆ ಪಕ್ಕದಲ್ಲೇ ಇದ್ದ ಗೆಳತಿ ಪ್ರಾಣಕ್ಕೆ ಕುತ್ತು ತರ್ತಾಳೆ ಅನ್ನೋ ವಿಷಯ ಗೊತ್ತಿರಲಿಲ್ಲ.
ಓರ್ವ ಮುಖ್ಯಮಂತ್ರಿ ತನ್ನ ರಾಜ್ಯದ ಬಗ್ಗೆ ಪಿನ್ ಟು ಪಿನ್ ಡೀಟೇಲ್ಸ್ ತೆಗೆದುಕೊಳ್ಳಲು ಸಾಧ್ಯವೇ ಇಲ್ಲ.ಆದ್ರೆ ಯಾವ ಜಾಗದಲ್ಲಿ ಏನಾಗಿದೆ ಅದಕ್ಕೆ ಏನು ಪರಿಹಾರ ಅಂತ ಕುಂತಲೇ ಲೆಕ್ಕ ಹಾಕ್ತಿದ್ರು ಜಯಲಲಿತಾ.ಬಹಳ ಕಷ್ಟದಿಂದ ಮಹಿಳಾ ಮುಖ್ಯಮಂತ್ರಿಯಾಗಿ ಬೆಳೆದು ದೇಶದ ಮಾದರಿಯಾದ್ರು. ಅಮ್ಮ ಕ್ಯಾಂಟೀನ್ ಮಾಡಿ ಬಡವರ ಪಾಲಿಗೆ ದೇವತೆ ಯಾದ್ರು. ಇದೆಲ್ಲ ಬಿಡಿ ನಾವು ಹೇಳಲು ಹೊರಟಿರೋ ವಿಷಯ ಇದಲ್ಲ, ಜಯಲಲಿತಾ ಸಾವಿಗೆ ಶಶಿಕಲಾ ಹೇಗೆ ಕಾರಣ? ಆಸ್ಪತ್ರೆ ಸೇರುವ ಮುನ್ನ ಗೆಳತಿ ಜೊತೆ ಜಗಳವಾಡಿದ್ದೇಕೆ ಇದೆಲ್ಲದರ ಕಂಪ್ಲೀಟ್ ಡೀಟೇಲ್ಸ್ ಬಿಚ್ಚಿಡ್ತೀವಿ.

ತಮಿಳುನಾಡಿನಲ್ಲಿ ಅಮ್ಮ ಎಂದರೆ ಅದು ಜಯಲಲಿತಾ ಅದಿರಲಿ ನಿನ್ನನ್ನು ಅಮ್ಮ ಅಂದ್ರೆ ನನ್ನನ್ನು ಚಿನ್ನಮ್ಮ ಎಂದು ಕರೆಯಬೇಕು ಅಂತ ಜನರ ಬಾಯಲ್ಲಿ ಚಿನ್ನಮ್ಮ ಎಂದು ಕರೆಸಿಕೊಂಡವರು ಬೇರೆ ಯಾರೂ ಅಲ್ಲ ಜಯಲಲಿತಾ ಆಪ್ತೆ ಶಶಿಕಲ. ಸದ್ಯ ಶಶಿಕಲಾ ಪರಪ್ಪನ ಅಗ್ರಹಾರದಲ್ಲಿ ಬೆಚ್ಚಗಿದ್ದಾರೆ, ಆದ್ರೆ ಜಯಲಲಿತಾ ಅವರ ಸಾವಿನ ಸುದ್ದಿ ನಿಗೂಢವಾಗಿಯೇ ಉಳಿದುಬಿಡ್ತು, ಅದು ಯಾರಿಂದ ನಡಿತು? ಇದರ ಹಿನ್ನೆಲೆ ಏನು ಎಂಬ ಸುದ್ದಿ ತಿಳಿಯಬೇಕು ಅಂತಲೇ ಜಯಲಲಿತಾ ಅವರ ಅಪ್ಪಟ ಶಿಷ್ಯ ಓ ಪನ್ನೀರ್ ಸೆಲ್ವಂ ಸಿಬಿಐ ತನಿಖೆಗೆ ಆಗ್ರಹಿಸಿದ್ದರು ಆದ್ರೆ ಇದಕ್ಕೆ ಸೊಪ್ಪಾಕದ ಸುಪ್ರೀಂ ಸಾರಾಸಗಟಾಗಿ ತಳ್ಳಿಹಾಕಿತ್ತು. ಇದರಿಂದ ಸ್ವಲ್ಪ ರಿಲೀಫ್ ಆದ ಶಶಿಕಲಾಗೆ ಓ ಪನ್ನೀರ್ ಸೆಲ್ವಂ ದುಷ್ಮನ್ ಆದ್ರು. ಜಯಲಲಿತಾ ಅವರ ಸಂಪೂರ್ಣ ಆಸ್ತಿ ತನ್ನ ಪಾಲಿಗಾದ ಮರುಕ್ಷಣವೇ ಪನ್ನೀರ್ ಸೆಲ್ವಂ ಗೆ ಗೇಟ್ ಪಾಸ್ ನೀಡಿದ್ರು.

ಜಯಲಲಿತಾ ಅವರ ಆರೋಗ್ಯ ಸರಿಯಿರಲಿಲ್ಲ ಅನ್ನೋ ಸುದ್ದಿ ಹರಿದಾಡಿದ್ದು ನಿಜ ಆದ್ರೆ ಅದನ್ನ ಬೇಗ ಗುಣಪಡಿಸಬಹುದಿತ್ತು,ಆದರೆ ಇದು ನಿಧಾನಗತಿಯಾಗಲೂ ಇದೇ ಶಶಿಕಲಾ ಕಾರಣವಂತೆ,ಒಂದು ಸಿಡಿ ಶಾಪ್ ಓಪನ್ ಮಾಡಿದ್ದ ಶಶಿಕಲಾಗೆ ತನ್ನ ಅರಮನೆಯಲ್ಲಿ ಜಾಗ ಕೊಟ್ಟು ತನಗೆ ಸಿಕ್ಕ ಗೌರವವನ್ನು ಕೊಟ್ಟದ್ದೇ ತಪ್ಪಾಯ್ತು.ಜಯಲಲಿತಾ ಅಂದ್ರೆ ಅದೊಂದು ಶಿಸ್ತು ಗೌರವ ಗತ್ತು ತಾನಾಗೆ ಬರುತ್ತೆ ತನ್ನೆಲ್ಲಾ ಶಾಸಕರನ್ನ ಶಿಸ್ತಿನಿಂದ ಬೆಳಸಿದ್ದ ಜಯಲಲಿತಾ ಯಾರೂ ಅವರ ಅಪ್ಪಣೆಯಿಲ್ಲದೆ ಕೆಲಸ ಮಾಡುವಂತಿರಲಿಲ್ಲ.ಆದ್ರೆ ಅದೊಂದು ದಿನ ನಡೆದದ್ದೇ ಬೇರೆ ಜಯಲಲಿತಾ ಅವರ ಅನಾರೋಗ್ಯ ದ ಬಗ್ಗೆ ಸಂಪೂರ್ಣವಾಗಿ ತಿಳಿದಿದ್ದ ಶಶಿಕಲಾ ಅವರ ಆಹಾರ ಸೇವನೆಯಿಂದ ಹಿಡಿದು ಅವರ ಮಾತ್ರೆ ಸೇವನೆ ಎಲ್ಲದ್ದರ ಜವಾಬ್ದಾರಿ ಹೊತ್ತಿದ್ದರು.
ಅದೊಂದು ರಾತ್ರಿ ಇದ್ದಕ್ಕಿದ್ದಂತೆ ಶಶಿಕಲಾ ಮೇಲೆ ಜಯಲಲಿತಾ ಕಿರಚಾಡುತ್ತಾರೆ ಜೋರು ಧ್ವನಿಯಲ್ಲಿ ಬೈಯ್ಯುತ್ತಾರೆ ವಾದ ಅತಿರೇಕಕ್ಕೆ ಹೋದಾಗ,ಶಶಿಕಲಾ ಜಯಲಲಿತಾ ಅವರ ಮೇಲೆ ಕೈ ಎತ್ತುತ್ತಾರೆ, ಇದಾದ ಬಳಿಕ ಅವರನ್ನ ಕಾಲಿಂದಲೂ ಒದೆಯುತ್ತಾರೆ ಇದಾದ ಕ್ಷಣವೇ ಜಯಲಲಿತಾ ಕುಸಿದುಬೀಳುತ್ತಾರೆ ಅವರ ಆಪ್ತರು ಹಾಗೆ ಆಪ್ತ ಶಾಸಕರು ಹೇಳುವಂತೆ ಅಂದೇ ಜಯಲಲಿತಾ ನಿಧನರಾಗಿದ್ರು ಅಂತ.ಆದ್ರೆ, ಯಾಋಇಘೂ ತಿಳಿಯದಂತೆ ಅದೇ ಶಶಿಕಲಾ ಅಪೊಲೊ ಆಸ್ಪತ್ರೆಗೆ ಸೇರಿಸ್ತಾರೆ.

Well wishers of Tamil Nadu Chief Minister Jayalalithaa Jayaraman gather outside a hospital where Jayalalithaa is being treated in Chennai, India, December 5, 2016. REUTERS/Stringer FOR EDITORIAL USE ONLY. NO RESALES. NO ARCHIVES.

ತಮ್ಮ ಅಮ್ಮ ಆಸ್ಪತ್ರೆತಲ್ಲಿದ್ದಾರೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ಇಡೀ ತಮಿಳುನಾಡಿನ ಜನ ಆಸ್ಪತ್ರೆಯ ಮುಂಭಾಗ ಜಮಾಯಿಸುತ್ತಾರೆ.ಆಸ್ಪತ್ರೆ ಸುತ್ತಮುತ್ತ ನೈಟ್ ಅಂಡ್ ನೈಟ್ ಬಿಗಿ ಭಧ್ರತೆ ಕಲ್ಪಿಸಲಾಗುತ್ತೆ, ಜಯಲಲಿತಾ ಅವರ ಆಪ್ತ ಶಾಸಕರಿಗೂ ಆಸ್ಪತ್ರೆಯೊಳಗೆ ನೋ ಎಂಟ್ರಿ ಹೇಳಿದ್ದು ಇದೇ ಶಶಿಕಲಾ ತನ್ನನ್ನ ಹೊರತು ಪಡಿಸಿ ಯಾವುದೇ ಸೆಲೆಬ್ರಿಟಿ ಯಾವುದೇ ಶಾಸಕರಿಗೆ ಅನುಮತಿಕೊಡದ ಶಶಿಕಲಾ ಅವರ ಮೇಲೆ ಅನುಮಾನ ಮೂಡತೊಡಗಿತು.ಆಸ್ಪತ್ರೆಯ ಸಿಬ್ಬಂದಿ ಮುಖದಲ್ಲೂ ಆತಂಕ ವ್ಯಕ್ತವಾಗಿತ್ತು ಸರಿಯಾದ ಮಾಹಿತಿ ಕೊಡದೆ ಏನಾಗಿದೆ ಯಾವ ಚಿಕಿತ್ಸೆ ನೀಡಲಾಗ್ತಿದೆ ಅನ್ನೋ ಮಾಹಿತಿಯನ್ನೇ ಬಹಿರಂಗಪಡಿಸಿದ ವೈದ್ಯರ ಮೇಲೂ ಜನರ ಆಕ್ರೋಶ ವ್ಯಕ್ತವಾಗಿತ್ತು.

ಇದಾದ ಬಳಿಕ ಜಯಲಲಿತ ಅವ್ರಿಗೆ ಬಹು ಅಂಗಾಗ ಸಮಸ್ಯೆಯಾಗಿದೆ ಅವರ ಆರೋಗ್ಯ ಗಂಭೀರವಾಗಿದೆ ಎಂದಿದ್ದೇ ತಡ ಇಡೀ ತಮಿಳುನಾಡಿನ ಜನತೆ ಬಿಕ್ಕಿ ಬಿಕ್ಕಿ ಅತ್ತರು ಕೆಲವರೊಂತು ಹೋಮ ಹವನಕ್ಕೆ ಮುಂದಾದ್ರು ತಮ್ಮ ಅಮ್ಮ ಬೇಗ ಹುಷಾರಾಗಿ ಬರಬೇಕು ಎಂದರು. ಆದ್ರೆ ಯಾವುದೇ ಗುಟ್ಟು ಬಿಟ್ಟುಕೊಡದ ಶಶಿಕಲಾ ಅಮ್ಮಾಗೆ ಏನಾಗಿದೆ ಅಮ್ಮ ಹೇಗಿದ್ದಾರೆ ಅನ್ನೋದನ್ನ ರಿವೀಲ್ ಮಾಡಲೇ ಇಲ್ಲ ಆದ್ರೆ ಬೆಳ್ಳಂಬೆಳಗ್ಗೆ ಬಂದ ಸುದ್ದಿ ತಮಿಳುನಾಡಿನ ಜನತೆಗೆ ಅನಾಥ ಪ್ರಜ್ಞೆ ಕಾಡತೊಡಗಿತು,ಜಯಲಲಿತಾ ಇನ್ನಿಲ್ಲ ಎಂಬ ಸುದ್ದಿ ಇಡೀ ದೇಶಕ್ಕೆ ಒಂದು ದೊಡ್ಡ ಶಾಕ್ ಆಗಿತ್ತು. ಜಯಲಲಿತಾ ಅವರ ಸಂಬಂಧಿಗಳಿದ್ದರೂ ಎಲ್ಲಾ ಕಾರ್ಯವನ್ನೂ ಶಶಿಕಲ ಅವರೇ ಮುಗಿಸಿದ್ದು ಕ್ಷಣ ಕ್ಷಣಕ್ಕೂ ಅನುಮಾನ ಹುಟ್ಟಿಸುವಂತಿತ್ತು.


ಇದಾದ ಬಳಿಕ ತಮಿಳುನಾಡು ರಾಜ್ಯವನ್ನ ಯಾರಾಳ್ತಾರೆ ಅನ್ನೋ ಸುದ್ದಿಯೂ ಕೂಡ ಗೊಂದಲವಾಗಿತ್ತು, ಸಹಜವಾಗೆ ಜಯಲಲಿತಾ ಇಲ್ಲವಾದರೆ ಅವರ ಬದಲು ಓ ಪನ್ನೀರ್ ಸೆಲ್ವಂ ಅಧಿಕಾರವಹಿಸಿಕೊಳ್ಳಬಹುದು ಎಂಬ ಲೆಕ್ಕಾಚಾರಗಳು ಜರುಗಿದವು ಒಂದು ಕಡೆ ಪನ್ನೀರ್ ಸೆಲ್ವಂ ಗು ಕೂಡ ತಾನು ಮುಖ್ಯಮಂತ್ರಿ ಯಾಗಬಹುದು ಜಯಲಲಿತಾ ಅವರಂತೆ ರಾಜ್ಯವನ್ನ ನೋಡಿಕೊಳ್ಳಬಹುದೆಂಬ ಲೆಕ್ಕಾಚಾರವಿತ್ತು ಆದರೆ ಅದೆಲ್ಲಾ ಲೆಕ್ಕಾಚಾರಕ್ಕೂ ಬ್ರೇಕ್ ಹಾಕಿದ ಶಶಿಕಲಾ ಓ ಪನ್ನೀರ್ ಸೆಲ್ವಂ ಅವರನ್ನ ಪಕ್ಷದಿಂದ ಉಚ್ಚಾಟನೆ ಮಾಡಿಯೇ ಬಿಟ್ರು ಇದರಿಂದ ಮನನೊಂದ ಪನ್ನೀರ್ ತನ್ನ ಗುಂಪನ್ನ ಸೇರಿಸಿ ಪ್ರತಿಭಟಿಸಿದ್ರು ಇದಾದ ಕೆಲವೇ ಕೆಲವು ದಿನಗಳಲ್ಲಿ, ಜಯಲಿಲಿತಾ ಅವರ ಅಕ್ರಮ ಆಸ್ತಿ ಸಂಬಂಧಪಟ್ಟಂತೆ ಎರಡನೇ ಪ್ರಮುಖ ಆರೋಪಿಯಾಗಿದ್ದ ಶಶಿಕಲಾಗೆ ನೋಟಿಸ್ ನೀಡಲಾಗಿತ್ತು ಇದನ್ನ ಗಂಭೀರವಾಗಿ ತೆಗೆದುಕೊಂಡ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆ ವಿಧಿಸಿಯೇ ಬಿಡ್ತು.

ಆದ್ರೆ ಆಗಿದ್ದೆಲ್ಲ ಒಳ್ಳೆದಕ್ಕೆ ಎಂಬಂತೆ,ಇನ್ನಾದರೂ ಓ ಪನ್ನೀರ್ ಸೆಲ್ವಂ ಅಧಿಕಾರ ವಹಿಸುತ್ತಾರೆ ಎಂಬ ಊಹಪೋಹಗಳಿಗೆ ತೆರೆ ಬಿದ್ದು ಜಯಲಲಿತಾ ಅವರ ಅಧಿಕಾರ ಜಯಲಲಿತಾ ಅವರ ಆಪ್ತರೇ ಎನಿಸಿಕೊಂಡಿದ್ದ, ಪಳನಿಸ್ವಾಮಿ ಪಾಲಾಯ್ತು ಆದ್ರೆ ಮಾಮೂಲಿಯಂತೆ ಗೃಹ ಖಾತೆ ಪನ್ನೀರ್ ಸೆಲ್ವಂ ಪಾಲಾಯ್ತು. ಜೈಲಲ್ಲಿದ್ದುಕೊಂಡೆ ಆಟವಾಡುತ್ತಿದ್ದ ಶಶಿಕಲಾಗೆ ತೀವ್ರ ಮುಖಭಂಗವಾಯ್ತು ತಾನು ಹಾಕಿದ್ದ ಲೆಕ್ಕಾಚಾರ ಸಂಪೂರ್ಣವಾಗಿ ತಲೆಕೆಳಗಾಯ್ತು ದಿಕ್ಕೇ ತೋಚಂದಾಯ್ತು.

ಆದರೆ ಇದೀಗ ಮತ್ತೊಮ್ಮೆ ಜಯಲಲಿತಾ ಅವರ ಸಾವಿನ ತನಿಖೆ ನಡೆಯಲೇಬೆಕು ಅಂತ ಪಳನಿಸ್ವಾಮಿ ಆಗ್ರಹಿಸ್ತಿದ್ದಾರೆ,ಇದಕ್ಕೆ ಪೂರಕವೆಂಬಂತೆ ಪನ್ನೀರ್ ಅವರ ಸಾಥ್ ಕೂಡ ಇದೆ ಅವರ ಸಾವು ಹೇಗೆ ನಡೆಯಿತು ಅವರಿಗೆ ನೀಡಿದ ಔಷಧಿ ಎಂತದ್ದು ಎಂಬ ಸತ್ಯ ಹೊರಗೆ ಬರಬೇಕು ಇದರಲ್ಲಿ ಶಶಿಕಲಾ ಅವರ ಪಾತ್ರವಿದ್ದರೆ ಅವರಿಗೆ ಮತ್ತೊಮ್ಮೆ ಕಠಿಣ ಶಿಕ್ಷೆ ವಿಧಿಸಬೇಕು ಎಂಬ ಆಗ್ರಹ ಜೋರಾಗಿಯೇ ಕೇಳಿಬರ್ತಿದೆ, ಆದ್ರೆ ಹಿಂದಿನಂತೆ ಸುಪ್ರೀಂ ಇದನ್ನ ಸಿಬಿಐ ಒಪ್ಪಿಸದೆ ಸುಮ್ಮನೆ ಕೂತರೆ ನಿಗೂಢವಾಗೆ ಉಳಿದುಬಿಡುತ್ತೆ ಇದನ್ನ ಗಂಭೀರವಾಗಿ ತೆಗೆದುಕೊಂಡು ಹೋದರೆ,ಶಶಿಕಲಾ ಮತ್ತು ಅವರ ಗ್ಯಾಂಗ್ ಗೆ ಮತ್ತೊಂದು ಕಂಟಕ ಎದುರಾಗೋದು ಗ್ಯಾರಂಟಿ ಸಿಬಿಐ ವಿಚಾರಣೆಯ ಬಲೆಗೆ ಶಶಿಕಲ ಸರಾಗವಾಗೆ ಸಿಕ್ಕಿಹಾಕಿಕೊಳ್ಳೋದರಲ್ಲಿ ಸಂಶಯವಿಲ್ಲ.

Leave a Reply