You are here
Home > ಅಂಕಣ > ಡಿಕೆಶಿ ರಾಜ್ಯದ ಸಿಎಂ ಆಗಲಿ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ

ಡಿಕೆಶಿ ರಾಜ್ಯದ ಸಿಎಂ ಆಗಲಿ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ

Acquistare Pillole Di Caverta ಉಪಸಂಪಾದಕ
ಮಾಲೂರು ಜಿ.ಶಶಿಕುಮಾರ್ ಶೆಟ್ಟಿ

ಮಾನ್ಯ ಶ್ರೀ ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರ ಪುತ್ರ ಹೆಚ್.ಡಿ.ರೇವಣ್ಣ ಇತ್ತೀಚೆಗೆ ಒಂದು ಮಾತು ಹೇಳಿದ್ರು ನೆನಪಿದೆಯಾ ಮತಭಾಂದವ್ರೇ ಒಂದು ವೇಳೆ ಮರೆತಿದ್ರೆ ಹೇಳ್ತೀವಿ ಓದಿ..

ಹೌದು ಇತ್ತೀಚೆಗೆ ಹೆಚ್.ಡಿ.ರೇವಣ್ಣ ಒಂದು ಮಾತು ಹೇಳಿದ್ರು ಅದು ಹೀಗಿದೆ, ದೇವೇಗೌಡರಿಗೆ ಯಾವಾಗ ಬಾಂಬ್ ಹಾಕ್ಬೇಕು ಅಂತ ಚೆನ್ನಾಗಿ ಗೊತ್ತು, ಯಾರಿಗೆ ಹಾಕ್ಬೇಕು ಅಂತ ಕೂಡ ಗೊತ್ತು, ಅವ್ರಿಗೆ ರಾಜಕೀಯ ಯಾರು ಹೇಳಿಕೊಡಬೇಕಿಲ್ಲ ಅಂತ ಹೇಳಿದ್ರು, ಈಗ ನೆನಪಾಯ್ತಾ..

ಇನ್ನು ತಮ್ಮ ಮಗನ ಆಸೆಯಂತೆ ದೇವೇಗೌಡರು ಒಂದು ಬಾಂಬ್ ಹಾಕಿದ್ದಾರೆ. ಅದು ಅಂತಿಂಥ ಬಾಂಬ್ ಅಲ್ಲಾ ಬಿಡಿ.ಕೇಳಿದ್ರೆ ಶಾಕ್ ಆಗ್ತೀರಾ. ಅಂಥದ್ದು ಏನಂತೀರಾ, ಮೊನ್ನೆ ಒಂದು ಕಾರ್ಯಕ್ರಮದಲ್ಲಿ ಡಿ.ಕೆ.ಶಿವಕುಮಾರ್ ಹಾಗೂ ದೇವೇಗೌಡರು ಮುಖಾಮುಖಿ ಒಂದಾಗಿದ್ದಾರೆ. ಈ ಸಮಯದಲ್ಲಿ ಡಿಕೆಶಿಗೆ ಹಾರವನ್ನಾ ಹಾಕಿ ರಾಜ್ಯದ ಮುಂದಿನ ಸಿಎಂ ಆಗಿ ನೀವೇ ಅಂತ ಆಶೀರ್ವಾದ ಮಾಡಿದ್ದಾರಂತೆ..!

ಯಪ್ಪಾ ಏನು ದೇವ್ರೇ ನಿನ್ನ ಲೀಲೇ, ಒಂದು ಅರ್ಥವಾಗ್ತಾ ಇಲ್ಲವಲ್ಲಪ್ಪ. ಒಂದು ಕಡೆ ನೋಡಿದ್ರೆ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಎಇ.ಕುಮಾರಸ್ವಾಮಿ ನಾವೇ ಸಿಎಂ ಆಗ್ಬೇಕು ಅಂಥ ರಾಜ್ಯದ ಪ್ರವಾಸ ಮಾಡಿ ವೋಟ್ ಕೇಳ್ತಾ ಇದ್ದಾರೆ. ಮತ್ತೊಂದು ಕಡೆ ಅವ್ರ ತಂದೆ ಡಿಕೆಶಿ ಗೆ ಆಶೀರ್ವಾದ ಮಾಡಿ ಮುಂದಿನ ಸಿಎಂ ಆಗು ಅಂತಾ ಇದ್ದಾರೆ. ಏನಿದು ದೇವ್ರೇ ನಿಮ್ ಪವಾಡ…

ಇನ್ನು ಎಷ್ಟೋ ಭಾರೀ ತಮ್ಮ ಮಗನಾದ ಕುಮಾರಸ್ವಾಮಿಯವ್ರೇ ಮುಂದಿನ ಸಿಎಂ ಆಗ್ತಾರಂತೆ ಅದೇ ದೇವೇಗೌಡ್ರು ಮೀಡಿಯಾಗಳ ಮುಂದೆ ಹೇಳಿರೋದ್ ಕೂಡ ಸಾಕಷ್ಟು ಭಾರಿ ಕೆಳಿದ್ದೀವಿ ಅಲ್ವಾ. ಮತ್ತೇ ಇದೇನಿದು ಹೊಸ ರಾಜಕೀಯ. ಇದೇ ಇರಬೇಕು ರೇವಣ್ಣ ಹೇಳಿದ್ದು, ಬಾಂಬ್ ಹಾಕೋಕೆ ಚೆನ್ನಾಗಿ ಬರುತ್ತೆ ಅಂತ.

ಹೆಚ್.ಡಿ.ರೇವಣ್ಣ ಆ ಮಾತು ಹೇಳಿದಾಗ ತಮ್ಮ ತಂದೆಯವ್ರ ಬಗ್ಗೆ ಪಾಸಿಟಿವ್ ಆಗಿ ಹೇಳಿದ್ರ ಅಂತ ಅಂದುಕೊಂಡಿದ್ವಿ, ಆದ್ರೆ ಈಗ ಯಾಕೋ ಆ ಮಾತು ವ್ಯಂಗ್ಯವಾಗಿ ಹೇಳಿದ್ದಾರಾ ಅಂತ ಅನುಮಾನ ಶುರುವಾಗ್ತಾ ಇದೆ. ಬದ್ದ ವೈರಿಗಳಂತೆ ಕಾಣುವ ಕುಮಾರಸ್ವಾಮಿ ಹಾಗೂ ಡಿಕೆಶಿ ಮಧ್ಯೆ ಇಂಥದೊಂದು ಮಾತು ದೇವೇಗೌಡರಿಂದ ಬಂದಿದ್ದೇ ಆದ್ರೆ ಏನು ಇದ್ರ ಧ್ವಂಧ್ವರ್ಥ ಗೊತ್ತಾಗುತ್ತಿಲ್ಲ.

ವಕ್ಕಲಿಗ ಜಾತಿ ಅಂದ್ರೆ ಗೌಡ್ರು ಗೌಡ್ರು ಒಂದಾದ್ರಾ..?

ಯಾಕೆ ಅಂದ್ರೆ ಮೊನ್ನೆ ನಡೆದ ಕಾರ್ಯಕ್ರಮದಲ್ಲಿ ಎಲ್ಲಾ ಮುಖಂಡರು ಆಲ್ ಮೋಸ್ಟ್ ವಕ್ಕಲಿಗ ಸಮುದಾಯದವ್ರೇ ಆಗಿದ್ರು ಅಂತೆ. ಓ ಮೇಬಿ ಇರಬೇಕು ನಾವು ಯಾಕೆ ಕಚ್ಚಾಡಿ ಕೊಳ್ಳಬೇಕು ಆದ್ರೇ ನೀನು ಆಗು ಇಲ್ಲಂದ್ರೆ ಕುಮಾರಸ್ವಾಮಿ ಆಗ್ಲಿ ಅಂತ ಮಾತನಾಡಿಕೊಂಡಿರಬೇಕು ಅನಿಸುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ರಾಜ್ಯದ ಅಧಿಕಾರ ನಡೆಸೋದ್ ನಮ್ಮ ಜಾತಿನೇ ಅಲ್ವಾ ಅಂತ ಏನಾದ್ರೂ ಮತ್ತೆ ಒಂದಾಗಿರಬೇಕು ಅನಿಸುತ್ತಿದೆ. ನಮಗೆ ಗೊತ್ತಿಲ್ಲಾ ಆ ಮಾತು ಅವ್ರು ಆಡಿದ್ದಾರೋ ಇಲ್ವೋ ಅಂತ ಬಟ್ ಉನ್ನತ ಮೂಲಗಳಿಂದ ಆ ಮಾತನ್ನು ಆಡಿದ್ದಾರೆ ಎಂಬುವುದಕ್ಕೆ ಹೇಳ್ತಾ ಇದ್ದಿವಿ ಅಷ್ಟೆ. ಒಂದು ವೇಳೆ ಆ ಮಾತು ಅವ್ರು ಆಡಿದ್ದೇ ಆದ್ದಲ್ಲಿ ಯಾಕಿರಬೇಕು ಅಂತ ಅನ್ನೋ ಕುತೂಹಲ ಇದ್ದೇ ಇರುತ್ತೆ ಅಲ್ವಾ..

ವಕ್ಕಲಿಗ ಜಾತಿ ಒಂದಾಗಿ ಕುರುಬ ಜಾತಿಯನ್ನಾ ತುಳಿಯೋ ಕುತಂತ್ರ..?

ಇದನ್ನೆಲ್ಲಾ ನೋಡ್ತಾ ಇದ್ರೆ ಇದು ಯಾಕೋ ಸತ್ಯ ಅನಿಸುತ್ತಿದೆ. ಯಾಕೆಂದ್ರೆ ಸದ್ಯ ರಾಜ್ಯವನ್ನ ಆಳ್ತಿರೋದ್ ಕುರುಬ ಸಮುದಾಯದ ಸಿದ್ದರಾಮಯ್ಯ ಅಲ್ವಾ. ಕುರುಬ ಸಮುದಾಯ ಕೂಡ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ವಕ್ಕಲಿಗ ಸಮುದಾಯ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಇದೆ ಆದ್ರೆ ಕಾಂಗ್ರೆಸ್, ಜೆಡಿಎಸ್ ಅಂತ ಅರ್ಧಮರ್ದವಾಗಿದೆ. ಸೋ ಇದು ಒಂದಾಗಿ ಕುರುಬ ಜಾತಿಯನ್ನಾ ತುಳಿಯಬಹುದು ಅಂತ ಕೂಡ ಇರಬಹುದು ಅಲ್ವೆ..

ಡಿಕೆಶಿ ಮೇಲೆ ಐಟಿ ರೈಡ್ ಆದ ಸಮಯದಲ್ಲಿ ದೇವೇಗೌಡರು ಡಿಕೆಶಿಗೆ ಸಾಥ್?

ಹೌದು ಇತ್ತೀಚಿಗೆ ಡಿಕೆಶಿ ಮನೆ ಮೇಲೆ ಐಟಿ ರೈಡ್ ಆದ ಸಮಯದಲ್ಲಿ ಡಿಕೆಶಿ ದೇವೇಗೌಡರನ್ನು ಸಂಪರ್ಕಿಸಿದ್ದರು ಎನ್ನಲಾಗುತಿದೆ. ಒಂದು ವೇಳೆ ಆ ಸಮಯದಲ್ಲಿ ಡಿಕೆಶಿ ಗೆ ಧ್ಯೇರ್ಯ ತುಂಬಿ ನಾನಿದ್ದೇನೆ ಅಂತ ಹೇಳಿ ಕಳುಹಿಸರಬೇಕು. ಅಥವ ಈ ಸಮಯದಲ್ಲಿ ಡಿಕೆಶಿ ದೇವೇಗೌಡರ ಕಡೆ ವಾಲಿರಬಹುದು ಎಂಬ ಸಂಶಯ ಕೂಡ ಮೂಡೋದ್ರಲ್ಲಿ ತಪ್ಪೇನಿಲ್ಲಾ ಬಿಡಿ. ಯಾಕೆಂದ್ರೆ ನೊಂದ ಮನಸ್ಸಿಗೆ ಮಾಜಿ ಪ್ರಧಾನಿಗಳು ಸಮಾಧಾನ ಹೇಳಿದ್ದಾರೆ ಅಂದ್ರೆ ಅಂಥ ಸಮಯದಲ್ಲಿ ಏನು ಬೇಕಾದ್ರೂ ತೀರ್ಮಾನ ತೆಗೆದುಕೊಂಡಿರಬಹುದು ಅಲ್ವಾ..

ತಾನೇ ತೋಡಿದ ಅಳ್ಳಕ್ಕೆ ತನ್ನನ್ನೇ ಬೀಳಿಸೋ ಅಂತ ರಾಜಕೀಯ ಷಡ್ಯಂತ್ರ ಇರಬೇಕು?

ಯಾರು ತೋಡಿದ ಅಳ್ಳಕ್ಕೆ ಯಾರು ಬೀಳ್ತಾರೆ ಅಂತ ಯೋಚ್ನೆ ಮಾಡ್ತಾ ಇದ್ದೀರಾ. ಈ ಮಾತು ಸಿಎಂ ಸಿದ್ದರಾಮಯ್ಯನವ್ರಿಗೆ. ಯಾಕೆಂದ್ರೆ ಒಂದು ವದಂತಿನೋ ಅಥವ ಸತ್ಯನೋ ಗೊತ್ತಿಲ್ಲಾ ಆದ್ರೆ ಒಂದು ಒಳ ಸಂಚು ನಡೆದಿದೆ ಎನ್ನಲಾದ ಡಿಕೆಶಿ ಮನೆ ಮೇಲೆ ಐಟಿ ರೈಡ್ ಆಗಲು ಸಿದ್ದರಾಮಯ್ಯ ಕೈವಾಡ ಇದೆ ಅನ್ನೋ ಮಾತು. ಇದು ಯಾಕೋ ಡಿಕೆಶಿ ಗೆ ತುಂಬಾ ಮನಸ್ಸು ಕೆದಕಿರಬೇಕು. ಸಿದ್ದರಾಮಯ್ಯ ನವ್ರ ಕೈವಾಡ ಇದೆ ಅಂತ ಡಿಕೆಶಿ ನಂಬಿರಬಹುದು. ಅದ್ಕೆ ಇತ್ತೀಚಿಗೆ ಒಮದು ವೇದಿಕೆಯಲ್ಲಿ ಮುಂದಿನ ಸಿಎಂ ನಾನೇ ಆಗ್ತೀನಿ ಅಂತ ಕೂಡ ಹೇಳಿದ್ರು , ಈಗ ನೋಡಿದ್ರೆ ದೇವೇಗೌಡರ ಜತೆ ಕೈ ಜೋಡಿಸಿದ್ದಾರೆ. ಇವರಿಬ್ಬರು ಸೇರಿಕೊಂಡು ಸಿದ್ದರಾಮಯ್ಯ ರವ್ರನ್ನ ಅಳ್ಳಕ್ಕೆ ತಳ್ಳುವಂಥ ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರಾ..?

ಡಿಕೆಶಿ ಸಿಎಂ ಆದ್ರೆ 20-20 ಆಡಲು ಸುಲಭ ಅಂತ ಇರಬೇಕು ?

ಅಂದ್ರೆ ಡಿಕೆಶಿ ಒಂದು ವೇಳೆ ಮುಖ್ಯಮಂತ್ರಿ ಆದ್ರೆ ಆಗ ಜೆಡಿಎಸ್ ಕೂಡ ಐದು ವರ್ಷದಲ್ಲಿ ನಾವು ಕೂಡ ರಾಜ್ಯವನ್ನಾ ಆಳಬಹುದು ಅಂತ ದೇವೇಗೌಡರು ಸ್ಕೆಚ್ ಆಕಿರಬಹುದು. ಒಂದು ಮ್ಯೂಚ್‍ವಲ್ ಅಂಡರ್‍ಸ್ಟ್ಯಾಂಡಿಂಗ್‍ಗೆ ಬಂದು ಬಿಟ್ರೆ ಮುಂದಿನ ಐದು ವರ್ಷ 20 -20 ಆಡಳಿತ ಮಾಡಬಹುದು ಎಂಬ ಆಸೆಯಿಮದ ಕೂಡ ಇಂಥದ್ದೊಂದು ದೂರದ ಆಲೋಚನೆ ಮಾಡಿರಬಹುದು.

ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಾಭಿಪ್ರಾಯ ಮೂಡಿಸುವ ಪ್ರಯತ್ನ?

ಹೌದು ಇದು ಕೂಡ ಇರಬಹುದು ಕಾಂಗ್ರೆಸ್ ನಲ್ಲಿ ಭಿನ್ನಾಭಿಪ್ರಾಯ ಮೂಡಿಸಿಬಿಟ್ರೆ ಅದ್ರಿಂದ ಜೆಡಿಎಸ್ ಗೆ ಲಾಭ ಆಗಬಹುದು ಎಂಬ ಆಲೋಚನೆ ಕೂಡ ಇರಬಹುದು. ಅಂದ್ರೆ ಡಿಕೆಶಿ ಹಾಗೂ ಸಿದ್ದರಾಮಯ್ಯ ನವ್ರ ಮಧ್ಯೆ ಮುಸುಕಿನ ಗುದ್ದಾಟ ತಂದಿಟ್ಟು ಇದರಿಂದ ತಮ್ಮ ಮಗನನ್ನು ಸಿಎಂ ಮಾಡುವಂಥ ಹುನ್ನಾರ ಇರಬಹುದೇ. ಯಾಕೆಂದ್ರೆ ಅವ್ರಿಗೆ ಬಾಂಬ್ ಹಾಕುವುದಕ್ಕೆ ಚೆನ್ನಾಗಿ ಬರುತ್ತೆ ಅಲ್ವಾ.

ಸಿಎಂ ಸಿದ್ದರಾಮಯ್ಯ ಮೇಲೆ ವ್ಯಯಕ್ತಿಕ ದ್ವೇಷ ದೇವೇಗೌಡರಿಗೆ?

ಹೌದು.. ಸಿದ್ದರಾಮಯ್ಯ ಕಾಂಗ್ರೆಸ್ ಗೆ ಬರುವ ಮುನ್ನಾ ಇದ್ದಿದ್ದು ಜೆಡಿಎಸ್ ಪಕ್ಷದಲ್ಲಿ. ನಂತರ ತನಗೆ ರಾಜಕೀಯ ಹೇಳಿಕೊಟ್ಟ ಗುರುವನ್ನೇ ತೊರೆದು ಕಾಂಗ್ರೆಸ್ ಗೆ ಬಂದ್ರು. ಒಂದು ವೇಳೆ ಈ ಜಿದ್ದಿ ಇನ್ನೂ ದೇವೇಗೌಡರ ಮನಸ್ಸಿನಲ್ಲಿ ಉಳಿದಿರಬೇಕು. ಆ ದ್ವೇಷದಿಂದಲೇ ಹೇಗಾದ್ರೂ ಮಾಡಿ ಸಿದ್ದರಾಮಯ್ಯ ನವ್ರನ್ನ ಮುಂದಿನ ಚುನಾವಣೆಯಲ್ಲಿ ಮನೆಯಲ್ಲಿ ಕೂರಿಸಬೇಕು ಅಂತ ಕೂಡ ಇರಬಹುದು.

ಒಟ್ನಲ್ಲಿ ರಾಜಕೀಯದಲ್ಲಿ ದಿನನಿತ್ಯ ಒಂದೊಂದು ದೊಂಬರಾಟಗಳು ನಡೆಯುತ್ತಲೇ ಇರುತ್ತದೆ. ಇದ್ನೆಲ್ಲಾ ಮೂಖವಿಸ್ಮಯರಂತೆ ಜನ ಬಾಯಿ ಬಿಟ್ಟ್ಕೊಂಡು ನೋಡ್ತಾ ಇರಬೇಕು ಅಷ್ಟೆ. ದೇವೇಗೌಡರು ಒಂದು ವೇಳೆ ಆ ಮಾತು ಅವ್ರ ಬಾಯಿಂದ ಬಂದಿದ್ದೇ ಆದ್ದಲ್ಲಿ ಯಾಕೆ ಅನ್ನೋ ಸಂಶಯಗಳಿಗೆ ಈ ಸಣ್ಣ ಉತ್ತರ ಕೊಡುವ ಪ್ರಯತ್ನ ಅಷ್ಟೆ. ಒಂದು ವೇಳೆ ಅವ್ರು ಡಿಕೆಶಿ ಗೆ ಮುಂದಿನ ಸಿಎಂ ಆಗಿ ಅಂದಿದ್ದೇ ಆದ್ದಲ್ಲಿ ಇದೊಂದು ದೊಡ್ಡ ಮಾಸ್ಟರ್ ಪ್ಲ್ಯಾನ್ ಮಾಡಿ ಸಿದ್ದರಾಮಯ್ಯ ನವ್ರನ್ನ ಮನೆಗೆ ಕಳುಹಿಸೋಕೆ ಅಂತ ಅಷ್ಟೆ. ನೊಡೋಣ ಮುಂದೆ ಏನೆಲ್ಲಾ ಆಗುತ್ತೆ ಅಂತ ಕಾದುನೋಡಬೇಕು..

Leave a Reply