You are here
Home > ರಾಜಕೀಯ > ತಾಜ್ ಮಹಲ್ ಒಂದು ಕಪ್ಪು ಚುಕ್ಕೆ: ಬಿಜೆಪಿ ಶಾಸಕ ಸಂಗೀತ್ ಸೋಮ್

ತಾಜ್ ಮಹಲ್ ಒಂದು ಕಪ್ಪು ಚುಕ್ಕೆ: ಬಿಜೆಪಿ ಶಾಸಕ ಸಂಗೀತ್ ಸೋಮ್

ಉಪಸಂಪಾದಕ
ಮಾಲೂರು ಜಿ.ಶಶಿಕುಮಾರ್ ಶೆಟ್ಟಿ

ತಾಜ್ ಮಹಲ್ ಅಂದ್ರೆ ಅದು ಭಾರತದ ಒಂದು ದೊಡ್ಡ ಐತಿಹಾಸಿಕ ಸ್ಥಳ. ಪ್ರೇಮ ಕಾಣಿಕೆಯ ಸ್ಮಾರಕ ಅಂತ ದೇಶ ವಿದೇಶಗಳಿಂದ ಅಲ್ಲಿಗೆ ಬರುತ್ತಾರೆ. ಆದ್ರೆ ಭಾರತೀಯ ಸಂಸ್ಕøತಿಯಲ್ಲಿ ತಾಜ್ ಮಹಲ್ ಒಂದು ಕಪ್ಪು ಚುಕ್ಕೆ ಅಂತ ಬಿಜೆಪಿ ಶಾಸಕ ಸಂಗೀತ್ ಸೋಮ್ ಹೇಳಿರುವುದು ವಿವಾದಕ್ಕೆ ಗುರಿಯಾಗಿದೆ.

ಹೌದು ಉತ್ತರ ಪ್ರದೇಶ ಸರ್ಕಾರ ಪ್ರವಾಸೋದ್ಯಮ ತಾಣಗಳ ಪಟ್ಟಿಯನ್ನೊಳಗೊಂಡ ಪುಸ್ತಕದಿಂದ ತಾಜ್ ಮಹಲ್ ಅನ್ನು ತೆರವು ಮಾಡಿರುವುದರಿಂದ ಹಲವರಿಗೆ ಹತಾಶೆಯಾಗಿದೆ.

ಯಾವ ಇತಿಹಾಸದ ಬಗ್ಗೆ ನಾವು ಮಾತನಾಡುತ್ತಿದ್ದೇವೇ? ತಾಜ್ ಮಹಲ್ ಕಟ್ಟಿಸಿದ್ದ ಷಹಜಹಾನ್ ತನ್ನ ತಂದೆಯನ್ನೇ ಜೈಲಿಗಟ್ಟಿದ್ದ. ಹಿಂದೂಗಳನ್ನು ಇಲ್ಲವಾಗಿಸಲು ಬಯಸಿದ್ದ. ಇಂಥ ವ್ಯಕ್ತಿಗಳ ನಮ್ಮ ಇತಿಹಾಸದ ಭಾಗವಾದ್ರೆ ಇದು ಬಹಳ ಖೇದಕರ. ಹಾಗೂ ನಾವು ಇತಿಹಾಸವನ್ನು ಬದಲಿಸುತ್ತೇವೆ ಅಂತ ಸೋಮ್ ಹೇಳಿದ್ರು. ಅಂದಹಾಗೇ ಈಗಾಗ್ಲೇ ಈ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಉತ್ತರ ಪ್ರದೇಶ ಸರ್ಕಾರ ಇತ್ತೀಚೆಗೆ ಬಬಿಡುಗಡೆ ಮಾಡಿದ್ದ ಪ್ರವಾಸೋದ್ಯಮ ತಾಣಗಳ ಪಟ್ಟಿಯನ್ನೊಳಗೊಂಡ ಪುಸ್ತಕದಲ್ಲಿ ತಾಜ್ ಮಹಲ್ ಅನ್ನು ಕೈಬಿಡಲಾಗಿತ್ತು. ಈ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.

Leave a Reply