You are here
Home > ವಿಶೇಷ > ದಾವೂದ್ ಕೋಡ್‍ವರ್ಡ್ ಬಹಿರಂಗ;”ಮೋದಿ ಅಂದ್ರೆ ಚೋಟಾ ಶಕೀಲ್”

ದಾವೂದ್ ಕೋಡ್‍ವರ್ಡ್ ಬಹಿರಂಗ;”ಮೋದಿ ಅಂದ್ರೆ ಚೋಟಾ ಶಕೀಲ್”

ಉಪಸಂಪಾದಕ
ಮಾಲೂರು ಜಿ.ಶಶಿಕುಮಾರ್ ಶೆಟ್ಟಿ

ಇಕ್ಬಾಲ್ ಕಸ್ಕರ್ ಅಂದ್ರೆ ಭೂಗತ ಪಾತಕಿ ದಾವೂದ್‍ನ ಸಹೋದರ ಬಂಧನದ ಬಳಿಕ ಡಿ ಕಂಪನಿ ಕುರಿತಂತೆ ಹಲವಾರು ಸ್ಫೋಟಕ ಮಹಿತಿಗಳು ಬಹಿರಂಗಗೊಳ್ಳುತ್ತಿದೆ. ಈವರೆಗೂ ದಾವೂದ್ ಕುರಿತಂತೆ ಬದುಕಿರುವ ಬಗ್ಗೆ ಹಾಗೂ ಆತನ ಚಟುವಟಿಕೆಗೆ, ಆರೋಗ್ಯ ಕುರಿತಂತೆ ಮಾಹಿತಿ ನೀಡಿದ್ದ ಕಸ್ಕರ್ ಇದೀಗ ದಾವೂದ್‍ನ ಡಿ ಕಂಪನಿ ವ್ಯವಹಾರಗಳ ಕರಿತಂತೆ ಮಾಗಿತಿಗಳನ್ನು ಬಾಯ್ಬಿಟ್ಟಿದ್ದಾನೆ.

ಕ್ರಿಮಿನಲ್ ಕಾರ್ಯಾಚರಣೆಗಳನ್ನು ನಡೆಸಲು ದಾವೂದ್ ಮತ್ತು ಡಿ ಕಂಪನಿ ಕೆಲವು ಸಿಕ್ರೇಟ್ ಕೋಡ್‍ವರ್ಡ್ ಬಳಸುತ್ತಿದ್ದ ಬಗ್ಗೆ ಕಸ್ಕರ್ ರಹಸ್ಯ ಬಿಚ್ಚಿಟ್ಟಿದ್ದಾನೆ.

ಪ್ರಧಾನಿ ಮೋದಿ ನರೇಂದ್ರ ಮೋದಿ ಅವರನ್ನು ಚೋಟಾ ಶಕೀಲ್ ಎಂಬ ಹೆಸರಿನಿಂದ ಹಾಗೂ ದೆಹಲಿಯನ್ನು ಕರಾಚಿ ಎಂಬ ಗುಪ್ತ ಸಂಕೇತದಿಂದ ಗುರುತಿಸಲಾಗುತ್ತಿತ್ತು ಎಂಬ ಸಂಗತಿ ಬಹಿರಂಗಪಡಿಸಿದ್ದಾನೆ.

ಅಂದಹಾಗೇ ಘೋರ ಅಪರಾಧ ಕೃತ್ಯಗಳಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕುಖ್ಯಾತಿ ಪಡೆದಿರುವ ಡಿ-ಕಂಪನಿ ಮುಖ್ಯಸ್ಥ ದಾವೂದ್‍ನನ್ನು ಬಡೇ ಎಂದು ಪೊಲೀಸ್ ವ್ಯಾನ್‍ನನ್ನು ಡಬ್ಬಾ ಅಂತ ಕರೆಯಲಾಗುತ್ತಿತ್ತು.

ಎಕ್ ಪೇಟಿ (ಎಕ್ ಡಬ್ಬಾ) ಅಂದ್ರೆ 1 ಲಕ್ಷ ರೂ.ಗಳು ಹಾಗೂ ಎಕ್ ಖೋಕಾ (ಏಕ್ ಬಾಕ್ಸ್) ಅಂದ್ರೆ 1 ಕೋಟಿ ರೂ.ಗಳು ಎಂಬ ಕೋಡ್‍ವರ್ಡ್‍ನಿಂದ ಗುರುತಿಸಲಾಗುತ್ತಿತ್ತು ಎಂಬ ವಿಷಯವನ್ನು ದಾವೂದ್ ಸಹೋದರ ಕಸ್ಕರ್ ತನಿಖಾಧಿಕಾರಿಗಳ ಮುಮದೆ ಬಾಯ್ಬಿಟ್ಟಿದ್ದಾನೆ.

ಅಂದಹಾಗೇ ತನ್ನ ಆಪರೇಟರ್‍ಗಳೊಂದಿಗೆ ಮಾತನಾಡುವಾಗ ಡಿ-ಕಂಪನಿಯಲಲಿ ಈ ರಹಸ್ಯ ಸಂಕೆತಗಳು ಬಹುವಾಗಿ ಚಾಲನೆಯಲ್ಲಿದ್ದವು. ತನ್ನ ಸಹೋದರರಾದ ದಾವೂದ್ ಮತ್ತು ಅನೀಸ್ ಇಬ್ರಾಹಿಂ ಪಾಕಿಸ್ತಾನದಲ್ಲೇ ಇದ್ದಾರೆ ಅಂತ ಆತ ವಿಚಾರಣೆ ವೇಳೆ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾನೆ.

Leave a Reply