You are here
Home > ಎಲೆಕ್ಷನ್ ಟೈಮ್ > ನಾಲ್ಕುವರ್ಷದ ಸಿದ್ದುವಿನ ಕರ್ಮಕಾಂಡ..

ನಾಲ್ಕುವರ್ಷದ ಸಿದ್ದುವಿನ ಕರ್ಮಕಾಂಡ..

ಉಪಸಂಪಾದಕ
ಮಾಲೂರು ಜಿ.ಶಶಿಕುಮಾರ್ ಶೆಟ್ಟಿ

 

 

ಹಾಯ್ ಸಿದ್ದರಾಮಣ್ಣ ಹೌ ಆರ್ ಯು? ಹೇ ಚೆನ್ನಾಗಿಯೇ ಇರ್ತೀರಾ ಬಿಡಿ, ನಿದ್ದೆ ಮಾಡಿಕೊಂಡು ಹೇಗೋ ನಾಲ್ಕು ವರೆ ವರ್ಷ ಕಳೆದಿದ್ದು ಆಯ್ತು. ಇನ್ನೇನು ಆರೇಳು ತಿಂಗಳಿದೆ ಆರಾಮಾಗಿ ಟೈಂ ಪಾಸ್ ಮಾಡಿ. ಇನ್ನ್ ನಮ್ ಜನಗಳಾ ನೀವ್ ನಿದ್ದೆ ಆದ್ರೂ ಮಾಡಿಕೊಳ್ಳಿ, ಅಥವ ಇನ್ನೊಂದಾದ್ರು ಮಾಡಿಕೊಳ್ಳಿ ಅವ್ರಿಗೆ ಬೇಕಾಗಿರೋದ್ ಎಲೆಕ್ಷನ್ ಟೈಂನಲ್ಲಿ ಕ್ವಾಟ್ರೂ ಜೊತೆಗೆ ಒಂದು ಪ್ಲೇಟ್ ಚಿತ್ರನ್ನಾ ಅಷ್ಟೆ.

ಆಡಿ ಆಟ ಆಡಿ ನಿಮ್ಮನ್ನ ಕೇಳೋರೂ ಯಾರ್ ಸ್ವಾಮಿ ನೀವ್ ಮಾಡಿದ್ದೆ ಸರ್ಕಾರ, ಕಾನೂನು ಎಲ್ಲವೂ ಅಲ್ವಾ, ಇನ್ನು ಅಷ್ಟು ಇಲ್ದೆ ಇಡೀ ದೇಶದಲ್ಲೇ ಪ್ರಬಲ್ಯವಾಗಿದ್ದ ಲೋಕಯುಕ್ತಕ್ಕೆ ಹಲ್ಲು ಕಿತ್ತು ಮೂಲೆಗುಂಪು ಮಾಡಿದವ್ರು ನೀವು, ಎಷ್ಟು ದಿನ ಆಡ್ತೀರಾ ಆಡಿ ಆದ್ರೆ ಜನಗಳಿಗೆ ಅರ್ಥ ಆಗುವ ತನಕ ನಿಮ್ ದೊಂಬರಾಟ ನಡೆಯುತ್ತೆ ಆಮೇಲೆ ಇದೆ ನಿಮಗೆ ಮಾರಿ ಹಬ್ಬ..

ನಾನು ವಿಧಾನಸೌಧದಲ್ಲಿ ಮಲ್ಕೊಂಡು ಗೊರ್ಕೆ ಹಾಕಿದ್ರೆ ಮೀಡಿಯಾಗಳು ವಿಲವಿಲ, ಪಕ್ಕದಲ್ಲಿ ಇರೋರ್ ತಳಮಳ, ಇನ್ನು ನಿದ್ದೆ ಮಾಡಿ ಕಣ್ಣು ಬಿಟ್ರೆ ಎಸಿಬಿ ಗಢಗಢ ಕಣೋ , ಇದು ಸಿದ್ದುವಿನ ಕೋಟೆ ಕಣೋ ಅಂತ ಮೆರೆಯುತ್ತಿದ್ದೀರಾ ಮೆರೆಯಿರಿ ಎಷ್ಟು ದಿನ ನಿಮ್ ಕೋಟೆ ಆಗಿರುತ್ತೆ ನೋಡ್ತೀವಿ ಅಂತ ಜನ ವಿರೋಧ ಪಕ್ಷಗಳು ಗುರುಗಡುಸಿಕೊಂಡು ನೋಡ್ತಾ ಇವೆ.

ನೀವ್ ಯಾವಾಗ ಕೆಪಿಸಿಸಿ ಮೆಟ್ಟಿಲು ಹತ್ತೋವಾಗ ಕಾಲು ಎಡವಿದ್ರೋ ಆಗ್ಲೇ ಜನಕ್ಕೆ ಅರ್ಥವಾಗಿದೆ ನಿಮಗಿನ್ನೂ ಕಾಂಗ್ರೆಸ್ ಹೊಂದಾಣಿಕೆ ಆಗಿಲ್ಲ ಅಂತ. ಯಾಕೋ ಒಂದು ದೌಟು ನೀವ್ ಮೂಲತಃ ಜೆಡಿಎಸ್ ನವ್ರು ಅಲ್ವಾ ಅದ್ಕೆ ಕಾಂಗ್ರೆಸ್ ಪಕ್ಷಕ್ಕೆ ಅವಮಾನ ಮಾಡಬೇಕು ಅಂತ ಹಿಂಗೆಲ್ಲಾ ಮಾಡ್ತಾ ಇದ್ದೀರಾ ಮಾನ್ಯ ಶ್ರೀ ಸಿದ್ದರಾಮಯ್ಯ ನವ್ರೆ.

ಎಸಿಬಿ ಅಂದ್ರೆ ಭ್ರಷ್ಟಾಚಾರ ನಿಗ್ರಹ ದಳ ಯಪ್ಪಾ ಯಾವ ನಿಗ್ರಹ ದಳನೋ ಗೊತ್ತಾಗ್ತಾ ಇಲ್ಲಾ ಸ್ವಾಮಿ. ಶ್ರೀಶ್ರೀಶ್ರೀ ಮಾನ್ಯ ಪೂಜ್ಯಾ ಮುಖ್ಯಮಂತ್ರಿ ಸಿದ್ದರಾಮಯ್ಯ ನವ್ರ ಸುಮಾರು 40 ಪ್ರಕರಣಗಳಿಗೂ ಹೆಚ್ಚಿನ ಪ್ರಕರಣಗಳನ್ನಾ ಮುಚ್ಚಿ ಹಾಕಿರುವ ಎಸಿಬಿ, ಇದು ಯಾವ ಸೀಮೆ ಭ್ರಷ್ಟಾಚಾರ ನಿಗ್ರಹ ದಳ ಅಂತ ಜನ ಮಾತಾಡ್ತಾ ಇದ್ದಾರೆ.

ನೀವ್ ಯಾವಾಗಾ ಲೋಕಾಯುಕ್ತಕ್ಕೆ ಹಲ್ಲು ಕಿತ್ತು ಎಸಿಬಿ ತಂದ್ರೋ ಆಗ್ಲೇ ಜನಕ್ಕೆ ಅರ್ಥವಾಗಿದೆ ಇದು ನೀವುಗಳು ಮಾಡೋ ಅನಾಚಾರಗಳಿಗೆ ತೇಪೆ ಹಚ್ಚಲು ಅಂತ. ಹೋ ನಿಮ್ದೆ ಅಲ್ವಾ ಸರ್ಕಾರ ಈಗ ಕ್ಷಮಿಸಿ, ಮರೆತುಬಿಟ್ಟಿದ್ದಿವಿ ನೀವ್ ಏನ್ ಬೇಕಾದ್ರೂ ಮಾಡಬಹುದು ಅಲ್ವಾ ಒನ್ಸ್ ಅಗೈನ್ ಸ್ವಾರಿ ರೀ, ಪ್ಲೀಸ್ ಆಸ್ರೆ ಕ್ಷಮಿಸಿ ಬಿಡಿ.

ನಿಮ್ಮ ಮೇಲೆ ವಾಚ್ ಹಗರಣ ಒಂದು ಬಂತು ಅಲ್ವಾ, ಆ ವಾಚ್ ನ ಮಾರಿದ್ರೆ ಸಾವಿರ ಕುಟುಂಬಗಳು ಒಂದು ವರ್ಷ ಊಟ ಮಾಡಿಕೊಂಡು ಜೀವನ ಸಾಗಿಸಬಹುದು. ಅಲ್ಲಾ ಸ್ವಾಮಿ ನೀವ್ ಬಂದಿದ್ದು ಅಹಿಂದ ಅನ್ನೋ ಹೆಸ್ರನ್ನಾ ಇಟ್ಟುಕೊಂಡು ಆದ್ರೆ ಅಧಿಕಾರ ಸಿಕ್ಕಿದ ಕೂಡ್ಲೆ ಎಲ್ಲಾ ಹೈಪೈ ಯಾ. ನೀವ್ ಆ ವಾಚ್ ನ ನೀವೆ ಖರೀದಿ ಮಾಡಿದ್ರಾ ಅಥವ ಯಾರೋ ಬೇರೆಯವ್ರು ಮಾಡಿರೋ ತಪ್ಪುಗಳನ್ನು ಮುಚ್ಚಿ ಹಾಕ್ತೀವಿ ನೀವ್ ಏನು ಕೊಡ್ತೀರಾ ಅಂತ ಕೇಳಿದಾಗ ಆ ದುಬಾರಿ ವಾಚ್ ಕೊಟ್ಟಿರಬಹುದೇನೋ ಗೊತ್ತಿಲ್ಲ ಆದ್ರೆ ನಿಮಗೆ ವಾಚ್ ಅವಶ್ಯಕತೆ ಇತ್ತಾ ಸ್ವಾಮಿ.

ನೀವ್ ದುಬಾರಿ ವಾಚ್ ನ ಹಾಕೊಂಡು ಓಡಾಡೋ ಸಮಯದಲ್ಲಿ ರೈತರ ಆತ್ಮಹತ್ಯೆಗಳು ಹೆಚ್ಚಾಗಿದ್ದವು ನಮ್ಮ ರಾಜ್ಯದಲ್ಲಿ, ಅವ್ರ ಸಾವು ಎಷ್ಟು ಗಂಟೆಗೆ ಆಯ್ತು, ಅಥಗ ಎಷ್ಟು ಗಂಟೆಗೆ ಸಾಯ್ತಾರೆ ಅಂತ ಟೈಂ ನೋಡೋಕೆ ಅಷ್ಟು ದುಬಾರಿ ವಾಚ್ ನ ಹಾಕಿಕೊಂಡ್ರ ಸಿದ್ದರಾಮಯ್ಯನವ್ರೆ.

ಈ ನಾಲ್ಕು ವರೆ ವರ್ಷದಲ್ಲಿ ಆದ್ದಂಥ ರೈತರ ಆತ್ಮಹತ್ಯೆಗಳು ಬೇರೆ ಯಾವ ಸರ್ಕಾರದಲ್ಲೂ ಆಗಿಲ್ಲ ಅನಿಸುತ್ತೆ. ಅರೇರೇ ದಿನಕ್ಕೆ ಮೂರು ನಾಲ್ಕು ರೈತರ ಆತ್ಮಹತ್ಯೆಗಳು. ಹಾಗಂತ ರೈತರು ಆತ್ಮಹತ್ಯೆ ಮಾಡಿಕೊಳ್ಳೋದ್ ಸರಿ ಅಂತ ಹೇಳ್ತಾ ಇಲ್ಲಾ, ಆ ಸಾವಿಗೆ ನಿಮ್ಮ ಸರ್ಕಾರ ಕೂಡ ನೇರ ಹೊಣೆ ಅನ್ನೋದ್ನ ಮರೆಯಬೇಡಿ. ಆ ಶಾಪ ನಿಮ್ನ ಬಿಡೋದಿಲ್ಲ.

ನಿಮ್ ಸಂಪುಟದಲ್ಲಿನ ಕೆಲವು ರಾಜಕಾರಣಿಗಳು ಅಯ್ಯಯ್ಯಪ್ಪಾ ಹೇಳೋದಕ್ಕೆ ಒಂದು ತರ ನಾಚಿಕೆ ಆಗುತ್ತೆ. ಆ 18 ವರ್ಷದ ತುಂಟ, ಹೆಚ್.ವೈ.ಮೇಟಿ ರವ್ರ ರಾಸಲೀಲೆ ಅಂತು ಜನಕ್ಕೆ ನಿಮ್ಮ ಸರ್ಕಾರದಿಂದ ಒಳ್ಳೆ ಮಸಾಲೆ ಸಿನಿಮಾ ಬಿಡಿ. ಇಂಥ ಸಿನಿಮಾಗಳು ತುಂಬಾ ಇದೆ ನಿಮ್ಮ ಪಕ್ಷದವ್ರ ಬಳಿ, ಬಟ್ ಹೊರಗಡೆ ಸಿಗ್ತಾ ಇಲ್ಲ ಅಷ್ಟೆ. ಅವರು ಅವ್ರು ಮಾಡಿದ ಪಾಪ ಅವ್ರಿಗೆ ಅನ್ನೋ ಮಾತು ಇದೆ ನೋಡೋಣ ಮುಂದಿನ ದಿನಗಳಲ್ಲಿ ಚಳಿಗಾಲಕ್ಕೋ ಮಳೆಗಾಲಕ್ಕೋ ಯಾವುದಾದ್ರೂ ಒಂದು ವಿಡೀಯೋ ಹೊರಬಹುದು.
ಮತ್ತೆ ಮೇಟಿ ರಾಸಲೀಲೆ ಪ್ರಕರಣಕ್ಕೆ ಕ್ಲೀನ್ ಚಿಟ್ ಬೇರೆ. ಯಾರು ಗುರು ಇವರೆಲ್ಲಾ ಅನಿಸಿಬಿಡುತ್ತೆ ಇವೆಲ್ಲಾ ನೋಡ್ತಾ ಇದ್ರೆ.

ಬಡ ಜನ ತಿನ್ನೋ ತಟ್ಟೆಯಲ್ಲಿ ಒಂದು ವೇಳೆ ಹುಳನೋ ಮತ್ತೊಂದು ಸಿಕ್ಕಿದ್ರು ಅದ್ನ ತೆಗೆದು ಊಟ ಮಾಡ್ತಾರೆ. ಇನ್ನು ಅಂತೋಂದ್ರಲ್ಲಿ ನೀವ್ ಕಾರಿನ ಮೇಲೆ ಒಂದು ಪಕ್ಷಿ ಅಂದ್ರೆ ಕಾಗೆ ಕೂರಿತು ಅಂತ ಕಾರನ್ನೇ ಚೇಂಜ್ ಮಾಡಿದ್ರಿ ಅಲ್ವಾ ಇನ್ನು ಎಷ್ಟರ ಮಟ್ಟಿಗೆ ನಿಮ್ಮಲ್ಲಿ ಮೂಢನಂಬಿಕೆ ಇದೆ ಹಾಗೂ ಇನ್ನು ಎಷ್ಟು ಅಹಂ ಇರಬೇಕು ಏ ಚೇಂಜ್ ದಿ ಕಾರ್ ಅಂತೀರಾ ಅಲ್ಲಾ, ಯಾರ್ದು ಸ್ವಾಮಿ ಕಾರು, ನಿಮ್ದ ಅಥವ ನೀವ್ ಕೂಲಿ ಮಾಡಿ ತಗೊಂಡ್ರಾ. ಯಾವ್ದು ಇಲ್ವೆ ಜನಗಳ ತೆರಿಗೆ ತಾನೆ ಅದು.

ನಿದ್ದೆ ಮಾಡುವುದು ಅದು ಒಂದು ಕಾಯಿಲೆ ಅಂತ ಹೇಳಿದ್ರಿ ಓಕೆ ಅಯ್ಯೋ ಪಾಪ ಬಿಡಿ ಅಂತ ಸುಮ್ನೆ ಇದ್ರು ಜನ, ಆದ್ರೆ ಇದು ಯಾವ್ದು ಸ್ವಾಮಿ ಟಂಗ್ ಸ್ಲಿಪ್. ಎಷ್ಟು ಸಲ ನೀವ್ ಟಂಗ್ ಸ್ಲಿಪ್ ಆಗಿರೋದ್ ಸುಮಾರು ಸಲ ಸ್ಲಿಪ್ ಆಗಿದೆ. ಅದ್ರಲ್ಲೂ ಒಂದು ವೇದಿಕೆಯಲ್ಲಿ ನಿಮ್ಮದೇ ಪಕ್ಷದ ಬಗ್ಗೆ ನಿಂದಿಸಿಕೊಂಡಿದ್ದು ಅಂತು ಫುಲ್ ಕಾಮಿಡಿ ಬಿಡಿ. ಇನ್ನು ಇತ್ತಿಚಿಗೆ ಸ್ವಾತಂತ್ರ್ಯ ಬಂದಿದ್ದು 1951 ಅಂತೀರಾ ಏನ್ರೀ ನಿಮ್ ಪ್ರಾಬ್ಲಂ ಇದು ಕೂಡ ಖಾಉಇಲೆ ಇರಬಹುದು ಅಂತ ಜನ ಮಾತನಾಡಿಕೊಳ್ತಾ ಇದ್ದಾರೆ, ಯಾವುದಕ್ಕೂ ಒಂದು ಸಲ ಚೆಕ್ ಮಾಡಿಸಿಕೊಳ್ಳಿ. ಅದ್ನ ಬಿಟ್ಟು ನಿಮ್ಮ ಅಮೂಲ್ಯವಾದ ಭಾಷಣವನ್ನಾ ಕೇಳೋಕೆ ಜನ ಕಾಯ್ತಾ ಇರ್ತಾರೆ ಪಾಪ, ಅವರ ಎದುರು ನಗೆಬಾಟ್ಲುಮಾಡಿಕೊಳ್ಳಬೇಡಿ.

 

ನಿಮ್ಮಗೆ ತುಂಬಾ ಅಹಂ ಇದೆ ಅಂತ ನಿಮ್ಮ ಪಕ್ಷದವ್ರೆ ಆದ ಜನಪ್ರಿಯ ನಾಯಕರು ಎಸ್.ಎಂ.ಕೃಷ್ಣ, ಹಾಗೂ ಶ್ರೀನಿವಾಸ್ ಪ್ರಸಾದ್ ನಿಮ್ಮ ಪಕ್ಷವನ್ನ ಬಿಟ್ಟು ಬೇರೆ ಪಕ್ಷಕ್ಕೆ ಹೊದಾಗ್ಲೇ ನಿಮ್ಮ ಬಂಡವಾಳ ಜನಕ್ಕೆ ಅರ್ಥವಾಗಿರುತ್ತೆ. ಅಂಥ ಧೀಮಂತ ನಾಯಕ್ರೆ ನಿಮ್ಮ ಸಹವಾಸ ಬೇಡ ಅಂತ ಹೋಗಿದ್ದಾರೆ ಅಲ್ವಾ ಇನ್ನು ಜನ ಕೂಡ ಆ ಕೆಲಸ ಮಾಡಬಹುದು ಅತೀ ಶೀಘ್ರದಲ್ಲಿ..

ಇನ್ನು ಇತ್ತಿಚೆಗೆ ಡಿ.ಕೆ.ಶಿವಕುಮಾರ್ ರವ್ರ ಮನೆಯ ಮೇಲೆ ದಾಳಿ ಆಗುವುದಕ್ಕೆ ನಿಮ್ಮ ಕೈವಾಡ ಕೂಡ ಇದೆ ಅಂತ ಸ್ವತಃ ಅವ್ರ ತಾಯಿನೇ ಹೇಳಿದ್ರು. ಆ ಮಾತು ಕೂಡ ಸತ್ಯನೇ ಅನಿಸುತ್ತೆ ಕೆಲವೊಂದು ನಿಮ್ಮ ನಡೆಗಳ್ನಾ ನೋಡ್ತಾ ಇದ್ರೆ. ಇನ್ನು ಡಿಕೆಶಿ ಪ್ರಭಾವಿ ರಾಜಕಾರಣಿ ಅವ್ರನ್ನ ಮಟ್ಟ ಹಾಕಿದ್ರೆ ಮುಂದಿನ ಎಲೆಕ್ಷನ್ ನಲ್ಲೂ ನಾನೇ ಸಿಎಂ ಆಗಬಹುದು ಆಗಬಹುದು ಎಂಬ ದುರಾಲೋಚ್ನೆ ಯಿಂದ ಕೂಡ ಈ ಕೆಲಸ ಮಾಡಿಸಿರಬಹುದು ಅಲ್ವಾ ಅಂತ ನಾವು ಹೇಳ್ತಾ ಇಲ್ಲ, ರಾಜ್ಯದ ಜನತೆ ಹೇಳ್ತಾ ಇದ್ದಾರೆ.

ಇನ್ನು ಎಷ್ಟೋ ನಿಷ್ಟಾವಂಥ ಅಧಿಕಾರಿಗಳನ್ನ ಎತ್ತಂಗಡಿ ಮಾಡಿಸಿದ್ರಿ, ಸುಮಾರು ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡ್ರು, ಇನ್ನು ಭಾಗ್ಯಗಳನ್ನು ತಂದ್ರಿ ಅದ್ರಲ್ಲಿ ಕೆಲವೊಂದು ಭಾಗ್ಯಗಳು ಜನಕ್ಕೆ ಮುಟ್ತಾ ಇಲ್ಲಾ, ಅಲ್ಲಿ ಕೂಡ ವಿಫಲರಾಗಿದ್ದೀರಿ, ಇನ್ನು ಇಷ್ಟು ವರ್ಷ ಇಲ್ದೇ ಇರೋದ್ ಸಡನ್ನಾಗಿ ಇಂದಿರಾ ಕ್ಯಾಂಟೀನ್ ಓಪನ್ ಮಾಡಿದ್ದೀರಾ ಅದು ಎಲೆಕ್ಷನ್ ಹತ್ತಿರದಲ್ಲಿ ಇದೆ ಅಂತ. ಅದು ಕೂಡ ನೋಡೇ ಬಿಡೋಣ ಎಲೆಕ್ಷನ್ ಮುಗಿದಮೇಲೆ ಇಂದಿರಾ ಕ್ಯಾಂಟೀನ್ ಇರುತ್ತಾ ಅಂತ..

ರಾಜ್ಯದ ಜನತೆ ನಿಮ್ಮ ಮುಂದೆ ಇಡ್ತಾ ಇರೋ ನಿಮ್ಮ ದೌರ್ಬಲ್ಯಗಳು ಇವು ಸಿದ್ದರಾಮಯ್ಯ ನವ್ರೆ, ನೋಡೋಣ ಈ ಆರ್ಟಿಕಲ್ ನಿಮ್ಮ ಬಳಿ ಬಂದ್ರೆ ಒಂದು ವೇಳೆ ರಾಜ್ಯದ ಜನತೆ ನಿಮಗೆ ಹೇಳಬೇಕಾಗಿರುವುದ್ನಾ ಈ ಆರ್ಟಿಕಲ್ ಮೂಲಕ ಹೇಳ್ತಾ ಇದ್ದಿವಿ ಅಷ್ಟೆ.
ನೋಡೋಣ ಮುಂದಿನ ದಿನಗಳಲ್ಲಿ ಏನೇನೂ ಆಗುತ್ತೋ ಗೊತ್ತಿಲ್ಲಾ ಆದ್ರೆ ಸಿದ್ದರಾಮಯ್ಯ ನವ್ರೆ ನೀವ್ ಮಾಡಿದ್ದು ಸರಿನಾ ಅಂತ ನೀವೇ ಒಂದು ಸಲ ನಿಮ್ಮ ಮನಸ್ಸಿಗೆ ಪ್ರಶ್ನೆ ಹಾಕಿ ಆಗ ಗೊತ್ತಾಗುತ್ತೆ. ನೀವ್ ಏನೆಲ್ಲಾ ಮಾಡಿದ್ರಿ ಅಂತ…..

Leave a Reply