You are here
Home > ಅಂಕಣ > ನಿತ್ಯಾನಂದನಿಗೆ ಮತ್ತೆ ಶುರುವಾಯ್ತು ಕಂಟಕ..! ಏನದು?

ನಿತ್ಯಾನಂದನಿಗೆ ಮತ್ತೆ ಶುರುವಾಯ್ತು ಕಂಟಕ..! ಏನದು?

 

ಉಪಸಂಪಾದಕ
ಮಾಲೂರು ಜಿ.ಶಶಿಕುಮಾರ್ ಶೆಟ್ಟಿ

ಒಂದು ಕಡೆ ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿ ಜೈಲಿನಲ್ಲಿ ಮುದ್ದೆ ಊಟ ಮಾಡುತ್ತಿರುವ ಡೇರಾಸಚ್ಛೌಧ ಮುಖ್ಯಸ್ಥ ರಾಮ್‍ರಹೀಂಸಿಂಗ್, ಇನ್ನು ಮತ್ತೊಂದು ಕಡೆ ರಹೀಂಗೆ ಕಂಪನಿ ಕೊಡಲು ನಿತ್ಯಾನಂದ ಕೂಡ ಹೋಗಿಲಿದ್ದಾನೆ ಎಂಬ ಮುನ್ಸೂಚನೆ ಕಾಣಿಸುತ್ತಿದೆ.

ಹೌದು ಬಿಡದಿಯ ಸ್ವಯಂಘೋಷಿತ ದೇವಮಾನವ ನಿತ್ಯಾನಂದನಿಗೂ ನಸೀಬ್ ಕೆಟ್ಟಿದೆ ಅನಿಸುತ್ತೆ. ಕಾನೂನಿನ ಬಿಸಿ ನಿತ್ಯಾನಂದನಿಗೂ ಅತೀ ಶೀಘ್ರದಲ್ಲೇ ಮುಟ್ಟಲಿದೆ.

ನಿತ್ಯಾನಂದ ಅಂದ್ರೆ ಇವತ್ತು ಕಾಮಿಡಿ ಫೀಸ್ ಪದವಾಗಿಬಿಟ್ಟಿದೆ. ಒಂದಾನೊಂದು ಕಾಲದಲ್ಲಿ ಸ್ವಯಂಘೋಷಿತ ದೇವಮಾನವನಾಗಿ ಮೆರೆದು ನಂತರ ಒಮದು ಮಸಾಲೆ ವಿಡೀಯೋ ನಮ್ ಪಡ್ಡೆ ಹೈಕ್ಳುಗೆ ಸಿಕ್ಕಿತು ನೋಡಿ ಸ್ವಾಮಿ ಅಷ್ಟೆ, ಅವತ್ತಿನಿಂದ ಇವತ್ತಿನವರೆಗೂ ನಿತ್ಯಾನಂದನ ಹೆಸ್ರು ಎಷ್ಟೋ ಕಾಮಿಡಿ, ಅಸಹ್ಯವಾಗಿಬಿಟ್ಟಿದೆ ಅಂದ್ರೆ ಯಪ್ಪಾ ಹೆಳೋಕೆ ಬೇಜಾರ್ ಆಗುತ್ತೆ.

ಅರೇ ಇದು ಹಳೇ ಕೇಸ್ ಅಲ್ವಾ ಮತ್ತೆ ಯಾಕೆ ಈಗ ಹೇಳ್ತಾ ಇದ್ದಾರೆ ಅಂತ ಯೋಚ್ನೆ ಮಾಡ್ತಾ ಇದ್ದೀರಾ ಅಲ್ವಾ, ಅದ್ಕೆ ಕಾರಣ ಇದೆ ಸ್ವಾಮಿ. ಅದು ಬರೀ ಹತ್ತು ದಿನಗಳಲ್ಲಿ ನಿತ್ಯಾನಂದನ ಮೇಲೆ ಇರುವಂಥ ಪ್ರಕರಣಗಳನ್ನು ಅತೀ ಶೀಘ್ರದಲ್ಲೇ ಸುಪ್ರೀಂಕೋರ್ಟ್ ಕೈಗೆತ್ತಿಗೊಳ್ಳಬೇಕು ಅಂತ ಕೇಂದ್ರ ಸರ್ಕಾರ ಮನವಿ ಮಾಡಿದೆ.

ಈ ಹಿನ್ನೆಲೆ ಬಿಡದಿಯ ಶ್ರೀ ಶ್ರೀ ಶ್ರೀ ನೋ ಸ್ತ್ರೀ ಸ್ತ್ರೀ ಸ್ತ್ರೀ ನೋ ಅಂತಾರೆ ಅಲ್ವಾ ನಿತ್ಯಾನಂದ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ಮುಂದಿನ ವಾರ ಸುಪ್ರೀಕೋರ್ಟ್‍ನಲ್ಲಿ ವಿಚಾರಣೆ ನಡೆಯಲಿದೆ.

2010ರಲ್ಲಿ ನಿತ್ಯಾನಂದನ ವಿರುದ್ಧ ದಾಖಲಾಗಿದ್ದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆ ನಡೆಸಿ ಹೈಕೋಟ್‍ಗೆ ಚಾರ್ಜ್‍ಶೀಟ್ ಸಲ್ಲಿಸಿದೆ. ಚಾರ್ಜ್‍ಶೀಟ್‍ನಲ್ಲಿ ನಿತ್ಯಾನಂದ ಅತ್ಯಾಚಾರ ನಡೆಸಿರುವುದು ಸಾಬೀತಾಗಿದೆ ಅಂತ ಹೇಳಲಾಗಿದೆ.

ನಿಮಗೆ ಗೊತ್ತಿರಬೇಕು, ಏ ನೆನಪಿಲ್ಲದೇ ಇರುತ್ತಾ, ನೆನಪು ಇರುತ್ತೆ ಬಿಡಿ, ನಮ್ ಗೆಸ್ ಕರೆಕ್ಟ್ ಆದ್ರೆ ಆ ವಿಡೀಯೋ ನಿಮ್ಮ ಬಳಿ ಇರುತ್ತೆ ಅಂತ ಅಲ್ವಾ, ಇದೆ ತಾನೆ ಏ ಬಿಡಿ ಆ ವೀಡಿಯೋನ ಯಾರಾದ್ರೂ ಡಿಲೆಟ್ ಮಾಡ್ತಾರಾ ಚಾನ್ಸೆ ಇಲ್ಲ. ಯಾಕೆಂದ್ರೆ ಅಷ್ಟೊಂದು ಲೈವ್ ಮಸಾಲೆಯನ್ನ ಯಾರು ಡಿಲೆಟ್ ಮಾಡ್ತಾರೆ ಅಲ್ವಾ.

ಆ ಸ್ವಯಂಘೋಷಿತ ದೇವಮಾನವ ನಿತ್ಯಾನಂದ ನಡೆಸಿದ ಪ್ರಕರಣ ಇಡೀ ರಾಷ್ಟ್ರಾದ್ಯಂತ ಸುದ್ದಿಯಾಗಿತ್ತು. ಬರೀ ಈ ಯಪ್ಪ ಒಂದು ಮಹಿಳೆ ಜತೆ ಅಲ್ಲಾ ಲೈಂಗಿಕ ಕ್ರಿಯೆ ಮಾಡಿರೋದ್ ಅದೆಷ್ಟೋ ಆಶ್ರಮಕ್ಕೆ ಬರುತ್ತಿದ್ದ ಭಕ್ತರಿಗೆ ಲೈಂಗಿಕ ಕಿರುಕುಳ ನೀಡಿದ್ದಲ್ಲದೇ, ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ನಡೆಸಿದ್ದಾರೆ ಅಂತ ಅವ್ನ ಕಾರು ಚಾಲಕನೇ ದೂರು ನೀಡಿದ್ರು.

ಸುಪ್ರೀಂಕೋರ್ಟ್ ನಿತ್ಯಾನಂದನಿಗೆ ಪುರುಷತ್ವ ಪರೀಕ್ಷೆ ಅಂದ್ರೆ ಮ್ಯಾಟ್ರೂ ಇದೆಯೋ ಇಲ್ವಾ ಅಂತ, ನಡೆಸಲು ಹಾಜರಾಗುವಂತೆ ಸೂಚನೆ ಕೊಟ್ಟಿತ್ತು. ಇದರಂತೆ ನಿತ್ಯಾನಂದ ಪುರುಷತ್ವ ಪರೀಕ್ಷೆಗೆ ಹಾಜರಾಗಿದ್ದ. ವೈದ್ಯರು ಧ್ವನಿ ಹಾಗೂ ರಕ್ತ ಪರೀಕ್ಷೆ ಮಾಡಿ ನಿತ್ಯಾನಂದ ಮಹಿಳೆ ಜತೆ ಲೈಂಗಿಕ ಕ್ರಿಯೆ ಮಾಡುವಷ್ಟು ಕೆಪಾಸಿಟಿ ಅಂದ್ರೆ ಸಾಮಥ್ರ್ಯ ಇಲ್ಲ ಅಂತ ಹೇಳಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿಯಿತು. ಆದ್ರೆ ಕೆಲವ್ರು ಅಂತೂ ಏ ನಿತ್ಯಾನಂದನಿಗೆ ಮ್ಯಾಟ್ರೂ ಇಲ್ಲ ಅಂತೆ ಗುರು, ಅವ್ನು ನಪುಸಂಕ ಅಂತೆಲ್ಲ ಹೇಳಿಕೊಂಡಿದ್ರು.

ಆದ್ರೆ ಸಿಐಡಿ ವರದಿಯಲ್ಲಿ ನಿತ್ಯಾನಂದ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿರುವುದು ಸಾಬೀತಾಗಿದ್ದರಿಂದ ಸ್ವಯಂ ಘೋಷಿತ ದೇವಮಾನವ ನಪುಸಂಕೋ ಇಲ್ಲವೇ ಪುರುಷತ್ವ ಹೊಂದಿದ್ದಾನೆಯೇ ಎಂಬುದು ಸಾರ್ವಜನಿಕರಲ್ಲೂ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

ಆದ್ರೆ ಏನೇ ಹೇಳಿ ಸುಪ್ರೀಕೋರ್ಟ್ ಮತ್ತೆ ಪ್ರಕರಣಗಳನ್ನು ಪರಿಶೀಲಿಸಿ ಅತ್ಯಾಚಾರ ಮಾಡಲಾಗಿದೆ ಅಂತ ತೀರ್ಪು ಬಂದ್ರೆ ಪಕ್ಕಾ ರಹೀಂ ಜತೆ ನಿತ್ಯಾನಂದ ಕೂಡ ಕಂಬಿ ಎಣಿಸೋದ್ ಕನ್ಫರ್ಮ್….

 

 

Leave a Reply