You are here
Home > ವಿಶೇಷ > ನಿತ್ಯೋತ್ಸವ ಕವಿಗೆ “ಪಂಪ ಪ್ರಶಸ್ತಿ ಗರಿ”

ನಿತ್ಯೋತ್ಸವ ಕವಿಗೆ “ಪಂಪ ಪ್ರಶಸ್ತಿ ಗರಿ”

ಉಪಸಂಪಾದಕ
ಮಾಲೂರು ಜಿ.ಶಶಿಕುಮಾರ್ ಶೆಟ್ಟಿ

ನವೆಂಬರ್ 1 – 2017ರ ಪ್ರತಿಷ್ಠಿತ ಪಂಪ ಪ್ರಶಸ್ತಿಯು ನಿತ್ಯೋತ್ಸವ ಕವಿ, ನಾಡೋಜ ಡಾ.ನಿಸಾರ್ ಅಹಮದ್ ಅವ್ರಿಗೆ ದೊರೆತಿದೆ. ಪ್ರಶಸ್ತಿಯು 3ಲಕ್ಷ ನಗದು, ಸ್ಮರಣಿಕೆ ಹಾಗೂ ಫಲಕವನ್ನು ಒಳಗೊಂಡಿದೆ.

ಈ ಬಾರಿ ವಿಶ್ವ ವಿಖ್ಯಾತ ದಸರಾವನ್ನು ಉದ್ಘಾಟಿಸುವ ಅವಕಾಶವೂ ಸರ್ಕಾರದಿಂದ ದೊರೆತಿತ್ತು. 14 ಕವನ ಸಂಕಲನ, 10 ಗದ್ಯ ಕೃತಿಗಳು, 5 ಮಕ್ಕಳ ಸಾಹಿತ್ಯ ಗ್ರಂಥ, 5 ಅನುವಾದ ಗ್ರಂಥ ಸೇರಿದಂತೆ ವಿವಿಧ ಪ್ರಕಾರದ 35ಕ್ಕೂ ಹೆಚ್ಚು ಕೃತಿಗಳನ್ನು ನಿಸಾರ್ ರಚಿಸಿದ್ದಾರೆ.

ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ 1984-87ರವರೆಗೆ ರಚನಾತ್ಮಕ ಕೆಲಸಗಳನ್ನು ಮಾಡಿದ್ದರು. ಇವರಿಗೆ ನಾಡೋಜ ಪುರಸ್ಕಾರ, ಮಂಜೇಶ್ವರ ಗೋವಿಂದ ಪೈ ಪ್ರಶಸ್ತಿ, ಶಿವಮೊಗ್ಗದಲ್ಲಿ ನಡೆದ 73ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಗರಿ, ಭಾರತ ಸರ್ಕಾರದ ಪ್ರತಿಷ್ಠಿತ ಪದ್ಮಶ್ರೀ, ಕುವೆಂಪು ಹೆಸರಿನ ವಿಶ್ವ ಮಾನವ ಪ್ರಶಸ್ತಿ, ವಿ.ಕೃ.ಗೋಕಾಖ್ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ನಿತ್ಯೋತ್ಸವ ಕವಿಗೆ ಒಲಿದಿದೆ.

Leave a Reply