You are here
Home > ವಿಶೇಷ > ಪತಂಜಲಿ ಸಿಇಒ ಭಾರತದ ಎಷ್ಟನೇ ಶ್ರೀಮಂತ ಗೊತ್ತಾ?

ಪತಂಜಲಿ ಸಿಇಒ ಭಾರತದ ಎಷ್ಟನೇ ಶ್ರೀಮಂತ ಗೊತ್ತಾ?

ಉಪಸಂಪಾದಕ
ಮಾಲೂರು ಜಿ.ಶಶಿಕುಮಾರ್ ಶೆಟ್ಟಿ

ಹುರೂನ್ ಸಂಸ್ಥೆ ತಯಾರಿಸಿರುವ ಭಾರತದ 2017ನೇ ವರ್ಷದ ಅತೀ ಶ್ರೀಮಂತರ ಪಟ್ಟಿಯಲ್ಲಿ ಪತಂಜಲಿ ಕಂಪನಿಯ ಕಾರ್ಯ ನಿರ್ವಹಣಾಧಿಕಾರಿಯಾಗಿರುವ (ಸಿಇಓ) ಆಚಾರ್ಯ ಬಾಲಕೃಷ್ಣ ರವರು 8ನೇ ಸ್ಥಾನ ಗಳಿಸಿದ್ದಾರೆ.

ಅಂದಹಾಗೇ ಕಳೆದ ವರ್ಷ ಹುರೂನ್ ಸಂಸ್ಥೆ ಬಿಡುಗಡೆ ಮಾಡಿದ್ದ ಪಟ್ಟಿಯಲ್ಲಿ ಆಚಾರ್ಯ ಬಾಲಕೃಷ್ಣ ರವ್ರು 25ನೇ ಸ್ಥಾನದಲ್ಲಿದ್ದರು. ಈ ವರ್ಷದಲ್ಲಿ 8ನೇ ಸ್ಥಾನದಲ್ಲಿರುವುದು ನಿಜಕ್ಕೂ ಆಶ್ಚರ್ಯವೆನಿಸುತ್ತೆ.

ಇನ್ನೂ ಈ ಒಂದು ವರ್ಷದಲ್ಲಿ ಅವ್ರ ಆದಾಯ ಪ್ರಮಾಣ ಶೇ.173ರಷ್ಟು ಹೆಚ್ಚಾಗಿದೆ. ಈಗ ಅದ್ರ ಮೌಲ್ಯ 73 ಸಾವಿರ ಕೋಟಿ ರೂ ಅಂತ ಅಂದಾಜಿಸಲಾಗಿದೆ. ಇವ್ರ ಪತಾಂಜಲಿ ಸಂಸ್ಥೆ ವಾರ್ಷಿಕವಾಗಿ 10,561 ಕೋಟಿ ರೂ ವಹಿವಾಟು ನಡೆಸುತ್ತಿರುವುದರಿಂದ ಬಾಲಕೃಷ್ಣ ಅವ್ರ ಶ್ರೀಮಂತಿಕೆ ಹೆಚ್ಚಾಗಲು ಕಾರಣ ಎನ್ನಲಾಗಿದೆ. ಹೀಗಾಗಿ ಅವ್ರು ಈ ವರ್ಷ ಟಾಪ್ 10ರೊಳಗೆ ಕಾಣಿಸಿಕೊಳ್ಳು ಸಾಧ್ಯವಾಗಿದೆ.

ಇನ್ನೂ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಯಾರ್ ಇದ್ದಾರೆ ಅಂತ ನೋಡುವುದಾದ್ರೆ ಜಿಯೋ ಕಂಪನಿಯ ಮುಖ್ಯಸ್ಥ ಮುಖೇಶ್ ಅಂಬಾನಿ ಕಾಯ್ದುಕೊಂಡಿದ್ದಾರೆ.

ಕಳೆದ ವರ್ಷಕ್ಕೆ ಹೋಲಿಸಿದ್ರೆ ಅವ್ರ ಆಸ್ತಿಯು ಶೇ.58 ರಷ್ಟು ಹೆಚ್ಚಾಗಿದ್ದು, ಇದೀಗ ಅವ್ರ ಆಸ್ತಿ ಮೌಲ್ಯ 2.57 ಟ್ರಿಲಿಯನ್ ಕೋಟಿ ರೂ ಅಂತ ಹೇಳಲಾಗಿದೆ.

Leave a Reply