You are here
Home > ಅಂಕಣ > ಪತ್ನಿ-ಸೊಸೆ ಮೇಲೆ ಆಸಿಡ್ ದಾಳಿ: ದೇಶದ ಜನತೆಗೆ ಗೊತ್ತಿಲ್ಲದ ಸತ್ಯ ಹೇಳಿದ ದೇವೇಗೌಡ.!

ಪತ್ನಿ-ಸೊಸೆ ಮೇಲೆ ಆಸಿಡ್ ದಾಳಿ: ದೇಶದ ಜನತೆಗೆ ಗೊತ್ತಿಲ್ಲದ ಸತ್ಯ ಹೇಳಿದ ದೇವೇಗೌಡ.!

devegouda in weekend with ramesh programmes

ಅದು ಫೆಬ್ರವರಿ 21, 2001… ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನಲ್ಲಿ ಇರುವ ಈಶ್ವರ ದೇವಸ್ಥಾನದಲ್ಲಿ ಪೂಜೆ ಮುಗಿಸಿಕೊಂಡು ಬರುವಾಗ ಮಾಜಿ
ಪ್ರಧಾನಿ ಎಚ್.ಡಿ.ದೇವೇಗೌಡ ಪತ್ನಿ ಚನ್ನಮ್ಮ ಹಾಗೂ ಸೊಸೆ ಭವಾನಿ (ಎಚ್.ಡಿ.ರೇವಣ್ಣ ಪತ್ನಿ) ಮೇಲೆ ಆಸಿಡ್ ದಾಳಿ ನಡೆಯಿತು.
ಎಚ್.ಡಿ.ದೇವೇಗೌಡ ರವರ ತಮ್ಮನ ಮಗನೇ ಆಸಿಡ್ ಎರಚಿದ್ದರಿಂದ, ಕೌಟುಂಬಿಕ ವೈಷಮ್ಯವೇ ಈ ಆಸಿಡ್ ದಾಳಿಗೆ ಕಾರಣ ಎಂಬ ವರದಿಗಳು ದಿನಪತ್ರಿಕೆಗಳಲ್ಲಿ ವರದಿ ಆದವು. ಆದ್ರೆ, ಇದರ ಹಿಂದೆ ರಾಜಕೀಯ ಮುಖಂಡರ ಪ್ರೇರಣೆ ಇತ್ತು ಎಂದು ಎಚ್.ಡಿ.ದೇವೇಗೌಡ ಬಾಯಿಬಿಟ್ಟಿದ್ದಾರೆ.
ಆಸಿಡ್ ಎರಚಿದ ಪ್ರಕರಣದಲ್ಲಿ ಲೋಕೇಶ್ (ಎಚ್.ಡಿ.ದೇವೇಗೌಡ ತಮ್ಮನ ಮಗ) ಅಪರಾಧಿ ಎಂದು ಸಾಬೀತಾಗಿ ನ್ಯಾಯಾಲಯ ಎಂಟು ವರ್ಷ ಜೈಲು ಶಿಕ್ಷೆ ವಿಧಿಸಿತು. ಇನ್ನೂ ನಾಲ್ಕುವರೆ ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗಿದ್ದರೂ, ತಮ್ಮನ ಆರೋಗ್ಯ ಸ್ಥಿತಿ ಕಂಡು ಹೈಕೋರ್ಟ್ ನ್ಯಾಯಮೂರ್ತಿ ರವರ ಬಳಿ ಮನವಿ ಮಾಡಿ ಲೋಕೇಶ್ ರನ್ನ ಎಚ್.ಡಿ.ದೇವೇಗೌಡ ಬಿಡುಗಡೆ ಮಾಡಿಸಿದರಂತೆ.
ದೇಶದ ಜನತೆಗೆ ಗೊತ್ತಿಲ್ಲದ ಈ ವಿಚಾರವನ್ನ ಎಚ್.ಡಿ.ದೇವೇಗೌಡ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆದ ‘ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮದಲ್ಲಿ ಜಗಜ್ಜಾಹೀರುಗೊಳಿಸಿದರು.