You are here
Home > ರಾಜಕೀಯ > ಪ್ರಧಾನಿ ಮೋದಿ ಓರ್ವ ಉಗ್ರ; ಪಾಕ್ ವಿದೇಶಾಂಗ ಸಚಿವ ಖ್ವಾಜಾ

ಪ್ರಧಾನಿ ಮೋದಿ ಓರ್ವ ಉಗ್ರ; ಪಾಕ್ ವಿದೇಶಾಂಗ ಸಚಿವ ಖ್ವಾಜಾ

ಉಪಸಂಪಾದಕ
ಮಾಲೂರು ಜಿ.ಶಶಿಕುಮಾರ್ ಶೆಟ್ಟಿ

ಪಾಕಿಸ್ತಾನ ವಿದೇಶಾಂಗ ಸಚಿವ ಖ್ವಾಜಾ ಮೊಹಮ್ಮದ್ ಆಸೀಫ್ ಅವ್ರು ತಮ್ಮ ನಾಲಿಗೆಯನ್ನು ಹಿಬಿಟ್ಟಿದ್ದು, ಪ್ರಧಾನಿ ನರೇಂದ್ರ ಮೋದಿ ಓರ್ವ ಉಗ್ರ, ಆರ್‍ಎಸ್‍ಎಸ್ ಒಂದು ಉಗ್ರ ಸಂಘಟನೆ ಅಂತ ಕರೆದಿದ್ದಾರೆ.

ಅಂದಹಾಗೇ ಪಾಕ್ ಮಾಧ್ಯಮವೊಂದರ ಕಾರ್ಯಕ್ರಮದಲ್ಲಿ ಮಾತನಾಡಿರುವ ಖ್ವಾಜಾ ಆಸೀಪ್, ಪಾಕಿಸ್ತಾನ ಭಯೋತ್ಪಾದನೆಯನ್ನು ರಫ್ತು ಮಾಡುತ್ತಿದೆ ಅಂತ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವ್ರು ಆರೋಪಿಸಿದ್ದಾರೆ.

ಭಾರತದ ಪ್ರಧಾನ ಮಂತ್ರಿಯೇ ಓರ್ವ ಉಗ್ರ, ಗುಜರಾತ್ ಹತ್ಯಾಕಾಂಡದಲ್ಲಿ ಸಾವನ್ನಪ್ಪಿದ ಮುಸ್ಲಿಮರ ರಕ್ತದ ಕಲೆ ಪ್ರಧಾನಿ ಮೋದಿಯವರ ಕೈಯಲ್ಲಿದೆ ಅಂತ ಹೇಳಿದ್ದಾರೆ.

ಇನ್ನು ಉಗ್ರ ಸಂಘಟನೆಯಾಗಿರುವ ಆರ್‍ಎಸ್‍ಎಸ್ ಭಾರತದಲ್ಲಿ ಅಧಿಕಾರ ನಡೆಸುತ್ತಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆ ಭಾರತದಲ್ಲಿನ ಭಯೋತ್ಪಾದಕರ ಒಂದು ಭಾಗವಾಗಿದ್ದು, ಆರ್‍ಎಸ್‍ಎಸ್ ಹೇಳಿದಂತೆ ಪ್ರಧಾನಿ ಮೋದಿ ಅಧಿಕಾರ ನಡೆಸುತ್ತಿದ್ದಾರೆಂದು ಆರೋಪಿಸಿದ್ದಾರೆ.

Leave a Reply