You are here
Home > ವಿಶೇಷ > ಪ್ರಧಾನಿ ಮೋದಿ ಕಾರ್ ಚಾಲಕ ಕನ್ನಡಿಗ!

ಪ್ರಧಾನಿ ಮೋದಿ ಕಾರ್ ಚಾಲಕ ಕನ್ನಡಿಗ!

Acquistare Pillole Di Caverta ಉಪಸಂಪಾದಕ
ಮಾಲೂರು ಜಿ.ಶಶಿಕುಮಾರ್ ಶೆಟ್ಟಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇವೆಯಲ್ಲಿ ಕನ್ನಡಿಗರ ಸಂಖ್ಯೆ ಹೆಚ್ಚಾಗಿದೆ. ನಿನ್ನೆ ಧರ್ಮಸ್ಥಳಕ್ಕೆ ಮೋದಿ ಭೇಟಿ ನೀಡಿದ್ರು. ಈ ವೇಳೆ ಮೋದಿ ಕಾರ್ ಡ್ರೈವರ್ ಮಾಡಿದ್ದು ಒಬ್ಬ ಕನ್ನಡಿಗ.

ಕೇಳಲು ಆಶ್ಚರ್ಯ ಅನ್ನಿಸಿದ್ರು ಇದು ಸತ್ಯ. ಪ್ರಧಾನಿ ಮೋದಿ ಡ್ರೈವರ್ ಕರ್ನಾಟಕ ಮೂಲದ ಮಾರಪ್ಪ. ಚಾಮರಾಜನಗರ ಜಿಲ್ಲೆಯ ರಾಜಪ್ಪ ಮತ್ತು ನಾಗರಾಜಮ್ಮ ದಂಪತಿ ಪುತ್ರ ಮಾರಪ್ಪ.

ಈ ಮಾರಪ್ಪ ಎಸ್‍ಜಿಪಿ ಸಿಬ್ಬಂದಿಯಾಗಿದ್ದು, ಹಲವು ದಿನಗಳಿಂದ ಪ್ರಧಾನಿ ಮೋದಿ ಬಳಿಯೇ ಕಾರು ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಿನ್ನೆ ಕೂಡ ಮೋದಿ ಕಾರ್ ಓಡಿಸುವ ಸಲುವಾಗಿಯೇ ಡ್ರೈವರ್ ಮಾರಪ್ಪ, ಮೊನ್ನೆಯೇ ದೆಹಲಿಯಿಂದ ಧರ್ಮಸ್ಥಳಕ್ಕೆ ಆಗಮಿಸಿದ್ದರು. ಮೋದಿ ಆಗಮನಕ್ಕೂ ಮುನ್ನವೇ ರಸ್ತೆ ಮಾರ್ಗದ ಸಂಪೂರ್ಣ ಮಾಹಿತಿ ಕೂಡ ಕಲೆಹಾಕಿದ್ದರಂತೆ.

Leave a Reply