You are here
Home > ರಾಜಕೀಯ > ಬನಾರಸ್ ಹಿಂದೂ ವಿವಿ ಘಟನೆ ಹಿಂದೆ ಪಿತೂರಿ;ಸಿಎಂ ಆದಿತ್ಯನಾಥ್

ಬನಾರಸ್ ಹಿಂದೂ ವಿವಿ ಘಟನೆ ಹಿಂದೆ ಪಿತೂರಿ;ಸಿಎಂ ಆದಿತ್ಯನಾಥ್

ಉಪಸಂಪಾದಕ
ಮಾಲೂರು ಜಿ.ಶಶಿಕುಮಾರ್ ಶೆಟ್ಟಿ

ಬನಾರಸ್ ಹಿಂದೂ ವಿವಿಯಲ್ಲಿ ನಡೆದ ಇತ್ತೀಚಿನ ಘಟನೆಗಳ ಹಿಂದೆ ಪಿತೂರಿಯಿದೆ ಅಂತ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಹೇಳಿದ್ದಾರೆ.

ಹೌದು ಬನಾರಸ್ ಹಿಂದೂ ವಿವಿಯಲ್ಲಿ ನಡೆದ ಇತ್ತೀಚಿನ ಘಟನೆಗಳ ಹಿಂದೆ ಪಿತೂರಿ ನಡೆದಿದೆ. ಇದ್ರ ಹಿಂದೆ ಸಮಾಜವಿರೋಧಿ ಶಕ್ತಿಗಳು ಕೆಲಸ ಮಾಡಿವೆ ಅಂತ ಹೇಳಿದ್ದಾರೆ.

ಅಂದಹಾಗೇ ಈ ಘಟನೆಯ ಬಗ್ಗೆ ಕೂಲಂಕುಷ ತನಿಖೆ ನಡೆಸುವಂತೆ ಹಾಗೂ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ನಡೆಸದಂತೆ ಸಂಬಂಧಪಟ್ಟವರಿಗೆ ಸೂಚಿಸಲಾಗಿದೆ ಅಂತ ಹೇಳಿದ್ರು.

ವಿದ್ಯಾರ್ಥಿನಿಯೊಬ್ಬಳಿಗೆ ದುಷ್ಕರ್ಮಿಗಳು ಕಿರುಕುಳ ನೀಡಿದ್ದನ್ನು ವಿರೋಧಿಸಿ ಬನಾರಸ್ ಹಿಂದೂ ವಿವಿಯ ವಿದ್ಯಾರ್ಥಿಗಳು ನಡೆಸಿದ್ದ ಪ್ರತಿಭಟನೆ ಆನಂತರ ವಿಕೋಪಕ್ಕೆ ತಿರುಗಿತ್ತು. ಈ ಹಿನ್ನೆಲೆ ಪೊಲೀಸರು ನಡೆಸಿದ್ದ ಲಾಠಿಚಾರ್ಜ್ ನಲ್ಲಿ ಹಲವು ವಿದ್ಯಾರ್ಥಿಗಳು, ಇಬ್ಬರು ಪತ್ರಕರ್ತರು ಹಾಗೂ ಮಹಿಳೆಯರು ಗಾಯಗೊಂಡಿದ್ದರು.

Leave a Reply