You are here
Home > ಎಲೆಕ್ಷನ್ ಟೈಮ್ > ಬಹು ನಿರೀಕ್ಷಿತ ಮೇಯರ್ ಎಲೆಕ್ಷನ್ ಕ್ಷಣ ಗಣನೆ

ಬಹು ನಿರೀಕ್ಷಿತ ಮೇಯರ್ ಎಲೆಕ್ಷನ್ ಕ್ಷಣ ಗಣನೆ

source url ಉಪಸಂಪಾದಕ
ಮಾಲೂರು ಜಿ.ಶಶಿಕುಮಾರ್ ಶೆಟ್ಟಿ

ಬಹು ನಿರೀಕ್ಷಿತ ಮೇಯರ್ ಚುನಾವಣೆ ಇಂದು ನಡೆಯಲಿದ್ದು, ಅದಕ್ಕಾಗಿ ಬಿಬಿಎಂಪಿ ಕಚೇರಿ ಸರ್ವ ರೀತಿಯಲ್ಲೂ ಸಜ್ಜಾಗಿದ್ದು, ಇಂದು ಬೆಳಗ್ಗೆ 11.30ಕ್ಕೆ ಚುನಾವಣೆ ನಡೆಯಲಿದೆ.

ಅಂದಹಾಗೇ ಕೆಲ ತಿಂಗಳಿನಿಂದ ಮೂರು ಪಕ್ಷಗಳು ತಮ್ಮದೇ ಆದ ದೊಂಬರಾಟಗಳು ಆಡಿದ್ದು ನಿಮಗೇ ಗೊತ್ತೇ ಇದೆ. ಅದಕ್ಕೆ ಇಂದು ಫುಲ್‍ಸ್ಟಾಪ್ ಇಡುವ ಟೈ ಬಂದಿದೆ.

ಇನ್ನೂ ಜೆಡಿಎಸ್ ಜತೆ ಮೈತ್ರಿ ಕುದುರಿಸಿಕೊಂಡಿರುವ ಕಾಂಗ್ರೆಸ್, ತನ್ನ ಮೇಯರ್ ಅಭ್ಯರ್ಥಿಯನ್ನು ಹಿಂದಿನ ದಿನದ ತಡರಾತ್ರಿವರೆಗೂ ಘೋಷಿಸಿಲ್ಲದಿರುವುದು, ಆ ಪಕ್ಷದ ಗೊಂದಲಕ್ಕೆ ಕಾರಣವಾಗಿದೆ.

ಅಂದಹಾಗೇ ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಡಿಜೆ ಹಳ್ಳಿ ವಾರ್ಡಿನ ಸಂತ್ ರಾಜ್ ಅವ್ರ ಹೆಸರನ್ನು ಕಾಂಗ್ರೆಸ್ ಅಂತಿಮಗೊಳಿಸಿದೆ ಎನ್ನಲಾಗಿದೆ. ಈ ಸಂಬಂಧ ಅಧಿಕೃತ ಹೇಲಿಕೆ ಇನ್ನಷ್ಟೆ ಬರಬೇಕಿದೆ.

ಇನ್ನೂ ಉಪಮೇಯರ್ ಸ್ಥಾನಕ್ಕೆ ಕಾಂಗ್ರೆಸ್ ಹೊಂದಾಣಿಕೆಯೊಂದಿಗೆ ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿಯಲಿದ್ದಾರೆ. ಬಿಜೆಪಿಯಿಂದ ಮೇಯರ್ ಅಭ್ಯರ್ಥಿಯಾಗಿ ಎಸ್.ಮಿನಿಸ್ವಾಮಿ, ಉಪಮೇಯರ್ ಅಭ್ಯರ್ಥಿಯಾಗಿ ಮಮತಾ ವಾಸುದೇವ್ ಸ್ಪರ್ಧೆ ಮಾಡಲಿದ್ದಾರೆ.

ಮೇಯರ್ ಚುನಾವಣೆಗೆ ಬಿಬಿಎಂಪಿ ಸದಸ್ಯರು. ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಒಟ್ಟು 266 ಅರ್ಹ ಮತದಾರರಿದ್ದಾರೆ. ಮೇಯರ್ ಪಟ್ಟ ಪಡೆಯಬೇಕಾದ್ರೆ 134 ಮತಗಳ ಅವಶ್ಯಕತೆಯಿದೆ.

ಇನ್ನೂ ಕಾಂಗ್ರೆಸ್ (109) ಮತ್ತು ಜೆಡಿಎಸ್ (24) ಒಟ್ಟು 133 ಮತಗಳಾಗುತ್ತವೆ. ಬಿಜೆಪಿ 124 ಮತಗಳನ್ನು ಹೊಂದಿದೆ. 7 ಪಕ್ಷೇತರರ ಕಾಂಗ್ರೆಸ್ ಬೆಂಬಲಿಸುವುದು ಬಹುತೇಕ ಖಚಿತವಾಗಿದೆ. ಆದ್ರೆ ಮತದಾನದ ಸಂದರ್ಭದಲ್ಲಿ ಪವಾಡ ನಡೆಯಲಿದೆ ಎಂದು ಬಿಜೆಪಿ ನಂಬಿದೆ.

Leave a Reply