You are here
Home > ಅಂಕಣ > ಬಿಜೆಪಿ ರಾಜ್ಯಗಳಲ್ಲಿನ ದುರಂತಗಳ ಸರಮಾಲೆ..!

ಬಿಜೆಪಿ ರಾಜ್ಯಗಳಲ್ಲಿನ ದುರಂತಗಳ ಸರಮಾಲೆ..!

ಉಪಸಂಪಾದಕ
ಮಾಲೂರು ಜಿ.ಶಶಿಕುಮಾರ್ ಶೆಟ್ಟಿ

 

 

ಬಿಜೆಪಿ ರಾಜ್ಯಗಳಲ್ಲಿನ ದುರಂತಗಳ ಸರಮಾಲೆ..!

ಪ್ರಧಾನಿ ನರೇಂದ್ರ ಮೋದಿ ಕಿ “ಜೈ”, ನರೇಂದ್ರ ಮೋದಿ ಕಿ “ಜೈ”, ಅಂತ ಕೂಗಿದ್ದೇ ಕೂಗಿದ್ದು ಜನ. ಮಾನ್ಯ ಶ್ರೀ ಪ್ರಧಾನಿ ನರೇಂದ್ರ ಮೋದಿ ಅವ್ರೆ ನೀವ್ ದೇಶವನ್ನಾ ಬದಲಾವಣೆ ಮಾಡಬೇಕು ಅಂತ ವಿದೇಶಗಳ ಸುತ್ತಾಟ ದಲ್ಲಿದ್ದೀರಾ ಆದ್ರೆ ನಿಮ್ಮ ಸಂಪುಟದ ಕೆಲ ಮುಖ್ಯಮಂತ್ರಿಗಳು, ಕೆಲ ಸಚಿವ್ರ ಬಂಡವಾಳ ಗೊತ್ತಾ ಮೋದಿಜೀ.

ಪಾಪ ನೀವೇನೋ ದೇಶವನ್ನ ಅಭಿವೃದ್ಧಿಯತ್ತಾ ಸಾಗಿಸಬೇಕೆಂದು ಪರದಾಡ್ತಾ ಇದ್ದೀರಾ ಆದ್ರೆ ನಿಮ್ಮ ಪಕ್ಷ ಅಧಿಕಾರವಿರುವಂಥ ಕೆಲ ರಾಜ್ಯಗಳಲ್ಲಿ ಏನೆಲ್ಲಾ ಅವಾಂತರಗಳು ಆಗಿವೆ ಅಂತ ಗೊತ್ತಾ ಅಥವ ಗೊತ್ತೇ ಇರುತ್ತೆ ಆದ್ರೆ ಮತ್ತ್ಯಾಕೆ ಅವ್ರ ರಾಜೀನಾಮೆ ತೆಗೆದುಕೊಳ್ತಾ ಇಲ್ಲ.

ಒಂದು ಮಾತು ಹೇಳ್ತೀವಿ ಮೋದಿ ಜೀ ನಿಮ್ಮ ಪಕ್ಷದಲ್ಲಿ ನೀವೊಬ್ರು ಸರಿಯಾಗಿದ್ರೆ ಸಾಲದು. ನಿಮ್ಮ ಪಕ್ಷದಲ್ಲಿ ಇರೋ ಘನಾಂಧಾರಿ ಸಚಿವ್ರು ಸಹ ನೆಟ್ಟಗೆ ಇರಬೇಕು. ಆಗ್ಲೇ ನೀವು ಹೇಳ್ತಾ ಇರ್ತೀರಿ ಅಲ್ವಾ ಅಚ್ಛೇಧಿನ್ ಅಂತ ಅದು ಆಗ್ಲೇ ಸಫಲ ಆಗೋದ್ ಅದ್ನ ಬಿಟ್ಟು ನೀವೊಬ್ರೆ ಅಚ್ಛೇಧಿನ್ ಅಂದ್ರೆ ತುಂಬಾ ಕಷ್ಟ ಸ್ವಾಮಿಗಳೇ.

ನೀವು ದೇಶದ ಪ್ರಧಾನ ಮಂತ್ರಿಗಳು ನಿಮಗೆ ಎಲ್ಲವೂ ತಿಳಿದಿರುತ್ತೆ, ಮತ್ತ್ಯಾಕೆ ಅವ್ರ ಮೇಲೆ ಆಕ್ಷನ್ ತೆಗೆದುಕೊಳ್ತಾ ಇಲ್ಲಾ. ಓ ಅರ್ಥ ಆಯ್ತು ಮತ್ತೆ ಎಲ್ಲಿ ಅವ್ರ ರಾಜೀನಾಮೆ ತೆಗೆದುಕೊಂಡ್ರೆ ಬಂಡಾಯ ಏಳ್ತಾರೆ ಅಂತ ಇರಬಹುದು ಅಲ್ವಾ. ಇನ್ನೇನು ಇರುವಂಥ ಬಿಜೆಪಿ ರಾಜ್ಯಗಳು ಸಹ ಕೈ ತಪ್ಪಿ ಹೋಗುತ್ತೆ ಅಂತ ಭಯನಾ..

ಬಟ್ ಒಂದು ಅಂತೂ ನಿಜ ಪ್ರಧಾನಿಗಳೇ, ನಿಮ್ಮ ಸಂಪುಟದ ಸಚಿವ್ರ ಇವತ್ತಲ್ಲಾ ನಾಳೆ ನಿಮ್ಮ ಹೆಸ್ರಿಗೆ ಮಸಿ ಬಳೆಯುತ್ತಾರೆ.ಇಷ್ಟಕ್ಕೂ ನಿಮಗೇ ಯಾಕೆ ಹೇಳ್ತಾ ಇದ್ದಿವಿ ಅಂದ್ರೆ ಸದ್ಯ ಬಿಜೆಪಿ ಅಂದ್ರೆ ಮೋದಿ, ಮೋದಿ ಅಂದ್ರೆ ಬಿಜೆಪಿ ಅದ್ಕೆ ನಿಮಗೆ ಹೇಳ್ತಾ ಇದ್ದಿವಿ.

 

ಇಲ್ಲಿ ಯಾರೇ ಬಿಜೆಪಿ ಸಚಿವ್ರು, ಅಥವ ಬಿಜೆಪಿ ಅಧಿಕಾರ ಇರುವಂಥ ರಾಜ್ಯಗಳಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಆದ್ರೂ ಅದು ಬಿಜೆಪಿಗೆ ಕೆಟ್ಟ್ ಹೆಸ್ರು ಅಲ್ವಾ ಮೋದಿಜೀ. ಇತ್ತೀಚಿಗೆ ನಿಮ್ಮ ಪಕ್ಷ ಅಧಿಕಾರ ಇರುವಂಥ ರಾಜ್ಯಗಳಲ್ಲಿ ದುರಂತಗಳ ಸರಮಾಲೆಗಳ ದಂಡು ಹೆಚ್ಚಾಗುತ್ತಿದ್ರೂ ನೀವ್ ಏನೂ ಕ್ರಮ ತೆಗೆದುಕೊಂಡಿಲ್ಲ ಅಲ್ವಾ ಇದ್ಕೆ ಏನು ಕಾರಣ ಅಂತ ಜನ ಕೇಳ್ತಾ ಇದ್ದಾರೆ.

ಗೋರಖ್‍ಪುರದಲ್ಲಿ ನಿಮ್ಮದೇ ಅಲ್ವಾ ಅಧಿಕಾರ ಇರೋದ್ ಮೋದಿಯವ್ರೆ. 100 ಕ್ಕೂ ಹೆಚ್ಚು ಮಕ್ಕಳು ಅಲ್ಲಿ ಮೃತ ಪಟ್ಟರೂ ಅದ್ಕೆ ಕಾರಣ ಏನು, ಪರಿಹಾರ ಏನು, ಅಥವ ಅಲ್ಲಿನ ಸಚಿವ್ರ ಮೇಲಾಗಲೀ, ಸಿಎಂ ಮೇಲಾಗಲಿ ಏನು ಕ್ರಮತೆಗೆದುಕೊಂಡಿದ್ದೀರಾ, ಯಾಕೆ ಇವೆಲ್ಲಾ ನಿಮ್ಮ ಕಣ್ಣಿಗೆ ಕಾಣಿಸಲೇ ಇಲ್ವಾ. ಪಾಪ ಬದುಕಿಬಾಳಬೇಕಾಗಿದ್ದ ಹಸುಗೂಸುಗಳು ಇವತ್ತಿಲ್ಲ. ಆ ನೋವು ಯಾರಿಗೆ ಸ್ವಾಮಿ ಅರ್ಥವಾಗುತ್ತೆ. ನಿಮ್ಮ ಸಪುಂಟದ ಸಚಿವ್ರು ಆರಾಮಾಗಿ ಮಜಾ ಮಾಡಿಕೊಂಡು ಇದ್ದಾರೆ ಅಲ್ವಾ ಕಿತ್ತು ಬಿಸಾಕಿ ಪ್ರಧಾನಿಗಳೇ ಅಂಥವ್ರನ್ನ..
ಅಲ್ಲಿನ ಆಸ್ಪತ್ರೆಗೆ ಕುಮ್ಮಕ್ಕು ಕೊಡ್ತಾ ಇರೋರ್ ಯಾರ್, ಅಲ್ಲಿ ಏನಾದ್ರೂ ಡೀಲ್ ಆಗಿತ್ತಾ ಒಂದು ಗೊತ್ತಿಲ್ಲ , ಆ ದೇವ್ರಿಗೆ ಗೊತ್ತಾಗಬೇಕು, ಬಟ್ ಆ ಮಕ್ಕಳ ತಂದೆತಾಯಂದಿರು ಶಾಪ ಇದ್ಕೆ ಕಾರಣವಾದೋರಿಗೆ ತಟ್ಟದೆ ಬಿಡೋದಿಲ್ಲ.

 

 

ಬಿಹಾರದಲ್ಲೂ ನಿಮ್ಮದೇ ಅಧಿಕಾರ, ಅಯ್ಯೋಪಾಪ ಅನಿಸುತ್ತೆ ಅಲ್ಲಿನ ಜನರನ್ನು ನೋಡಿದ್ರೆ, ಪ್ರವಾಹ ಬಂದು ನೂರಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ರು ಅಲ್ವಾ ಅದ್ಕೆ ಯಾರ್ ಸ್ವಾಮಿ ಹೊಣೆ. ಪ್ರವಾಹಕ್ಕೆ ಕಾರಣ ಯಾರು ಅಲ್ಲಾ ಆದ್ರೆ ಅದ್ಕೆ ಪರಿಹಾರ ಕೊಡಬೇಕಿತ್ತು ಆದ್ರೆ ಆ ಕೆಲಸ ಕೂಡ ಸರಿಯಾಗಿ ಆಗಿಲ್ಲ, ಅಲ್ಲಿ ಯಾರ್ ಇದ್ದಾರೆ ಅವ್ರನ್ನ ಕಿತ್ತುಬಿಸಾಕಿ ಇನ್ನು ಯಾಕೆ ಅಂಥವ್ರನ್ನ ಇಟ್ಟುಕೊಂಡಿದ್ದೀರಾ..

ಇನ್ನು ನಿಮ್ಮದೇ ರಾಜ್ಯ ನೀವ್ ಬೆಳೆದು ಓಡಾಡಿದ ಎರಿಯಾ, ನೀವು ಮುಖ್ಯಮಂತ್ರಿ ಆದ ಊರು ಗುಜರಾತ್, ಪ್ರವಾಹಕ್ಕೆ ಹಲವರ ಜೀವನ ಬರ್ಬಾದ್ ಆಗಿದ್ದು ನಿಮ್ಮ ಕಣ್ಣಾ ಮುಂದೆಯೇ ಇದೆ ಅಲ್ವಾ ಇದ್ಕೆ ಏನು ಪರಿಹಾರ. ಹಾಗೇ ಹಕ್ಕಿಜ್ವರಕ್ಕೆ ಸುಮಾರು ಇನ್ನೂರಕ್ಕೂ ಹೆಚ್ಚು ಜನ ತುತ್ತಾದ್ರೂ, ಯಾಕೆ ಅಲ್ಲಿ ಯಾರು ಹೆಲ್ತ್ ಮಿನಿಸ್ಟರ್ ಇಲ್ವಾ..

ಇನ್ನು ಅಸ್ಸಾಂ ನಲ್ಲೂ ನಿಮ್ಮದೇ ಪಕ್ಷ ಲಕ್ಷಾಂತರ ಜನರು ಪ್ರವಾಹಕ್ಕೆ ಸಿಲುಕಿ ನಿರ್ಗತಿಕರಾದ್ರು, ಅದ್ಕೆ ಯಾರು ಹೊಣೆ ಪ್ರಧಾನಿಗಳೇ, ಅಲ್ಲಿನ ರಾಜಕಾರಣಿಗಳು ಏನು ಮಾಡ್ತಾ ಇದ್ರ ಆ ಸಮಯದಲ್ಲಿ ರೆಸ್ಟೋರೆಂಟ್ ನಲ್ಲಿ ಬೆಚ್ಚಗೆ ಕೂತಿರುತ್ತಾರೆ ಅಷ್ಟೆ ಅಲ್ವಾ..

 

 

ಉತ್ತರ ಪ್ರದೇಶದಲ್ಲಿ ಇತ್ತೀಚಿಗೆ ಎರಡು ಭಾರಿ ರೈಲು ದುರಂತ ಆಯ್ತು. ಸುಮಾರು ಜನ ಸಾವನ್ನಪ್ಪಿದ್ರು. ಮೊದಲ ಬಾರೀ ಆ ದುರಂತ ಆಗಿದ್ದಕ್ಕೆ ಏನು ಕಾರಣ ಅಂತ ತಿಳಿದು ಸರಿಪಡಿಸಿದ್ರೆ ಇನ್ನೊಂದು ದುರಂತ ವಾಗ್ತಾಇರಲಿಲ್ಲ, ಇಲ್ಲಿ ಕೂಡ ನಿಮ್ಮದೇ ಪಕ್ಷ ಅಧಿಕಾರದಲ್ಲಿರೋದ್..

 

 

ಜಾರ್ಖಂಡ್ ನಲ್ಲಿ ಮಹಿಳೆಯೊಬ್ಬಳನ್ನು ನೇಣಿಗೇರಿಸಲಾಯಿತು, ಛತ್ತೀಸ್ ಘರ್ ನಲ್ಲಿ ಇನ್ನೂರಕ್ಕೂ ಹೆಚ್ಚು ಗೋಶಳೆಯಲ್ಲಿನ ಗೋವುಗಳ ಅಸಹಜ ಸಾವು, ರಾಜಸ್ತಾನದಲ್ಲೂ 800 ಕ್ಕೂ ಹೆಚ್ಚು ಗೋಶಾಲೆಯಲ್ಲಿ ಗೋವುಗಳು ಧಾರುಣ ಸಾವು.
ಹೇಳ್ತಾ ಹೋದ್ರೆ ನಿಮ್ಮ ಪಕ್ಷ ಅಧಿಕಾರ ಇರುವಂಥ ರಾಜ್ಯಗಳಲ್ಲಿ ಬೇಕಾದಷ್ಟು ದುರಂತಗಳು ನಡೆದಿವೆ, ನಡೆಯುತ್ತಲ್ಲೇ ಇವೆ. ಆದ್ರೆ ಅವ್ರನ್ನ ಕೇಳೋರ್ ಮಾಡೋರ್ ಯಾರ್ ಇಲ್ದೆ ಮೆರಿತಾ ಇದ್ದಾರೆ.

ಹೌದು ಇಷ್ಟೆಲ್ಲಾ ಆದ್ರೂ ಇನ್ನೂ ಯಾಕೆ ಯಾವ ಸಚಿವ್ರ, ಯಾವ ಸಿಎಂಗಳ ರಾಜೀನಾಮೆ ತೆಗೆದುಕೊಂಡಿಲ್ಲ ಅನ್ನೋದ್ ದೌಟು. ಯಾಕೆಂದ್ರೆ ಮೋದಿ ಅಂದ್ರೆ ಶಿಸ್ತು, ಅವ್ರ ಅಧಿಕಾರದಲ್ಲಿ ಇವೆಲ್ಲಾ ನಡೆಯೋದಿಲ್ಲಾ, ಯಾರೇ ತಪ್ಪು ಮಾಡಿದ್ರು ಸಪುಂಟದಿಂದ ಕಿತ್ತುಬಿಸಾಕುತ್ತಾರೆ ಅಂತ ಜನ ಅಂದುಕೊಂಡಿದ್ರು ಆದ್ರೆ ಇಷ್ಟೆಲ್ಲಾ ಆದ್ರೂ ಇನ್ನೂ ಯಾಕೆ ರಾಜೀನಾಮೆ ಕೇಳ್ತಾ ಇಲ್ಲ ಅನ್ನೋದ್ ಜನರಲ್ಲಿ ಇರೋ ದೌಟು..

ಬಟ್ ಕೊನೆದಾಗಿ ಹೇಳೋದ್ ಏನು ಅಂದ್ರೆ ನೀವು ಪ್ರಧಾನಿಯಾಗಿ ಉತ್ತಮ ಕೆಲಸಗಳನ್ನು ಮಾಡ್ತಾ ಇದ್ದೀರಾ ಒಪ್ಪಿಕೊಳ್ಳುವಂಥ ಮಾತೇ, ಆದ್ರೆ ನಿಮ್ಮ ಸಹದ್ಯೋಗಿಗಳಿಂದ ನಿಮ್ಮ ಹೆಸರಿಗೆ ಧಕ್ಕೆ ಬರ್ತಾ ಇದೆ. ನಿಮ್ಮ ಹೆಸ್ರಿಗೆ, ನಿಮ್ಮ ಪಕ್ಷಕ್ಕೆ ಅಥವ ಅವರಿಂದ ಮುಂದೆ ಆಗುವ ದುರಂತಗಳಿಗೆ ಕೈವಾಡ ಹಾಕಿ ಮೋದಿಜೀ. ಇಲ್ಲವೆಂದ್ರೆ ನಿಮ್ಮಗೂ ಸೇರಿಸಿ ಮುಂದಿನ ಎಲೆಕ್ಷನ್ ನಲ್ಲಿ ಜನ ಪಾಠ ಕಲಿಸುತ್ತಾರೆ ಅಷ್ಟೆ…

 

Leave a Reply