You are here
Home > ಅಂಕಣ > ಮಾಜಿ ಪ್ರಧಾನಿಗಳ ಬಿಗ್ ಫೈಟ್!ಅಖಾಡದಲ್ಲಿ ಬಿಜೆಪಿ ಇಲ್ಲವೇಕೆ?

ಮಾಜಿ ಪ್ರಧಾನಿಗಳ ಬಿಗ್ ಫೈಟ್!ಅಖಾಡದಲ್ಲಿ ಬಿಜೆಪಿ ಇಲ್ಲವೇಕೆ?

ಉಪಸಂಪಾದಕ
ಮಾಲೂರು ಜಿ.ಶಶಿಕುಮಾರ್ ಶೆಟ್ಟಿ

 

ಇಂದಿರಾ ಕ್ಯಾಂಟೀನ್ ಹಾಗೂ ಅಪ್ಪಾಜಿ ಕ್ಯಾಂಟೀನ್ ಪ್ರಾರಂಭ ಮಾಡಿದ್ದು ಪಾಪ ಬಡವರಿಗೆ ಉಪಯೋಗವಾಗಲಿ ಅಂತ ಅಂದುಕೊಂಡ್ರೆ ಅದು ನಿಮ್ಮ ಭ್ರಮೆ ಆದ್ರೆ, ಹಿಂದೆ ದೊಡ್ಡ ರಾಜಕೀಯ ತಂತ್ರಗಾರಿಕೆಯೇ ಇದೆ. ಪಾಪ ನಿಮಗೆ ಹೇಗೆ ಅರ್ಥವಾಗುತ್ತೆ ಹೇಳಿ. ಯಪ್ಪಾ ಯಾವ್ದೋ ಒಂದು ಊಟ ಫ್ರೀಯಾಗಿ ಸಿಕ್ಕಿದ್ರೆ ಸಾಕು ಅಂತ ಸುಮ್ನೆ ಇರ್ತೀರಾ. ಒಂದು ಸಲ ಯೋಚ್ನೆ ಮಾಡಿ ಮತ ಭಾಂದವರೇ ಎಲೆಕ್ಷನ್ ಇನ್ನೇನು ಹತ್ತಿರದಲ್ಲಿ ಇದೆ ಅದ್ಕೆ ಇಷ್ಟೊಂದು ಕಾಳಜಿ ನಿಮ್ ಮೇಲೆ..

ಏನ್ ಅಪ್ಪಾಜಿ ಕ್ಯಾಂಟೀನ್, ಇಂದಿರಾ ಕ್ಯಾಂಟೀನ್ ಪ್ರಾರಂಭ ಮಾಡಿದ ಕೂಡ್ಲೇ ಯಪ್ಪಾ ಈ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಪರವಾಗಿಲ್ಲ ಅಟ್ಲೀಸ್ಟ್ ಊಟ ಕೊಡ್ತಾ ಇದ್ದಾರೆ ಅಂತ ಜನ ಸ್ವಲ್ಪ ನೆಮ್ಮದಿಯಿಂದ ಎರಡು ಪಕ್ಷಗಳನ್ನು ಒಪ್ಪಿಕೊಳ್ಳಬಹುದು, ಹೌದು ನಿಜ ಕೂಡ ಹೌದು, ಆದ್ರೆ ಅಪ್ಪಾಜಿ ಕ್ಯಾಂಟೀನ್ ಹಾಗೂ ಇಂದಿರಾ ಕ್ಯಾಂಟೀನ್ ಗಳು ಓಪನ್ ಮಾಡೋಕೆ ಇಷ್ಟು ವರ್ಷಗಳು ಬೇಕಾಯ್ತಾ. ಯಾಕೆ ಇಷ್ಟು ವರ್ಷ ಇವೆಲ್ಲಾ ನೆನಪೇ ಆಗಲಿಲ್ವಾ.. ಬರೀ ರಾಜಕೀಯ ದೊಂಬರಾಟಗಳು ಅಷ್ಟೇ ಇವೆಲ್ಲಾ..

ಈಗಾಗ್ಲೇ ಅಪ್ಪಾಜಿ ಕ್ಯಾಂಟೀನ್, ಇಂದಿರಾ ಗಾಂಧಿ ಆಯ್ತು ಆದ್ರೇ ಬಿಜೆಪಿ ಯಾಕೆ ಇನ್ನೂ ಈ ಅಖಾಡಕ್ಕೇ ಇಳಿದಿಲ್ಲ, ಅಥವ ಈ ಎರಡು ಓಪನ್ ಆಗ್ಲೀ ಇವುಗಳ ಬಂಡವಾಳ ನೋಡಿಕೊಂಡು ಮೋದಿ ಕ್ಯಾಂಟೀನ್ ತರೋ ಯೋಚ್ನೆ ಮಾಡ್ತಾ ಇರಬಹುದಾ? ಇನ್ನು ಈ ಎರಡು ಪಕ್ಷಗಳು ಮಾಡಿವೆ ಅಂದ್ರೆ ಬಿಜೆಪಿ ಕೂಡ ಸುಮ್ನೆ ಇರಲ್ಲಾ ಬಿಡಿ ಯಾಕೆಂದ್ರೆ ಅವ್ರಿಗೂ ಜನಗಳ ಮತ ಬೇಕು ಅಲ್ವಾ.. ಭವಿಷ್ಯ ಹೇಳ್ತಾ ಇದ್ದಿವಿ ಅಂತೆಲ್ಲಾ ಬಟ್ ಮೋದಿ ಕ್ಯಾಂಟೀನ್ ಅಥವ ವಾಜಪೇಯಿ ಕ್ಯಾಂಟೀನ್ ಬರೋದ್ ಪಕ್ಕಾ..

ಇಬ್ಬರ ಮಾಜಿ ಪ್ರಧಾನಿಗಳ ಪೈಪೋಟಿ ಅಂತಾನೇ ಹೇಳಬಹುದು. ಇಂದಿರಾ ಗಾಂಧಿ ಹಾಗೂ ಹೆಚ್.ಡಿ.ದೇವೇಗೌಡ ಇಬ್ಬರು ನಮ್ಮ ದೇಶದ ಮಾಜಿ ಪ್ರಧಾನಿಗಳು. ಈ ಕ್ಯಾಂಟೀನ್ ಗಳಿಗೆ ಯಾಕೆ ಮಾಜಿ ಪ್ರಧಾನಿಗಳ ಹೆಸ್ರು ಇಟ್ಟ್ರು ಅನ್ನೋದ್ ಕೂಡ ಪ್ರಶ್ನೆ. ಯಾಕೆಂದ್ರೆ ಇವರಿಬ್ಬರು ಸಹ ಭಾರತ ಕಂಡ ಅಪ್ರತಿಮ ನಾಯಕರು ಅಂತ ಇರಬಹುದು. ಅವ್ರ ಹೆಸರುಗಳನ್ನು ಇಟ್ಟುಕೊಂಡಾದ್ರೂ ವೋಟ್ ಬ್ಯಾಂಕ್ ಸಂಪಾಧಿಸಬಹುದು ಅನ್ನೋ ಒಂದೇ ಒಂದು ರಾಜಕೀಯ ತಂತ್ರಗಾರಿಕೆಯಿಂದ ಈ ಹೆಸರಗಳನ್ನು ಇಟ್ಟಿದ್ದಾರೆ.

ಇಷ್ಟಕ್ಕೂ ಅಪ್ಪಾಜಿ ಕ್ಯಾಂಟೀನ್ ಹಾಗೂ ಇಂದಿರಾ ಕ್ಯಾಂಟೀನ್‍ಗಳ ಬಗ್ಗೆ ಕಿರು ಪರಿಚಯ ನೋಡೋದಾದ್ರೆ ಅಪ್ಪಾಜಿ ಕ್ಯಾಂಟೀನ್ ನಲ್ಲಿ ತಿಂಡಿ ಊಟ ಎಲ್ಲವೂ ಉಚಿತ ಆದ್ರೆ ಇಂದಿರಾ ಕ್ಯಾಂಟೀನ್ ನಲ್ಲಿ ತಿಂಡಿ ಐದು ರೂ , ಊಟ ಹತ್ತು ರೂಪಾಯಿ. ಇನ್ನು ಅಪ್ಪಾಜಿ ಕ್ಯಾಂಟೀನ್‍ನ ನೋಡಿದ ಜನ ಬಹಳ ಸ್ವಚ್ಛತೆಯಿಂದ ಕೂಡಿದೆ ಆದ್ರೆ ಇಂದಿರಾ ಕ್ಯಾಂಟೀನ್ ನಲ್ಲಿ ಸ್ವಚ್ಛತೆಗೆ ಆಧ್ಯತೆ ನೀಡಿಲ್ಲ. ಹೋ ಮೇಬಿ ಮೋದಿಯವ್ರ ಸ್ವಚ್ಛಭಾರತ್ ಗೆ ಟಾಂಗ್ ನೀಡಬೇಕೆಂದು ಈ ರೀತಿ ಮಾಡಿರಬಹುದು.

ಮೊದಲು ಇಂದಿರಾ ಕ್ಯಾಂಟೀನ್ ಹೆಸ್ರು ಕೇಳಿಬಂತು ಆದ್ರೆ ಅದು ಪ್ರಾರಂಭ ಆಗುವಷ್ಟರಲ್ಲೇ ಅಪ್ಪಾಜಿ ಕ್ಯಾಂಟೀನ್ ಮೊದಲು ಪ್ರಾರಂಭ ಆಯ್ತು. ಇದಕ್ಕೆ ಅಲ್ವಾ ರಾಜಕೀಯ ಅನ್ನೋದ್, ಮೊದ್ಲು ಹೆಸ್ರು ನಮ್ಮದು ಬರಬೇಕು, ಜನಗಳಿಗೆ ಹತ್ತಿರ ನಾವಾಗಬೇಕು, ಮತ ನಮಗೆ ಹಾಕಬೇಕು, ಅನ್ನೋ ಹಂಬಲದಿಂದ ಮೊದ್ಲೇ ಓಪನ್ ಮಾಡಿದ್ರು ಇದೆಲ್ಲಾ ಜನಕ್ಕೆ ಅರ್ಥ ಆಗುತ್ತೆ ಮಿಸ್ಟರ್ ಕುಮಾರಸ್ವಾಮಿಯವ್ರೆ ಹಾಗೂ ಶರವಣವ್ರೆ.

ಇವನ್ನೆಲ್ಲಾ ನೋಡ್ತಾ ಇದ್ರೆ ಮುಂದಿನ ವಿದಾನಸಭೆ ಚುನಾವಣೆಗೆ ಸಖತ್ ಜಿದ್ದಾಜಿದ್ದಿ ಶುರುವಾಗಿದೆ ಅನಿಸುತ್ತೆ. ಯಾಕೆಂದ್ರೆ ಇನ್ನೇನು ಬಹಳ ಹತ್ತಿರದ ಸಮಯದಲ್ಲಿ ಚುನಾವಣೆ ಇರೋದ್ರಿಂದ ನಾ ಮುಂದು, ನೀ ಮುಂದು ಅಂತ ಪೈಪೋಟಿಗೆ ಇವೆಲ್ಲಾ ಮಾಡ್ತಾ ಇರೋದ್ ಕಣ್ಣ ಮುಂದೆಯೇ ಇದೆ. ಬಟ್ ಈ ಭಾರೀ ಎಲೆಕ್ಷನ್ ಸಖತ್ ಜುಂಗಲ್ ಬಂದಿ ಆಗೋದ್ ಕನ್ಫರ್ಮ್.

ಒಂದು ಕಡೆ ಕಾಂಗ್ರೆಸ್ ಪಕ್ಷ ಮುಂದಿನ ಎಲೆಕ್ಷನ್ ನಲ್ಲೂ ಗೆದ್ದೂ ಅಧಿಕಾರ ಉಳಿಸಿಕೊಳ್ಳೋಕೆ ಹರಸಾಹಸ ಮಾಡ್ತಾ ಇದ್ರೆ, ಇನ್ನೊಂದು ಕಡೆ ಜೆಡಿಎಸ್ ಕೂಡ ಅದೇ ತಂತ್ರಗಾರಿಕೆಯನ್ನ ಪಾಲಿಸುತ್ತಿದೆ. ಇನ್ನೂ ನಾವೇನ್ ಕಡಿಮೆ ಇಲ್ಲ ಅಂತ ಬಿಜೆಪಿ ಕೂಡ ಬಿಜೆಪಿ ಅಧ್ಯಕ್ಷ ಅಮಿತ್ ಶಾ ರವ್ರನ್ನ ರಾಜ್ಯಕ್ಕೆ ಕರೆಸಿ ಈಗಾಗ್ಲೇ ಮಿಷನ್ 150 ಗೆಲ್ಲೋ ಪ್ಲ್ಯಾನ್ ನಲ್ಲಿ ಇದ್ದಾರೆ.

ಅಪ್ಪಾಜಿ ಕ್ಯಾಂಟೀನ್ ಹಾಗೂ ಇಂದಿರಾ ಕ್ಯಾಂಟೀನ್ ಎಲೆಕ್ಷನ್ ಮುಗಿಯೋವರೆಗಾ ಅಥವ ಎಲೆಕ್ಷನ್ ಮುಗಿದಮೇಲೂ ಇರುತ್ತಾ ಅನ್ನೋದೇ ಯಕ್ಷ ಪ್ರಶ್ನೆ. ಯಾಕೆಂದ್ರೆ ಎಲೆಕ್ಷನ್ ನಲ್ಲಿ ಒಂದು ವೇಳೆ ಜನ ಸೋಲಿಸಿಬಿಟ್ರೆ ಕೋಪ ಬಂದು, ಏ ಸ್ಟಾಪ್ ಮಾಡ್ರೋ ಅನ್ನಬಹುದು ಅಂತ ಜನಗಳಿಗೆ ಇರೋ ದೌಟು. ಒಂದುವೇಳೆ ಇದೇ ರೀತಿ ನೀವು ಮಾಡಿದ್ದೇ ಆದ್ದಲ್ಲಿ ಜನ ನಿಮಗೆ ಚ..ಹಾರ ರೆಡಿ ಮಾಡಿಕೊಂಡಿರುತ್ತಾರೆ ಅಷ್ಟೆ.

ಒಟ್ನಲ್ಲಿ ಮೂರು ಪಕ್ಷಗಳು ತಂತ್ರಗಾರಿಕೆ, ಕುತಂತ್ರಗಳು, ಗಿಮಿಕ್ ಗಳು ಮಾಡ್ತಾ ಇವೆ. ಏನೇ ಮಾಡಿ ಮುಂದಿನ ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬರಬೇಕು ಎಂಬ ಆಸೆ, ದುರಾಸೆಯಿಂದ ಇನ್ನೇನು ಏನೇನು ಮಾಡ್ತಾರೋ ಗೊತ್ತಿಲ್ಲ, ಬಟ್ ಜನಗಳಿಗೆ ಅದು ಯಾವಾಗ ಬುದ್ದಿ ಬರುತ್ತೋ ಗೊತ್ತಿಲ್ಲ, ಎಲೆಕ್ಷನ್ ಹತ್ತಿರ ಇದೆ ಅದ್ಕೆ ರಾಜಕಾರಣಿಗಳು ಈ ನಾಟಕ ಆಡ್ತಾ ಇದ್ದಾರೆ ಅಂತ ಅರ್ಥನೇ ಮಾಡಿಕೊಳ್ಳೋದಿಲ್ಲ. ಯಪ್ಪಾ ಹೇಗಿದ್ರೂ ನಿಮಗೂ ಬೇಕಾಗಿರುವುದು ಎಲೆಕ್ಷನ್ ಟೈಂನಲ್ಲಿ ಕ್ವಾಟ್ರೂ, ಚಿತ್ರನ್ನ ತಾನೇ ಕೊಟ್ಟೇ ಕೊಡ್ತಾರೆ ಆರಾಮಾಗಿ ಕುಡಿದು ಕುಪ್ಪಳಿಸಿ, ಆರಾಮಾಗಿ ಯಾಮಾರಿಸಿ ಯಾರೋ ಒಬ್ಬ ಗೆಲ್ತಾನೆ , ಆಗ ಅವನು ಎಂಜಾಯ್ ಮಾಡೋದ್ನ ಬಾಯಿ ಬಿಟ್ಕೊಂಡು ನೋಡುವಿರಿ ಅಂತೆ.

Leave a Reply