You are here
Home > ಅಂಕಣ > ಮೇಯರ್ ಪಟ್ಟಕ್ಕಾಗಿ 3 ಪಕ್ಷಗಳು ಜಿದ್ದಾಜಿದ್ದಿ?

ಮೇಯರ್ ಪಟ್ಟಕ್ಕಾಗಿ 3 ಪಕ್ಷಗಳು ಜಿದ್ದಾಜಿದ್ದಿ?

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆ ಈ ಬಾರಿ ಜಿದ್ದಾಜಿದ್ದಿ ಆಗುವ ಲಕ್ಷಣಗಳು ಕಾಣಿಸುತ್ತಿವೆ. ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್‍ಗಳು ಚುನಾವಣೆಯಲ್ಲಿ ಗೆಲ್ಲಲು ತಂತ್ರ ಕುತಂತ್ರಗಳು ರೂಪಿಸುತ್ತಿವೆ.

ಒಂದೆಡೆ ಜೆಡಿಎಸ್ ಕಾಂಗ್ರೆಸ್ ಜೊತೆ ಮೈತ್ರಿಯನ್ನು ಮುರಿದುಕೊಳ್ಳುವುದಾಗಿ ಹೇಳಿದೆ. ಕಾಂಗ್ರೆಸ್ ನ ಈಗಿರುವ ಮೇಯರ್ ಜಿ.ಪದ್ಮಾವತಿ ಮತ್ತು ಉಪಮೇಯರ್ ಆನಂದ್ ಅವರ ಅಧಿಕಾರವಧಿ ಮುಂದಿನ ತಿಂಗಳು ಮುಗಿಯುತ್ತಿದೆ.

ಇನ್ನು ಈ ವರ್ಷ ಮೇಯರ್ ಹುದ್ದೆ ಪರಿಶಿಷ್ಟ ಜಾತಿ ವರ್ಗಕ್ಕೆ ಮೀಸಲಾಗಿದ್ದು, ಉಪಮೇಯರ್ ಹುದ್ದೆ ಸಾಮಾನ್ಯ ವರ್ಗದ ಮಹಿಳಾ ಅಭ್ಯರ್ಥಿಗೆ ಮೀಸಲಾಗಿದೆ.

ಕಾಂಗ್ರೆಸ್ ಮೇಯರ್ ಹುದ್ದೆಯನ್ನು ಪಡೆಯುವ ಕನಸು ಕಾಣುತ್ತಿದ್ದರೆ, ಅದ್ರ ಮೈತ್ರಿ ಪಕ್ಷ ಜೆಡಿಎಸ್ ಹೊಂದಾಣಿಕೆಯಿಂದ ಹೊರಬರುವುದಾಗಿ ಹೇಳಲಾಗುತ್ತಿದೆ.

ಆದ್ರೆ ಮತ್ತೊಂದೆಡೆ ಶತಾಯಗತಾಯ ಎಂಬಂತೆ ಬಿಬಿಎಂಪಿಯ ಅಧಿಕಾರ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ ಎರಡು ಅವಧಿಯಲ್ಲಿ ತನ್ನ ಕಾರ್ಯತಂತ್ರವನ್ನು ಯಶಸ್ವಿಗೊಳಿಸಿಕೊಂಡು ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿತ್ತು.

ಅದ್ರಂತೆ ಮಂಜುನಾಥ್ ರೆಡ್ಡಿ ತಮ್ಮ ಅವಧಿ ಮುಗಿದ ನಂತರ ಜೆಡಿಎಸ್ ಸದಸ್ಯರನ್ನು ಕಡೆಗಣಿಸಲಾಗುತ್ತಿದೆ ಎಂಬ ಮಾತುಗಳು ಕೇಳಿ ಬಂದರೂ ಸಹ ಕೊನೆಗೆ ರಾಜೀಯಾಗಿ ಮತ್ತೆ ಕಾಂಗ್ರೆಸ್‍ನ ಜಿ.ಪದ್ಮಾವತಿ ಮೇಯರ್ ಆಗಿ ಆಯ್ಕೆಯಾದ್ರು.

ಇತ್ತೀಚಿಗೆ ಪದೇ ಪದೇ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ಹಲವು ಗಲಾಟೆಗಳು ನಡೆಯಿತು. ಉದಾ. ಲಗ್ಗೆರೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿಗಳ ಎದುರಿನಲ್ಲೇ ಜಗಳ ವಾಗಿತ್ತು.

ಇಷ್ಟೆ ಅಲ್ಲದೆ ಜೆಡಿಎಸ್ ಶಾಸಕ ಗೋಪಾಲಯ್ಯ, ಮೇಲ್ಮನೆ ಸದಸ್ಯ ಟಿ.ಎ. ಶರವಣ ಸೇರಿದಂತೆ ಹಲವು ಗಣ್ಯರು ಕಾಂಗ್ರೆಸ್ ವರ್ತನೆ ವಿರುದ್ಧ ಸಿಡಿದೆದ್ದು, ಮುಂದಿನ ಮೇಯರ್ ಚುನಾವಣೆಯಲ್ಲಿ ನಮ್ಮ ಪಾಡಿಗೆ ಬಿಟ್ಟುಬಿಡಿ ಎಂದು ಎಚ್ಚರಿಕೆ ನೀಡಿದ್ದರು.

ಪಾಲಿಕೆ ಸಭೆಗಳಲ್ಲಿ ಜೆಡಿಎಸ್ ಸದಸ್ಯರಿಗೆ ಅವಮಾನಿಸಲಾಗಿತ್ತು. ಯಾವುದೇ ನಿರ್ಧಾರ ಕೈಗೊಳ್ಳುವಾಗ ನಮ್ಮನ್ನು ಕೇಳುತ್ತಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಬಳಿ ದೂರು ಸಲ್ಲಿಸಿದ್ದರು. ಇದು ಮೈತ್ರಿ ಆಗದಿರಲು ಇರುವ ಕಾರಣಗಳು.

ಇದ್ರ ಜೊತೆಗೆ ಕೇವಲ 76 ಸ್ಥಾನ ಪಡೆದಿರುವ ಕಾಂಗ್ರೆಸ್ನವರು ಜೆಡಿಎಸ್ ಮತ್ತು ಪಕ್ಷೇತರರ ಬೆಂಬಲ ಪಡೆದು ಪಾಲಿಕೆಯ ಗದ್ದುಗೆಗೇರಿ ಆಡಳಿತ ನಡೆಸುತ್ತಿದೆ. ಮೈತ್ರಿ ಧರ್ಮದ ಹಿನ್ನೆಲೆಯಲ್ಲಿ ಪಾಲಿಕೆಯ ಯಾವುದೇ ಕೆಲಸ, ಕಾರ್ಯ ಹಾಗೂ ನಿರ್ಣಯಗಳನ್ನು ಕಯಗೊಳ್ಳಬೇಕಾದ್ರೆ ಸಮನ್ವಯ ಸಮಿತಿ ಸಭೆ ನಡೆಸಿ ಚರ್ಚಿಸಬೇಕು. ಆದ್ರೆ ಇಲ್ಲಿಯರೆಗೂ ಯಾವುದೇ ಸಭೆ ನಡೆಸಿರಲಿಲ್ಲ, ಇದೇ ಮೊದಲ ಬಾರಿಗೆ ಸಬೆ ನಡೆಸುತ್ತಿರುವುದು ಭಾರೀ ಕುತೂಹಲ ಕೆರಳಿಸಿದೆ. ಮಂಜುನಾಥ್ ರೆಡ್ಡಿ ಹಾಗೂ ಪದ್ಮಾವತಿ ಕೂಡ ಯಾವುದೇ ಸಭೆ ನಡೆಸಿರಲಿಲ್ಲ. ಇದು ಜೆಡಿಎಸ್ ಕೆಂಗಣ್ಣಿಗೆ ಗುರಿಯಾಗಿತ್ತು.

ಇನ್ನು ಬಿಜೆಪಿಗೆ ದಕ್ಕುವುದೇ ಮೇಯರ್ ಪಟ್ಟ, ಕಾಂಗ್ರೆಸ್ ಪಕ್ಷ ಮೈತ್ರಿ ಧರ್ಮ ಪಾಲಿಸುತ್ತಿಲ್ಲ ಎಂದು ಆರೋಪಿಸುತ್ತಲೇ ಬಂದಿರುವ ಜೆಡಿಎಸ್ ನವ್ರು ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ಸೂಚಿಸಿದ್ರೆ ಆ ಪಕ್ಷದಲ್ಲಿರುವ ಹೆಚ್‍ಬಿಆರ್ ಬಡಾವಣೆಯ ಕಾರ್ಪೋರೇಟರ್ ಗಳಲ್ಲಿ ಒಬ್ಬರಿಗೆ ಮೇಯರ್ ಪಟ್ಟ ಸಿಗಬಹುದು ಎಂದು ಮೂಲಗಳಿಂದ ತಿಳಿದು ಬಂದಿದೆ.

ಇನ್ನು ಒಟ್ನಲ್ಲಿ ಮೇಯರ್ ಪಟ್ಟಕ್ಕಾಗಿ ಮೂರು ಪಕ್ಷಗಳು ಅದರದೇ ಆದಂಥ ತಂತ್ರಗಾರಿಕೆಗಳು ನಡೆಸುತ್ತಿವೆ. ಆದ್ರೆ ಕೊನೆಗೆ ಯಾರ್ ಯಾರ ಜೊತೆ ಮೈತ್ರಿ ಆಗುತ್ತಾ, ಅಥವ ಮೈತ್ರಿ ಆಗದೆಯೇ ಚುನಾವಣೆಯಲ್ಲಿ ಯಾರ್ ಮೇಯರ್ ಪಟ್ಟ ತಮ್ಮದಾಗಿಸಿಕೊಳ್ಳುತ್ತಾರೆ ಎಂಬ ಕುತೂಹಲ ಹೆಚ್ಚಾಗಿದೆ. ಕಾದುನೋಡಬೇಕಾಗಿದೆ.

Leave a Reply