You are here
Home > ಅಂಕಣ > ಮೊದಲ ಮುಖ್ಯಮಂತ್ರಿಗೆ ಕಾಂಗ್ರೆಸ್ ಪಕ್ಷದಿಂದ ಅವಮಾನ ..

ಮೊದಲ ಮುಖ್ಯಮಂತ್ರಿಗೆ ಕಾಂಗ್ರೆಸ್ ಪಕ್ಷದಿಂದ ಅವಮಾನ ..

 

 ಉಪಸಂಪಾದಕ
ಮಾಲೂರು ಜಿ. ಶಶಿಕುಮಾರ್ ಶೆಟ್ಟಿ 

 

ಕೆ.ಸಿ.ರೆಡ್ಡಿ ಅಂದ್ರೆ ಯಾರಿಗೆ ಗೊತ್ತು ಅಂತ ಕೈ ಎತ್ತಿ ನೋಡೋಣ ಅಂದ್ರೆ ನೂರು ಜನರಲ್ಲಿ ಒಬ್ಬ ಕೈ ಎತ್ತಬಹುದು ಅಷ್ಟೆ. ಯಾಕೆಂದ್ರೆ ಜನಕ್ಕೆ ಗೊತ್ತಿರೋದ್ ತೆಲುಗು ಸಿನಿಮಾಗಳ ಫೇಮಸ್ಸ್ ಡೈಲಾಗ್ ವೀರಶಿವಶಂಕರ್ ರೆಡ್ಡಿ, ಆ ರೆಡ್ಡಿ, ಈ ರೆಡ್ಡಿ ಅಥವ ಗಣಿಧಣಿ ಜನಾರ್ಧನ್ ರೆಡ್ಡಿ ಅಷ್ಟೆ. ಆದ್ರೆ ನಿಜಕ್ಕೂ ಇದೊಂದು ಶೇಮ್ ಅಂತಾನೇ ಹೇಳಬಹುದು, ಯಾಕೆಂದ್ರೆ ರಾಜ್ಯದ ಮೊದಲ ಮುಖ್ಯಮಂತ್ರಿಯ ಹೆಸರೇ ಗೊತ್ತಿಲ್ಲ ಅಂದ್ರೆ ನಿಜಕ್ಕೂ ಬೇಜಾರ್ ಆಗುತ್ತೆ.

ಜನಗಳಿಗೆ ಯಾಕೆ ಗೊತ್ತಿಲ್ಲ ಅಂದ್ರೆ ಅದಕ್ಕೂ ಕಾರಣ ಇದೆ ಸ್ವಾಮಿ, ಕ್ಯಾಸಂಬಳ್ಳಿ ಚಂಗಲರಾಯರೆಡ್ಡಿ ಮೈಸೂರು ರಾಜ್ಯವಿದ್ದಂಥ ಸಮಯದಲ್ಲಿ ಮೊದಲ ಮುಖ್ಯಮಂತ್ರಿ. ಅದು ಕಾಂಗ್ರೆಸ್ ಪಕ್ಷದವರೇ ಆದ ಕೆ.ಸಿ.ರೆಡ್ಡಿ
ರವರಿಗೆ ಅದೇ ಪಕ್ಷದದವ್ರು ಕೊಟ್ಟಿರುವ ಅಗೌರವ ಅಷ್ಟಿಷ್ಟಲ್ಲ ಬಿಡಿ. ಕಾಂಗ್ರೆಸ್ ಪಕ್ಷಕ್ಕೆ ಅವ್ರ ಕೊಡುಗೆ ಪ್ರಮುಖವಾದುದ್ದು ಆದ್ರೆ ಅದನ್ನೆಲ್ಲಾ ಲೆಕ್ಕಕ್ಕೆ ತೆಗೆದುಕೊಳ್ಳದೆ ಮರೆತುಬಿಟ್ಟಿದೆ ಕಾಂಗ್ರೆಸ್ ಪಕ್ಷ.

ವಿಧಾನಸೌಧ ಯಾರಿಗೆ ಗೊತ್ತಿಲ್ಲ ಹೇಳಿ ಸ್ವಾಮಿ, ಇಡೀ ಪ್ರಪಂಚದಲ್ಲಿ ತುಂಬಾ ಹೆಸ್ರು ಇರೋವಂಥದ್ದು ನಮ್ ರಾಜ್ಯದ ವಿಧಾನಸೌಧಕ್ಕೆ. ಆದ್ರೆ ಎಷ್ಟೋ ಜನಕ್ಕೆ ಗೊತ್ತೇ ಇರಲ್ಲ ಅನಿಸುತ್ತೆ, ಆ ವಿಧಾನಸೌಧಕ್ಕೆ ಮೊದಲು ಅಡಿಪಾಯ ಹಾಕಿಕೊಟ್ಟವ್ರೆ ಈ ಕೆ.ಸಿ.ರೆಡ್ಡಿ ರವರು. ಸುಮಾರು ವಿಧಾನಸೌಧದ ಶೇ 40 ರಷ್ಟು ಭಾಗ ನಿರ್ಮಿಸದವ್ರೇ ಈ ಕೆ.ಸಿ.ರೆಡ್ಡಿ ಆದ್ರೆ ದುರದೃಷ್ಟ ಅಂದ್ರೆ ಏನು ಗೊತ್ತಾ, ಎಲ್ಲಾ ಮುಖ್ಯಮಂತ್ರಿಗಳ ಪ್ರತಿಮೆಗಳು, ಭಾವಚಿತ್ರಗಳು ವಿಧಾನಸೌಧದಲ್ಲಿ ರಾರಾಜಿಸುತ್ತಿದೆ ಆದ್ರೆ ಕೆ.ಸಿ.ರೆಡ್ಡಿ ಯವ್ರ ಪ್ರತಿಮೆ ಇಲ್ಲ, ಅಟ್ಲೀಸ್ಟ್ ಒಂದು ಭಾವಚಿತ್ರ ಕೂಡ ಇಲ್ಲಂದ್ರೆ ಎಷ್ಟು ಬೇಜಾರ್ ಆಗುತ್ತೆ ಅಲ್ವಾ.

ಇನ್ನೊಂದು ಸ್ಪಷ್ಟಣೆ ಕೊಡೋಕೆ ಇಷ್ಟ ಪಡ್ತೀವಿ. ಇದೇನಿದು ಕೆ.ಸಿ.ರೆಡ್ಡಿ ಕಾಂಗ್ರೆಸ್ ಅಲ್ವಾ, ಇವರೇನೂ ಕಾಂಗ್ರೆಸ್ ಸಪೋರ್ಟ್ ಹ್ಹಾ ಅಂತ ಯೋಚ್ನೆ ಮಾಡ್ತಾ ಇರಬಹುದು ಆದ್ರೆ ಇಲ್ಲಿ ನಾವ್ ಯಾವ ಪಕ್ಷದವ್ರು ಅಲ್ಲ. ನ್ಯಾಯಸಮ್ಮತವಾಗಿ ವಿಧಾನಸೌಧಕ್ಕೆ ಶಂಕುಸ್ಥಾಪನೆ ಮಾಡಿದಂಥವ್ರಿಗೆ ಬಿಟ್ಟು ಇನ್ನ್ ಎಲ್ಲರಿಗೂ ಪ್ರತಿಮೆ ಇದೆ, ಭಾವಚಿತ್ರವಿದೆ ಆದ್ರೆ ಇವರಿಗಿಲ್ಲ ಅನ್ನೋದ್ರ ಬಗ್ಗೆ ಮಾತ್ರ ನಿಮ್ಮಲ್ಲಿ ಹೇಳೋಕೆ ಇಷ್ಟ ಪಡ್ತಾ ಇದ್ದಿವಿ.

ಮೈಸೂರು ರಾಜ್ಯದ ಮುಖ್ಯಮಂತ್ರಿಯಾಗಿ ಕೆ.ಸಿ.ರೆಡ್ಡಿ..

ಸ್ವತಂತ್ರ ಮೈಸೂರು ರಾಜ್ಯವು ವಿಚಿತ್ರವಾದ ಮತ್ತು ವಿಶೇಷವಾದ ಘಟನೆಗಳಿಂದ ಕೂಡಿದ ಇತಿಹಾಸವುಳ್ಳ ರಾಜ್ಯವಾಗಿದೆ. ಈ ಇತಿಹಾಸವುಳ್ಳ ರಾಜ್ಯವಾಗಿದೆ. ಈ ಇತಿಹಾಸವು ಭಾರತದ ಇತಿಹಾಸದ ಒಂದು ಭಾಗ. ಈ ರಾಜ್ಯ ಸ್ವಾತಂತ್ರ್ಯ ಪೂರ್ವದಲ್ಲಿ ಕೆಲವು ವಿಚಾರಗಳಲ್ಲಿ ಬ್ರಿಟಿಷ್ ಭಾರತದ ಮಾದರಿ ಸಂಸ್ಥಾನವಾಗಿತ್ತು. ಪೂರ್ವದಲ್ಲಿ ಕೆಲವು ವಿಚಾರಗಳಲ್ಲಿ ಬ್ರಿಟಿಷ್ ಭಾರತದ ಮಾದರಿ ಸಸ್ಥಾನವಾಗಿತ್ತು. ಅನಸರಿಸಲು ಅತ್ಯುತ್ತಮವಾದ ಸಂಪ್ರದಾಯಗಳನ್ನು ಪಡೆದಿತ್ತು.

ಈ ಮೈಸೂರು ರಾಜ್ಯ, ಭಾರತ ಸ್ವತಂತ್ರಗೊಂಡು (15-08-1947) ಎಪ್ಪತ್ತು ದಿವಸಗಳ ನಂತರ ಅಸ್ತಿತ್ವಕ್ಕೆ ಬಂದಿತು. ದಿನಾಂಕ 24-10-1947ರ ವಿಜಯದಶಮಿ ದಿವಸ ಕ್ಯಾಸಂಬಳ್ಳಿ ಚಂಗಲರಾಯರೆಡ್ಡಿ ವ್ರು ಮೈಸೂರು ರಾಜ್ಯದ ಪ್ರಥಮ ಮುಖ್ಯಮಂತ್ರಿಯಾಗಿ ತಮ್ಮ ಹದಿನೇಳು ವರ್ಷಗಳ ಕನಸಾಗಿದ್ದ ಜವಾಬ್ದಾರಿ ಸರ್ಕಾರ ಸ್ಥಾಪನೆಯನ್ನು ನನಸು ಮಾಡುವುದರೊಂದಿಗೆ ಸಾರ್ಥಕ ಪಡಿಸಿಕೊಂಡು, ಭದ್ರಬುನಾದಿಯನ್ನು ಹಾಕುವುದರೊಂದಿಗೆ ಇಂದಿನ ಕರ್ನಾಟಕ ರಾಜ್ಯದ ಬೆಳವಣಿಗೆಗೆ ಕಾರಣರಾಗಿದ್ದರು.

 

ಹೋರಾಟಗಾರರಾಗಿ ಕೆ.ಸಿ.ರೆಡ್ಡಿ..

 

1947ರ ಸೆಪ್ಟೆಂಬರ್ 1ರಿಂದ 1947ರ ಅಕ್ಟೋಬರ್ 12ರವರೆಗೆ ಸಂಸ್ಥಾನದಲ್ಲಿ ಮೈಸೂರು ಕಾಂಗ್ರೆಸ್ ಅಧ್ಯಕ್ಷರು ಹಾಗೂ ಸರ್ವಾಧಿಕಾರಿ ಕೆ.ಸಿ.ರೆಡ್ಡಿ ಅವರ ನೇತೃತ್ವದಲ್ಲಿ ನಡೆದ ಮೈಸೂರು ಚಲೋ ಸತ್ಯಾಗ್ರಹ 42 ದಿನಗಳ ಅವಿರತ ಹೋರಾಟದ ಫಲವಾಗಿ ಜನತಾ ರಾಜ್ಯ ಅಥವಾ ಜವಾಬ್ದಾರಿ ಸರ್ಕಾರ ಸ್ಥಾಪನೆಗೆ ಕಾರಣವಾಯಿತು. ಅಲ್ಲದೆ ಕ್ವಿಟ್ ಇಂಡಿಯಾ ಚಳವಳಿ ಭಾರತದ ಸ್ವಾತಂತ್ರ್ಯಕ್ಕೆ ನಡೆದ ಹೋರಾಟವಾದರೆ, ಮೈಸೂರು ಚಲೋ ಚಳವಳಿ ಮೈಸೂರು ಸ್ವಾತಂತ್ರ್ಯಕ್ಕೆ ನಡೆದ ಹೋರಾಟವಾಗಿದೆ.

ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಹೂಡಿದ ತಂತ್ರಗಳನ್ನು ಬಳಸಿ ಯಶಸ್ಸು ಕಂಡಿದ್ದ ಮೈಸೂರು ಸಂಸ್ಥಾನದ ಜನತೆ, ಅದೇ ತಂತ್ರಗಳನ್ನೇ ಬಳಸಿ ಮೈಸೂರು ಚಲೋ ಚಳವಳಿ ಪೂರ್ಣ ಯಶಸ್ಸು ಕಾಣಲು ಸಾಧ್ಯವಾಯಿತು.

ಅವ್ರಿಂದ ನಮ್ ರಾಜ್ಯಕ್ಕೆ ಸೇವೆ ಇದೆ ಅಂತ ಆಯ್ತು ತಾನೆ. ಮತ್ತೆ ಯಾಕೆ ಸ್ವಾಮಿ ಅವ್ರ ಪ್ರತಿಮೆಯನ್ನ ಸ್ಥಾಪನೆ ಮಾಡೋಕೆ ಹಿಂದೇಟ್ ಹಾಕ್ತಾ ಇದ್ದೀರಾ ಮಾನ್ಯ ಶ್ರೀ ಸಿದ್ದರಾಮಯ್ಯನವ್ರೇ, ತುಂಬಾ ಗೌರವ ಕೊಟ್ಟೇ ಕೇಳ್ತಾ ಇದ್ದಿವಿ ರಾಜ್ಯದ ಜನತೆಯ ಪರವಾಗಿ. ಇದು ನಿಮಗೆ ನೀವೇ ಮೋಸಮಾಡಿಕೊಂಡಂತೆ. ಆಳಾಗಿ ಹೋಗ್ಲಿ ಬಿಜೆಪಿ, ಜೆಡಿಎಸ್ ಸಿಎಂ ಆಗಿದ್ರೆ ಓಕೆ, ಬಟ್ ಕೆ.ಸಿ.ರೆಡ್ಡಿ ನಿಮ್ಮ ಪಕ್ಷದ ಮುಖ್ಯಮಂತ್ರಿ ಅಲ್ಲವೇ ಮತ್ತ್ಯಾಕೆ ತಡ ಮಾಡ್ತಾ ಇದ್ದೀರಾ..

ಸಿದ್ದರಾಮಯ್ಯ ಸರ್ಕಾರ ಅಂದ್ರೆ ಕಾಂಗ್ರೆಸ್ ಸರ್ಕಾರ ಬಂದು ನಾಲ್ಕು ವರ್ಷ ಆಯ್ತು ಅಲ್ವಾ. ಅದೇ ನಾಲ್ಕು ವರ್ಷದಿಂದ ಒಬ್ಬ ಹೆಣ್ಣು ಮಗಳು ನಿಮ್ಮ ಹಿಂದೆಯೇ ಸುತ್ತಿ ಸುತ್ತಿ ನಿಮಗೆ ಸುಮಾರು ಪತ್ರಗಳನ್ನು ಕೊಟ್ಟಿರಬಹುದು. ನಮ್ಮ ತಾತನ ಪ್ರತಿಮೆ ಬೇಡ ರಾಜ್ಯದ ಮೊದಲ ಮುಖ್ಯಮಂತ್ರಿಯ ಪ್ರತಿಮೆಯನ್ನು ವಿಧಾನಸೌಧದಲ್ಲಿ ನಿರ್ಮಿಸಿ ಅಂತ ಅಲ್ವಾ. ಅಯ್ಯೋ ಪಾಪ ನಿಮಗೆ ಎಲ್ಲಿ ನೆನಪು ಇರುತ್ತೆ ಹೇಳಿ, ಆ ಪತ್ರಗಳನ್ನು ಓದಿರೋದೇ ದೌಟು. ಆ ಹೆಣ್ಣು ಮಗಳು ಬೇರೆ ಯಾರು ಅಲ್ಲ ಕೆ.ಸಿ.ರೆಡ್ಡಿಯವ್ರ ಮೊಮ್ಮಗಳಾದ ವಸಂತ ಕವಿತ . ಅಲ್ಲಾ ರೀ ನಿಮ್ಮದೇ ಪಕ್ಷದ ಮೊದಲ ಮುಖ್ಯಮಂತ್ರಿಯ ಪ್ರತಿಮೆ ಸ್ಥಾಪನೆ ಮಾಡೋಕೆ ಅವ್ರ ಕುಟುಂಬ ನಿಮ್ಮ ಬಳಿ ಕೇಳಿಕೊಳ್ಳಬೇಕಾ.. ಯಪ್ಪಾ ಇದೆಂಥ ಕಾಮಿಡಿ ಸ್ವಾಮಿ ರೀ ಮುಖ್ಯಮಂತ್ರಿಗಳೇ ಅವ್ರು ನಿಮ್ಮ ಪಕ್ಷದವ್ರೆ ಈಗಾಲಾದ್ರೂ ಸ್ವಲ್ಪ ಯೋಚ್ನೆ ಮಾಡಿ ಸ್ವಾಮಿ..

ಇದರಿಂದ ನಿಮಗೆ ಏನು ಲಾಭ ಇಲ್ಲ ಅಂತ ಸುಮ್ನೆ ಇದ್ದೀರಾ, ಆಳಾಗಿ ಹೋಗ್ಲಿ ರಾಜಕೀಯಕ್ಕೆ ಅಂತಾನೆ ಸ್ಥಾಪನೆ ಮಾಡಿ ಹಂಗಾದ್ರೂ ಆಗುತ್ತೇನೋ ನೋಡೋಣ. ಹೇಗಿದ್ರು ಕೆ.ಸಿ.ರೆಡ್ಡಿ ಯವ್ರು ರೆಡ್ಡಿ ಸಮುದಾಯ ಅಲ್ವಾ ಅಟ್ಲೀಸ್ಟ್ ಅವ್ರನ್ನ ಓಲೈಸಿ ವೋಟ್ ಬ್ಯಾಂಕ್ ಆದ್ರೂ ಮಾಡಿಕೊಳ್ಳಿ. ನಿಮಗೆ ಇದೇ ತಾನೇ ಬೇಕಾಗಿರೋದ್ ಸದ್ಯದಲ್ಲೇ ಎಲೆಕ್ಷನ್ ಇದೆ ಶುರು ಮಾಡಿ ನಿಮ್ಮ ರಾಜಕೀಯ. ಆದಷ್ಟು ಬೇಗ ಪ್ರತಿಮೆ ಸ್ಥಾಪನೆ ಮಾಡಿ ರೆಡ್ಡಿ ಜನಾಂಗದವ್ರು ನಿಮ್ಮ ಕಡೆ ವಾಲಾಬಹುದು.

ಯಪ್ಪಾ ಬರೀ ರಾಜಕೀಯನಾ, ನಿಮ್ಮ ಮೇಲೆ ಅಷ್ಟೋ ಇಷ್ಟೋ ಜನಗಳಿಗೆ ನಂಬಿಕೆ ಇದೆ. ನಿಮ್ಮ ಸರ್ಕಾರವಿದ್ದಾಗಲೇ ಇದೊಂದು ಒಳ್ಳೆ ಕೆಲಸ ಮಾಡಿ ಪುಣ್ಯ ಕಟ್ಟಿಕೊಳ್ಳಿ ಅಂತ ಜನ ಕೇಳ್ತಾವ್ರೆ ಅವ್ರ ನಂಬಿಕೆಯನ್ನು ಉಳಿಸಿಕೊಳ್ಳಿ ಮುಖ್ಯಮಂತ್ರಿಗಳೇ…

ಆದಷ್ಟು ಬೇಗ ನೀವೇ ಮಾಡಿ ನಿಮ್ಮಗೆ ಕ್ರೆಡಿಟ್ ಸಿಗುತ್ತೆ ಇಲ್ಲಂದ್ರೆ ಬಿಜೆಪಿಗೋ ಅಥವ ಜೆಡಿಎಸ್‍ಗೋ ಕ್ರೆಡಿಟ್ ಹೋಗುತ್ತೆ. ಸುಮ್ನೆ ಯಾಕೆ ಆ ಕ್ರೆಡಿಟ್‍ನ ನೀವೇ ಪಡೆದುಕೊಳ್ಳಿ ಮುಖ್ಯಮಂತ್ರಿಗಳೇ,

 

 

One thought on “ಮೊದಲ ಮುಖ್ಯಮಂತ್ರಿಗೆ ಕಾಂಗ್ರೆಸ್ ಪಕ್ಷದಿಂದ ಅವಮಾನ ..

  1. ಕೆ.ಸಿ.ರೆಡ್ಡಿ ಬ್ರಾಹ್ಮಣರ ತಂತ್ರಕ್ಕೆ ಬಲಿಯಾದ ಒಂದು ಬಲಿಪಶು ಅಷ್ಟೆ! ಇವರಿಂದ ಸ್ವತಂತ್ರ್ಯ ಹೋರಾಟ ನಡೆದಿಲ್ಲ ಆದರೆ! ನಾಲ್ವಡಿ ಕೃಷ್ಣದೇವರಾಯ ಒಡೆಯರ್ ರವರನ್ನು ಅಧಿಕಾರದಿಂದ ಕೆಳಗಿಳಿಸಲು ಮಾಡಿದ ಬ್ರಾಹ್ಮಣ ಕುತಂತ್ರದ ಬೊಂಬೆಯಷ್ಟೆ ಕೆ.ಸಿ.ರೆಡ್ಡಿ

Leave a Reply