You are here
Home > ರಾಜಕೀಯ > ರಾಷ್ಟ್ರಪತಿಗಳ ಬಾಯಿಂದಲೇ ಟಿಪ್ಪು ಹೊಗಳಿಸಿದ ಸರ್ಕಾರ: ಬಿಜೆಪಿಗೆ ಶಾಕ್!

ರಾಷ್ಟ್ರಪತಿಗಳ ಬಾಯಿಂದಲೇ ಟಿಪ್ಪು ಹೊಗಳಿಸಿದ ಸರ್ಕಾರ: ಬಿಜೆಪಿಗೆ ಶಾಕ್!

ಉಪಸಂಪಾದಕ
ಮಾಲೂರು ಜಿ.ಶಶಿಕುಮಾರ್ ಶೆಟ್ಟಿ

ವಿಧಾನಸೌಧದ ವಜ್ರಮಹೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿಗಳು ತಮ್ಮ ಭಾಷಣದಲ್ಲಿ ಟಿಪ್ಪು ಸುಲ್ತಾನ್‍ರನ್ನು ಹೊಗಳಿದ್ದಾರೆ. ಭಾಷಣ ಕೇಳಿಸಿಕೊಳ್ಳುತ್ತಿದ್ದ ಬಿಜೆಪಿ ಮುಖಂಡರು ಪೆಚ್ಚುಮೋರೆ ಹಾಕಿಕೊಂಡು ಕಂಡುಬಂದಿತು.

ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ವಿರುದ್ಧ ದೊಡ್ಡ ಹೋರಾಟ ಮಾಡಲು ಅಣಿಯಾಗುತ್ತಿರುವ ಬಿಜೆಪಿಗೆ ಇದು ಮುಜುಗರವಾಗುವ ಸಂಧರ್ಭವಾಗಿದೆ. ಬಿಜೆಪಿಯ ಕೈಕಟ್ಟಿಹಾಕಲು ಮತ್ತು ಬಾಯಿ ಮುಚ್ಚಿಸಲು ರಾಜ್ಯ ಸರ್ಕಾರ ರಾಷ್ಟ್ರಪತಿಗಳನ್ನೇ ಬಳಸಿಕೊಂಡಿದೆ. ಬಿಜೆಪಿಯೇ ಆಯ್ಕೆ ಮಾಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವ್ರ ಬಾಯಿಂದಲೇ ಟಿಪ್ಪುವನ್ನು ಹೊಗಳಿಸಿ ಸರ್ಕಾರವು ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದಿದೆ.

ರಾಜ್ಯ ಸರ್ಕಾರವು ವಿಧಾನಸೌಧದ ವಜ್ರಮಹೋತ್ಸವದಂಥ ಕಾರ್ಯಕ್ರಮದಲ್ಲೂ ರಾಜಕೀಯ ಮಾಡುತ್ತಿದೆ ಎಂಬ ಟೀಕೆ ಕೇಳಿಬರುತ್ತಿದೆ. ಸರ್ಕಾರವು ಭಾಷಣ ಸಿದ್ಧಪಡಿಸಿ ರಾಷ್ಟ್ರಪತಿಗಳ ಬಾಯಿಂದ ಟಿಪ್ಪುವನ್ನು ಹೊಗಳಿಸುವಂಥ ಕೀಳು ಮಟ್ಟಕ್ಕೆ ಇಳಿದಿದೆ ಅಂತ ಬಿಜೆಪಿ ನಾಯಕರು ಟೀಕಿಸಿದ್ದಾರೆ. ಸರ್ಕಾರ ಏನೇ ಮಾಡಿದರೂ ಟಿಪ್ಪು ಸುಲ್ತಾನ್ ಜಯಂತಿ ವಿರುದ್ಧ ಬಿಜೆಪಿ ಹೋರಾಟ ಕೈಬಿಡುವುದಿಲ್ಲ ಅಂತ ಈ ನಾಯಕರು ಹೇಳಿದ್ದಾರೆ.

ಅಷ್ಟಕ್ಕೂ ಟಿಪ್ಪು ಬಗ್ಗೆ ರಾಷ್ಟ್ರಪತಿ ಹೇಳಿದ್ದೇನು? ಟಿಪ್ಪು ಒಬ್ಬ ಹೀರೋ. ಕರ್ನಾಟಕ ರಾಜ್ಯದ ಅಭಿವೃದ್ಧಿಯಲ್ಲಿ ಟಿಪ್ಪು ಪಾತ್ರ ಮಹತ್ವದ್ದೆಂದು ರಾಷ್ಟ್ರಪತಿ ಕೋವಿಂದ್ ಹೇಳಿದ್ರು. ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಟಿಪ್ಪು ಸುಲ್ತಾನ್ ಮುಂಚೂಣಿಯಲ್ಲಿದ್ದರು. ರಾಜ್ಯವನ್ನು ಅವ್ರು ಅಭಿವೃದ್ಧಿಯ ಪಥದತ್ತ ಕೊಂಡೊಯಿದ್ದರು. ಯುದ್ಧದಲ್ಲಿ ಟಿಪ್ಪು ಸುಲ್ತಾನ್ ರಾಕೆಟ್ ಗಳನ್ನು ಬಳಕೆ ಮಾಡಿದ್ದರು. ಟಿಪ್ಪುವಿನ ರಾಕೆಟ್ ತಂತ್ರಜ್ಞಾನವನ್ನು ಯೂರೋಪಿಯನ್ನರು ಅಳವಡಿಸಿಕೊಂಡರು ಅಂತ ರಾಮನಾಥ್ ಕೋವಿಂದ್ ತಮ್ಮ ಭಾಷಣದಲ್ಲಿ ಟಿಪ್ಪುವನ್ನು ಕೊಂಡಾಡಿದರು. ರಾಷ್ಟ್ರಪತಿಯವ್ರು ಟಿಪ್ಪುವನ್ನು ಹೊಗಳುತ್ತಿದ್ದಂತೆಯೇ ಸಭೆಯಲ್ಲಿ ಕಾಂಗ್ರೆಸ್ಸಿಗರು ಮೇಜು ಕುಟ್ಟಿ ಸಂತೋಷ ವ್ಯಕ್ತಪಡಿಸಿದ್ರು. ಬಿಜೆಪಿ ಸದಸ್ಯರು ಪೆಚ್ಚುಮೋರೆ ಹಾಕಿ ಕೂರಬೇಕಾಯಿತು.

ಅಂದಹಾಗೇ ನ.10ಕ್ಕೆ ರಾಜ್ಯ ಸರ್ಕಾರವು ಟಿಪ್ಪು ಜಯಂತಿಯನ್ನು ಆಚರಿಸುತ್ತಿದೆ. ಟಿಪ್ಪು ಸುಲ್ತಾನ್ ಹಿಂದೂ ವಿರೋಧಿಯಾಗಿದ್ದ, ಬಲವಂತವಾಗಿ ಮತಾಂತರ ಮಾಡಿದ್ದ, ಹಿಂದೂ ದೇಗುಲಗಳನ್ನ ಧ್ವಂಸ ಮಾಡಿದ್ದ ಎಂಬುದು ಬಲಪಂಥೀಯರ ಆರೋಪವಾಗಿದ್ದು, ಈ ಹಿನ್ನೆಲೆಯಲ್ಲಿ ಟಿಪ್ಪು ಜಯಂತಿಗೆ ವಿರೋಧ ವ್ಯಕ್ತವಾಗುತ್ತಿದೆ.

Leave a Reply