You are here
Home > ರಾಜಕೀಯ > ವಿಧಾನಸೌಧದ ವಜ್ರಮಹೋತ್ಸವ ರಾಜ್ಯವೇ ಸಂಭ್ರಮಿಸುವ ಸಂಗತಿ: ಸಿದ್ದರಾಮಯ್ಯ

ವಿಧಾನಸೌಧದ ವಜ್ರಮಹೋತ್ಸವ ರಾಜ್ಯವೇ ಸಂಭ್ರಮಿಸುವ ಸಂಗತಿ: ಸಿದ್ದರಾಮಯ್ಯ

ಉಪಸಂಪಾದಕ
ಮಾಲೂರು ಜಿ.ಶಶಿಕುಮಾರ್ ಶೆಟ್ಟಿ

ನಮ್ಮ ವಿಧಾನಸೌಧ ವಜ್ರಮಹೋತ್ಸವವನ್ನು ಇಡೀ ರಾಜ್ಯವೇ ಸಂಭ್ರಮಿಸುವ ಸಂಗತಿಯಾಗಿದೆ ಅಂತ ಸಿಎಂ ಸಿದ್ದರಾಮಯ್ಯ ಅವ್ರು ವಿಧಾನಸೌಧದ ವಜ್ರಮಹೋತ್ಸವದಲ್ಲಿ ಹೇಳಿದ್ರು.

ಈ ವಿಧಾನಸೌಧದ ನಿರ್ಮಾಣದ ಅವಧಿಯಲ್ಲಿ ಆಡು ಮುಟ್ಟಿದ ಸೊಪ್ಪಿಲ್ಲ ಎಂಬಂತೆ ಕೆಂಗಲ್ ಹನುಮಂತಯ್ಯ ಅವ್ರು ಎದುರಿಸುವ ಸಮಸ್ಯೆಗಳೇ ಇಲ್ಲ. ಕಟ್ಟಡದ ಸ್ಥಳದ ಆಯ್ಕೆಯಿಂದ ಹಿಡಿದು ಕಟ್ಟಡ ಪೂರ್ಣಗೊಳ್ಳುವವರೆಗೂ ಕೆಂಗಲ್ ಹನುಮಂತಯ್ಯ ಅವ್ರು ತಪ್ಪಸ್ಸಿನಂತೆ ಕಾರ್ಯ ನಿರ್ವಹಿಸಿದ್ದರು ಅಂತ ಹೇಳಿದ್ರು.

ಇಡೀ ಭಾರತ್ದಲ್ಲಿಯೇ ಶಾಸಕಾಂಗ ಮತ್ತು ಕಾರ್ಯಾಂಗ ಒಂದಡೆಯೇ ಇರುವ ಕಟ್ಟಡ ಎಂದರೆ ನಮ್ಮ ವಿಧಾನಸೌಧ ಮಾತ್ರ, ಬ್ರಿಟಿಷ್, ದ್ರಾವೀಡ ಹಾಗೂ ಇಂಡೋ-ಇಸ್ಲಾಮಿಕ್ ಶೈಲಿಯ ವಾಸ್ತು ಶಿಲ್ಪದ ಸಮ್ಮೀಲನದಲ್ಲಿ 60 ಎಕರೆ ಪ್ರದೇಶದಲ್ಲಿ ಮೈದೇಳಿರುವ ಮನಮೋಹನ ಈ ಕಲ್ಲಿನ ಕಟ್ಟಡಕ್ಕೆ ಇದೀಗ 60 ವರ್ಷಗಳಾಗಿವೆ ಎಂಬುದನ್ನು ಕನ್ನಡಿಗರೆಲ್ಲರ ಅಭಿಮಾನವನ್ನು ಹಾಗೂ ಸಂತಸವನ್ನು ಇಮ್ಮಡಿಗೊಳಿಸುವಂಥ ವಿಚಾರವಾಗಿದೆ ಎಂದರು.

ಕರ್ನಾಟಕದ ನೆಲ ಜಲ, ನುಡಿ-ಗಡಿ, ಕಾವೇರಿ ಮಹದಾಯಿ ನದಿ ನೀರು ಹಂಚಿಕೆಯ ವಿಷಯದಲ್ಲಿ ಪಕ್ಷ ಭೇದ ಮರೆತು ಒಮ್ಮತ ನಿಲುವು-ನಿರ್ಧಾರಗಳನ್ನು ಹೊರಹೊಮ್ಮಿಸಿದ ವಿಧಾನ ಸೌಧವು ಜನಪರ ಸೌಧವಾಗಿ ಸೂರ್ಯ-ಚಂದ್ರರು ಇರುವವರೆಗೂ ಇರಲಿ ಎಂಬುದೇ ನನ್ನ ಮನದಾಳದ ಹಾರೈಕೆ ಎಂದು ತಿಳಿಸಿದ್ರು.

Leave a Reply