You are here
Home > ಅಂಕಣ > ಶೀಘ್ರವಾಗಿ ರೈತರ ಸಾಲಮನ್ನಾ ಮಾಡದಿದ್ದರೇ ಬೃಹತ್ ಪ್ರತಿಭಟನೆ: ಯಡಿಯೂರಪ್ಪ

ಶೀಘ್ರವಾಗಿ ರೈತರ ಸಾಲಮನ್ನಾ ಮಾಡದಿದ್ದರೇ ಬೃಹತ್ ಪ್ರತಿಭಟನೆ: ಯಡಿಯೂರಪ್ಪ

yediyurappa speech

ರಾಜ್ಯ ಸರ್ಕಾರ ಶೀಘ್ರವೇ ರೈತರ ಸಾಲಮನ್ನಾ ಮಾಡದಿದ್ದರೇ ಜುಲೈ7ರಿಂದ 9 ರವರೆಗೆ ರಾಜ್ಯಾದ್ಯಂತ ರೈತರ ಬೃಹತ್ ರ್ಯಾಲಿ ಹಮ್ಮಿಕೊಳ್ಳಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.ಜುಲೈ 10 ರಂದು ಸುಮಾರು 4 ಲಕ್ಷ ರೈತರು ಬೆಂಗಳೂರಿನಲ್ಲಿ ಸೇರಿ ಭಾರೀ ಪ್ರಮಾಣದ ರ್ಯಾಲಿ ನಡೆಸುವುದಾಗಿ ಹೇಳಿದ್ದಾರೆ.ಮೈಸೂರಿನಲ್ಲಿ ಮಾತನಾಡಿದ ಅವರು, ಸರ್ಕಾರ ರೈತರ ಸಾಲಮನ್ನಾ ಮಾಡಿದರೇ ನಾನು ಸಿಎಂ ಸಿದ್ದರಾಮಯ್ಯ ಅವರಿಗೆ ಸಾರ್ವಜನಿಕವಾಗಿ ಧನ್ಯವಾದ ಹೇಳುತ್ತೇನೆ ಎಂದು ತಿಳಿಸಿದ್ದಾರೆ,ರಾಷ್ಟ್ರೀಯ ಬ್ಯಾಂಕ್ ಗಳ ಸಾಲ ಮನ್ನಾ ಮಾಡಲಪ ಕೇಂದ್ರ ಸರ್ಕಾರ 32 ಸಾವಿರ ಕೋಟಿ ನೀಡಲಿದೆಯೇ ಎಂದು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಲು ಅವರು ನಿರಾಕರಿಸಿದರು.ವಿವಿಧ ಯೋಜನೆಗಳಡಿ ಕೇಂದ್ರ ಸರ್ಕಾರ ರಾಜ್ಯಕ್ಕೆ 1.95 ಲಕ್ಷ ಕೋಟಿ ಅನುದಾನ ನೀಡಿದೆ ಎಂದು ಬಿಎಸ್ ವೈ ವಿವರಿಸಿದರು. ಆಗಸ್ಟ್ ತಿಂಗಳ ಅಂತ್ಯದೊಳಗೆ ರಾಜ್ಯದ 22 ವಿಧಾನ ಸಭೆ ಕ್ಷೇತ್ರಗಳಲ್ಲೂ ಪ್ರವಾಸ ಮಾಡಲಾಗುವುದು ಎಂದು ಹೇಳಿದರು

Leave a Reply