You are here
Home > ರಾಜಕೀಯ > ಸುಳ್ಳು ಕೇಸ್‍ನಲ್ಲಿ ತಗಲಾಕಿಸುವ ಆತುರದಲ್ಲಿದೆ ಕಾಂಗ್ರೆಸ್; ಶೆಟ್ಟರ್

ಸುಳ್ಳು ಕೇಸ್‍ನಲ್ಲಿ ತಗಲಾಕಿಸುವ ಆತುರದಲ್ಲಿದೆ ಕಾಂಗ್ರೆಸ್; ಶೆಟ್ಟರ್

ಉಪಸಂಪಾದಕ
ಮಾಲೂರು ಜಿ.ಶಶಿಕುಮಾರ್ ಶೆಟ್ಟಿ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ಅನಂತ್ ಕುಮಾರ್ ಅವ್ರ ಧ್ವನಿ ಕುರಿತ ವಿಧಿ ವಿಜ್ಞಾನ ಪ್ರಯೋಗಾಲಯ ವರದಿಯ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವ್ರು, ಕಾಂಗ್ರೆಸ್ ಸರ್ಕಾರ ಬಿಜೆಪಿ ನಾಯಕರನ್ನು ಸುಳ್ಳು ಕೇಸ್ ನಲ್ಲಿ ಫಿಕ್ಸ್ ಮಾಡುವ ಆತುರದಲ್ಲಿದೆ ಅಂತ ಆರೋಪಿಸಿದ್ದಾರೆ.

ಇನ್ನೂ ಬಿಜೆಪಿ ಹೈಕಮಾಂಡ್‍ಗೆ ಕಪ್ಪ ಕೊಟ್ಟಿರುವ ಬಗ್ಗೆ ಸಂಭಾಷಣೆ ನಡೆಸಿದ್ದ ಸಿಡಿಯಲ್ಲಿ ಇರುವುದು ಅನಂತ್ ಕುಮಾರ್ ಮತ್ತ ಬಿಎಸ್‍ವೈ ಅವರದ್ದೇ ಧ್ವನಿ ಅಂತ ವಿಧಿ ವಿಜ್ಞಾನ ಪ್ರಯೋಗಾಲಯ ನೀಡಿದ ವರದಿ ಬಗ್ಗೆ ಪ್ರತಿಕ್ರಿಯಿಸಿದ ಶೆಟ್ಟರ್, ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ್ರ ಸಲಹೆಗಾರ ಕೆಂಪಯ್ಯ ಅವ್ರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ರು.

ರಾಜ್ಯ ಸರ್ಕಾರ ತರಾತುರಿಯಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯ ವರದಿ ತರಿಸಿದೆ. ಸಿದ್ದರಾಮಯ್ಯ ಪ್ರತಿ ಹಂತದಲ್ಲೂ ಸೇಡಿನ ರಾಜಕೀಯ ಮಾಡುತ್ತಿದ್ದು, ಬಿಜೆಪಿ ನಾಯಕರ ಮೇಲೆ ಮತ್ತು ಯಡಿಯೂರಪ್ಪ ಮೇಲೆ ಸುಳ್ಳು ಪ್ರಕರಣಗಳನ್ನು ಹಾಕಿಸುತ್ತಿದ್ದಾರೆ.

ಸಿಎಂ ವಿರೋಧಿಗಳನ್ನು ಹೆಣೆಯಲು ಆಡಳಿತ ದುರುಪಯೋಗಪಡಿಸುತ್ತಿದ್ದಾರೆ. ಆದ್ರೆ ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಕಾಳಜಿ ವಹಿಸಿಲ್ಲ, ಏನೂ ಆಧಾರದ ಇಲ್ಲದೇ ಕ್ಲೀನ್ ಚಿಟ್ ಕೊಟ್ಟಿದ್ದಾರೆ ಅಂತ ಶೆಟ್ಟರ್ ಟೀಕಿಸಿದ್ದಾರೆ .

Leave a Reply