You are here
Home > ವಿಶೇಷ (Page 2)

ಆಸ್ಪತ್ರೆಯಿಂದ ಪೇಜಾವರ ಶ್ರೀಗಳು ಡಿಸ್ಟಾರ್ಜ್

ಉಪಸಂಪಾದಕ ಮಾಲೂರು ಜಿ.ಶಶಿಕುಮಾರ್ ಶೆಟ್ಟಿ ಫೆಮರಾಲ್ ಹರ್ನಿಯಾ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಪೇಜಾವರ ಶ್ರೀಗಳು ಕೆಎಂಸಿ ಆಸ್ಪತ್ರೆಯಿಂದ ಡಿಸ್ಟಾರ್ಜ್ ಆಗಿದ್ದಾರೆ. ಶ್ರೀಕೃಷ್ಣ ಮಠಕ್ಕೆ ವಿಶ್ವೇಶತೀರ್ಥ ಶ್ರೀಪಾದರು ಆಗಮಿಸಿದ್ದಾರೆ. ವೈದ್ಯರು ಚಿಕ್ಕದೊಂದು ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಈಗ ಯಾವ ನೋವು ಇಲ್ಲ. ವಿಶ್ರಾಂತಿ ತೆಗೆದುಕೊಳ್ಳಲು ವೈದ್ಯರು ಸೂಚಿಸಿದ್ದಾರೆ. ಮೆಟ್ಟಿಲು ಹತ್ತಬಾರದು, ಭಾರ ಎತ್ತಬಾರದು ಅಂತ ವೈದ್ಯರು ತಾಕೀತು ಮಾಡಿದ್ದಾರೆ. ಕೆಲ ದಿನಗಳ ಕಾಲ ಪೂಜೆ ಮಾಡಲು ಆಗಲ್ಲ. ಉಳಿದಂತೆ ಎಲ್ಲಾ ಕಾರ್ಯಕ್ರಮದಲ್ಲಿಯೂ ಭಾಗಿಯಾಗುತ್ತೇನೆ ಅಂತ ಪೇಜಾವರ ಶ್ರೀ ತಿಳಿಸಿದ್ರು.

ಆಧಾರ್‍ಕಾರ್ಡ್ ಇಲ್ಲದ್ದಕ್ಕೆ ಪಡಿತರ ನಿರಾಕರಣೆ ಸರಿಯಲ್ಲ;ಕೇಂದ್ರ ಸರ್ಕಾರ

ಉಪಸಂಪಾದಕ ಮಾಲೂರು ಜಿ.ಶಶಿಕುಮಾರ್ ಶೆಟ್ಟಿ ಆಧಾರ್ ಕಾರ್ಡ್ ಇಲ್ಲದ ಕಾರಣಕ್ಕೆ ಅಥವಾ ಪಡಿತರ ಕಾರ್ಡ್‍ನೊಂದಿಗೆ ಆಧಾರ್ ಜೋಡಿಸದ್ದಕ್ಕೆ ಪಡಿತರವನ್ನು ನಿರಾಕರಿಸಬಾರದು ಅಂತ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ. ಅಲ್ಲದೇ ಆಧಾರ್ ಹೊಂದದೇ ಇರುವ ಕಾರಣಕ್ಕೆ ಫಲಾನುಭವಿ ಕುಟುಂಬಗಳನ್ನು ಪಟ್ಟಿಯಿಂದ ತೆಗೆದುಹಾಕಬಾರದು ಅಂತ ತಿಳಿಸಿದೆ. ಈ ಸಂಬಂಧ ಎಲ್ಲಾ ರಾಜ್ಯಗಳಿಗೆ ಆಹಾರ ಸಚಿವಾಲಯ ಸುತ್ತೋಲೆ ಹೊರಡಿಸಲಾಗಿದೆ. ಸಾರ್ವಜನಿಕ ಪಡಿತರ ನಿರಾಕರಿಸಿದ್ದರಿಂದ ಜಾರ್ಖಂಡ್ ನಲ್ಲಿ ಇತ್ತೀಚಿಗೆ 11 ವರ್ಷದ ಬಾಲಕಿಯೊಬ್ಬಳು ಹಸಿವಿನಿಂದ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ

ನಕಲಿ ಛಾಪಾಕಾಗದ ಹಗರಣದ ರುವಾರಿ ಕರೀಂಲಾಲ್ ತೆಲಗಿ ಸಾವು

ಉಪಸಂಪಾದಕ ಮಾಲೂರು ಜಿ.ಶಶಿಕುಮಾರ್ ಶೆಟ್ಟಿ ನಕಲಿ ಛಾಪಾ ಕಾಗದ ಹಗರಣದ ರೂವಾರಿ ಕರೀಂ ಲಾಲ್ ತೆಲಗಿ ಇಂದು 4.45 ರ ಸುಮಾರಿಗೆ ನಿಧನನಾಗಿದದಾನೆ. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ತೆಲಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನನಾಗಿದ್ದಾನೆ ಅಂತ ತಿಳಿದುಬಂದಿದೆ. 56 ವರ್ಷದ ತೆಲಗಿ ಬಹುಕೋಟಿ ಛಾಪಾ ಕಾಗದ ಹಗರಣದ ಪ್ರಕರಣದಲ್ಲಿ 2002ರಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಜಾ ಖೈದಿಯಾಗಿದ್ದ. ಕಳೆದ 10 ದಿನಗಳಿಂದ ಅವ್ರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ತೆಲಗಿಗೆ

ಗಣಪತಿ ಪ್ರಕರಣ ಇಂದು ಸಿಬಿಐ ಗೆ ಹಸ್ತಾಂತರ!

ಉಪಸಂಪಾದಕ ಮಾಲೂರು ಜಿ.ಶಶಿಕುಮಾರ್ ಶೆಟ್ಟಿ ಡಿವೈಎಸ್‍ಪಿ ಎಂ.ಕೆ.ಗಣಪತಿ ಅನುಮಾನಸ್ಪಾದ ಸಾವಿನ ಪ್ರಕರಣವನ್ನು ಸುಪ್ರೀಂಕೋರ್ಟ್ ಆದೇಶದಂತೆ ಸಿಐಡಿ ಪೊಲೀಸರು ಚೆನ್ನೈ ಸಿಬಿಐ ಅಧಿಕಾರಿಗಳಿಗೆ ಇಂದು ಹಸ್ತಾಂತರಿಸಲಿದ್ದಾರೆ. ಕಳೆದ ವಾರ ಗಣಪತಿ ಪ್ರಕರಣವನ್ನು ಚೆನ್ನೈನ ಪ್ರಾದೇಶಿಕ ಕಚೇರಿಗೆ ಹಸ್ತಾಂತರ ಮಾಡುವಂತೆ ದೆಹಲಿ ಸಿಬಿಐ ಪ್ರಧಾನ ಕಚೇರಿಯಿಂದ ಆದೇಶ ಬಂದ ಹಿನ್ನೆಲೆಯಲ್ಲಿ ಇದೀಗ ಪ್ರಕರಣದ ಎಲ್ಲ ದಾಖಲೆಗಳನ್ನು ಸಂಗ್ರಹಿಸಿ ಸಿಬಿಐಗೆ ವಹಿಸಲು ಮೇಲಾಧಿಕಾರಿಯಿಂದ ಅನುಮತಿ ಸಿಕ್ಕಿದೆ. ಪ್ರಕರಣದ ತನಿಖೆ ನಡೆಸಿದ್ದ ಸಿಐಡಿ ಅಧಿಕಾರಿಗಳು ಸಚಿವ ಕೆ.ಜೆ.ಜಾರ್ಜ್, ಹಿರಿಯ ಐಪಿಎಸ್ ಅಧಿಕಾರಿಗಳಾದ

ಚುನಾವಣೆ ಹಿನ್ನೆಲೆ ಒಂದು ವಾರ ಮೊದಲೇ ನಡೆಯಲಿದೆ ಸಿಇಟಿ ಪರೀಕ್ಷೆ

ಉಪಸಂಪಾದಕ ಮಾಲೂರು ಜಿ.ಶಶಿಕುಮಾರ್ ಶೆಟ್ಟಿ 2018ರ ಏಪ್ರಿಲ್ ನಲ್ಲಿ ನಡೆಯಬೇಕಿರುವ ಸಿಇಟಿ ಪರೀಕ್ಷೆಯನ್ನು ಸಾಮಾನ್ಯ ವೇಳಾಪಟ್ಟಿಗಿಂತ ಒಂದು ವಾರ ಮೊದಲೇ ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಿರ್ಧರಿಸಿದೆ ಅಂತ ತಿಳಿದುಬಂದಿದೆ. ಮೂಲಗಳ ಪ್ರಕಾರ 2018ರಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯಲಿದ್ದು, ಈ ವೇಳೆ ವಿದ್ಯಾರ್ಥಿಗಳಿಗೆ ತೊಂದರೆಯಾಗುವ ಉದ್ದೇಶದಿಂದ ಪರೀಕ್ಷೆಗಳನ್ನು ಒಂದು ವಾರ ಮೊದಲೇ ಆಯೋಜಿಸಲು ಕೆಇಎ ನಿರ್ಧರಿಸಿದೆ. ಈಗಾಗ್ಲೇ ಈ ಸಂಬಂಧ ಪ್ರಾಥಮಿಕ ಚರ್ಚೆ ನಡೆಸಲಾಗಿದ್ದು, ರಾಜೀವ್ ಗಾಂಧಿ ವೈಧ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯ ಮತ್ತು ವಿಶ್ವೇಶ್ವರಯ್ಯ

ಇಷ್ಟಕ್ಕೂ ಬಾಬಾ ರಾಮ್ ದೇವ್ ಗುರು ಯಾರು?

ಉಪಸಂಪಾದಕ ಮಾಲೂರು ಜಿ.ಶಶಿಕುಮಾರ್ ಶೆಟ್ಟಿ ಕಲಿ ಕಮಾಲಿ ಬಾಬಾನ ಡೇರೆ ಹರಿಯಾಣದಲ್ಲಿ ಎಲ್ಲಿದೆ? ಬಾಬಾ ರಾಮ್‍ದೇವ್ ಅವ್ರ ಗುರು ಯಾರು? ಚಲ್ಕದ ಆಭರಣವನ್ನು ದೇಹದ ಯಾವ ಭಾಗದಲ್ಲಿ ಧರಿಸಲಾಗುತ್ತದೆ? ಇವು ಹರಿಯಾಣದ ಸರ್ಕಾರಿ ಹುದ್ದೆಗಳ ನೇಮಕಾತಿಗಾಗಿ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಯ ಸಾಮಾನ್ಯ ಜ್ಞಾನ ವಿಭಾಗದಲ್ಲಿ ಕಳೆದೆರಡು ವರ್ಷಗಳಿಂದ ಕೇಳಲಾಗುತ್ತಿರುವ ಕೆಲವೊಂದು ಪ್ರಶ್ನೆಗಳ ಸ್ಯಾಂಪಲ್ ಆಗಿವೆ. ಪೊಲೀಸ್ ಪೇದೆಗಳು, ಕ್ಲರ್ಕ್, ಎಸ್‍ಐ, ಕಂದಾಯ ಅಧಿಕಾರಿ ಮತ್ತಿತರ ಹುದ್ದೆಗಳಿಗೆ ನೇಮಕಾತಿಗಾಗಿನ ಪರೀಕ್ಷೆಗಳಲ್ಲಿ ಈ ಪ್ರಶ್ನೆಗಳನ್ನು ಕೇಳಲಾಗುವ ಹಿಂದಿನ

ಆಸ್ಪತ್ರೆಯಿಂದ ಯಡಿಯೂರಪ್ಪ ಡಿಸ್ಟಾರ್ಜ್

ಉಪಸಂಪಾದಕ ಮಾಲೂರು ಜಿ.ಶಶಿಕುಮಾರ್ ಶೆಟ್ಟಿ ತೀವ್ರ ಜ್ವರ ಮತ್ತು ಕಫದಿಂದ ಬಳಲಿ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಬನ್ನೇರುಘಟ್ಟ ರಸ್ತೆಯಲ್ಲಿರುವ ಸಾಗರ್ ಆಸ್ಪತ್ರೆಗೆ ಯಡಿಯೂರಪ್ಪ ಅವ್ರನ್ನು ನಾಲ್ಕು ದಿನಗಳ ಹಿಂದೆ ದಾಖಲಿಸಲಾಗಿತ್ತು. ಸತತ ಪ್ರವಾಸದಿಂದಾಗಿ ಕಫ ಮತ್ತು ತೀವ್ರ ಜ್ವರ ಕಾಣಿಸಿಕೊಂಡಿದೆ. ಕೂಡಲೇ ಅವ್ರನ್ನು ವೈದ್ಯರ ಸೂಚನೆಯಂತೆ ಸಾಗರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು ದಿನ ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆದಿದ್ದ ಅವ್ರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ

ಇನ್ನೆರಡು ದಿನ ಬಿಎಸ್‍ವೈ ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ

ಉಪಸಂಪಾದಕ ಮಾಲೂರು ಜಿ.ಶಶಿಕುಮಾರ್ ಶೆಟ್ಟಿ ಬನ್ನೇರುಘಟ್ಟ ರಸ್ತೆಯ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವ್ರಿಗೆ ಇನ್ನೆರಡು ದಿನ ಆಸ್ಪತ್ರೆಯಲ್ಲೇ ಚಿಕಿತ್ಸೆ ಮುಂದುವರೆಸಲಗುತ್ತದೆ. ಅಂದಹಾಗೇ ನಿನ್ನೆ ಬೆಳಗ್ಗೆ ಆಸ್ಪತ್ರೆಯಿಮದ ಡಿಸ್ಟಾರ್ಜ್ ಆಗಿ ಮನೆಗೆ ಹೋಗಲು ವೈದ್ಯರ ತಂಡ ಸೂಚಿಸಿತ್ತು, ಆದ್ರೆ ಯಡಿಯೂರಪ್ಪ ಅವ್ರಿಗೆ ಸುಸ್ತು ಮುಂದುವರೆದಿರುವುದರಿಂದ ವಿಶ್ರಾಂತಿ ಅಗತ್ಯವಿದೆ ಅಂತ ಡಾ. ಪ್ರಮೋದ್ ಹೇಳಿದ್ದಾರೆ. ನೆಗಡಿ. ಜ್ವರ ಹಾಗೂ ರಕ್ತದೊತ್ತಡದಿಂದ ಬಳಲುತ್ತಿದ್ದ ಯಡಿಯೂರಪ್ಪ ಅವ್ರನ್ನು ಬುಧವಾರ ರಾತ್ರಿ ವೇಳೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹವಾಮಾನ

ಸೈನಿಕರೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ

ಉಪಸಂಪಾದಕ ಮಾಲೂರು ಜಿ.ಶಶಿಕುಮಾರ್ ಶೆಟ್ಟಿ ಪ್ರಧಾನಿ ಮೋದಿ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರಕ್ಕೆ ತೆರಳಿದ್ದು, ಅಲ್ಲಿಯೇ ಗಡಿಯಲ್ಲಿರುವ ಯೋಧರೊಂದಿಗೆ ದೀಪಾವಳಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಮೂಲಗಳ ಪ್ರಕಾರ ಮೋದಿ ಕಾಶ್ಮೀರದ ಗುರೇಜ್ ಸೆಕ್ಟರ್ ಗೆ ಭೇಟಿ ನೀಡಿದ್ದು, ಅಲ್ಲಿನ ಗಡಿ ನಿಯಂತ್ರಣ ರೇಖೆ ಎಲ್‍ಒಸಿಯಲ್ಲಿರುವ ಸೇನಾ ಕ್ಯಾಂಪ್ ಗೆ ಭೇಟಿ ನೀಡಿ ಯೋಧರಿಗೆ ದೀಪಾವಳಿ ಹಬ್ಬದ ಶುಭಕೋರಿದ್ದಾರೆ ಅಂತ ತಿಳಿದುಬಂದಿದೆ. ಅಂದಹಾಗೇ 2015ರಲ್ಲಿ ಪಂಜಾಬ್ ನಲ್ಲಿರುವ ಭಾರತ-ಪಾಕಿಸ್ತಾನದ ಗಡಿ ಪ್ರದೇಶಕ್ಕೆ ತೆರಳಿ ಮೋದಿ ದೀಪಾವಳಿ

ದೇಶದ ಜನತೆಗೆ ಶುಭಾಶಯ ಕೋರಿದ ರಾಷ್ಟ್ರಪತಿ,ಪ್ರಧಾನಿ ಮೋದಿ

ಉಪಸಂಪಾದಕ ಮಾಲೂರು ಜಿ.ಶಶಿಕುಮಾರ್ ಶೆಟ್ಟಿ ದೇಶದ್ಯಾಂಥ ಬೆಳಕಿನ ಹಬ್ಬ ದೀಪಾವಳಿಯನ್ನು ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವ್ರು ಸಮಸ್ತ ಜನತೆಗೆ ದೀಪಾವಳಿಯ ಶುಭಾಶಯಗಳನ್ನು ಕೋರಿದ್ದಾರೆ. ದೀಪಾವಳಿ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಶುಭಾಶಯ ಕೋರಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವ್ರು ಸಮಸ್ತ ಜನತೆಗೆ ದೀಪಾವಳಿಯ ಶುಭಾಶಯಗಳು ಅಂತ ಹೇಳಿದ್ದಾರೆ. ಇದರಂತೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವ್ರೂ ಕೂಡ ಟ್ವಿಟರ್ ನಲ್ಲಿ ಶುಭಾಶಯಗಳನ್ನು ಕೋರಿದ್ದು,